ಶುಕ್ರವಾರ, ಅಕ್ಟೋಬರ್ 30, 2020
27 °C
ಪೊಲೀಸರಿಂದ ಮೂರೂವರೆ ಗಂಟೆ ವಿಚಾರಣೆ

ಡ್ರಗ್ಸ್‌ ಪಾರ್ಟಿಗೂ ನನಗೂ ಸಂಬಂಧವಿಲ್ಲ: ಅನುಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತಂಡ ಶನಿವಾರ ಸತತ ಮೂರೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿತು.

ಬೆಳಿಗ್ಗೆಯೇ ಪಣಂಬೂರಿನ ಉತ್ತರ ವಲಯ ಎಸಿಪಿ ಕಚೇರಿಗೆ ಬಂದ ಅನುಶ್ರೀ ಅವರಿಗೆ, ಈಗಾಗಲೇ ಬಂಧನದಲ್ಲಿರುವ ಕಿಶೋರ್‌ ಮತ್ತು ತರುಣ್‌ ಜತೆಗಿನ ನಂಟಿನ ಕುರಿತು ಪ್ರಶ್ನಿಸಲಾಯಿತು. ಅವುಗಳಿಗೆ ಅನುಶ್ರೀ ವಿವರವಾದ ಉತ್ತರವನ್ನೇ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ತರುಣ್‌ ಮತ್ತು ಕಿಶೋರ್‌ 12 ವರ್ಷಗಳ ಹಿಂದೆ ನನಗೆ ಡ್ಯಾನ್ಸ್ ಕೊರಿಯೋಗ್ರಫರ್‌ ಆಗಿದ್ದರು. ಮೂರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ತರುಣ್‌ ರಾಜ್‌ ಅವರ ಡ್ಯಾನ್ಸ್ ಕ್ಲಾಸ್‌ ಉದ್ಘಾಟನೆಗೆ ಬಂದಿದ್ದೆ. ಅದನ್ನು ಬಿಟ್ಟು ಇಬ್ಬರೊಂದಿಗೂ ಯಾವುದೇ ಸಂಬಂಧವಿಲ್ಲ. ಡ್ರಗ್ಸ್‌ ಪಾರ್ಟಿ ನನಗೆ ಗೊತ್ತೇ ಇಲ್ಲ’ ಎಂಬ ಮಾಹಿತಿಯನ್ನು ಅನುಶ್ರೀ ನೀಡಿದ್ದಾರೆ.

ಮತ್ತೊಮ್ಮೆ ವಿಚಾರಣೆ ಸಾಧ್ಯತೆ: ಕಿಶೋರ್‌ ಶೆಟ್ಟಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ತರುಣ್‌ ರಾಜ್‌ನನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಮುಂದಿನ ವಿಚಾರಣೆಯಲ್ಲಿ ಬೆಳಕಿಗೆ ಬರುವ ಅಂಶಗಳನ್ನು ಆಧರಿಸಿ, ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನುಶ್ರೀ, ‘ನೋಟಿಸ್‌ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿದ್ದು, ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೂ ಹಾಜರಾಗುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು