‘ಜೀ ಕನ್ನಡ’ದಲ್ಲಿ ಅರ್ಜುನ್ ಜನ್ಯ

7

‘ಜೀ ಕನ್ನಡ’ದಲ್ಲಿ ಅರ್ಜುನ್ ಜನ್ಯ

Published:
Updated:
ಅರ್ಜುನ್ ಜನ್ಯ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ‘ಜೀ ಕನ್ನಡ’ ವಾಹಿನಿಯಲ್ಲಿ ಅವರ ‘ಅರ್ಜುನ್ ಜನ್ಯ ಲೈವ್ ಇನ್ ಕಾನ್ಸರ್ಟ್’ ಪ್ರಸಾರವಾಗಲಿದೆ.

‘ಅಂತರರಾಷ್ಟ್ರೀಯ ಮಟ್ಟದ ಅತ್ಯದ್ಭುತ ಸಂಗೀತ ಕಾರ್ಯಕ್ರಮವನ್ನು ಕನ್ನಡಿಗರ ಮುಂದೆ ತರುವ ಪ್ರಯತ್ನ’ ಇದು ಎಂದು ‘ಜೀ ಕನ್ನಡ’ ವಾಹಿನಿ ಹೇಳಿಕೊಂಡಿದೆ. ಈ ಕಾನ್ಸರ್ಟ್‌ ಮೈಸೂರಿನ ಸೈಲೆಂಟ್ ಶೋರ್ ರೆಸಾರ್ಟ್‌ನಲ್ಲಿ ಜೂನ್‌ 2ರಂದು ನಡೆದಿತ್ತು. ಇದು ಶನಿವಾರ ಮತ್ತು ಭಾನುವಾರ (ಜೂನ್‌ 30 ಮತ್ತು ಜುಲೈ 1) ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ವಿಜಯ್ ಪ್ರಕಾಶ್ ಹಾಗೂ ಅರ್ಮಾನ್‌ ಮಲ್ಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅರ್ಮಾನ್ ಅವರು ಕರ್ನಾಟಕದಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದು ಇದೇ ಮೊದಲು ಎಂದು ವಾಹಿನಿ ಹೇಳಿದೆ.

ಅರ್ಜುನ್ ಜನ್ಯ ಅವರು ಪಾಶ್ಚಾತ್ಯ ಹಾಗೂ ದೇಸಿ ಶೈಲಿಯನ್ನು ಸೇರಿಸಿ ಜುಗಲ್ಬಂದಿಯ ಸುಧೆ ಹರಿಸಿದರಂತೆ. ವಿಜಯ್ ಪ್ರಕಾಶ್ ಅವರು ಈ ವರ್ಷದ ಜನಪ್ರಿಯ ಹಾಡುಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿದರು. ಮಾದಕ ದನಿಯ ಅರ್ಮಾನ್ ತಮ್ಮ ಹಾಡಿನ ಮೂಲಕ ಯುವಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರಂತೆ!

ಇವರ ಜೊತೆಯಲ್ಲಿ ಖ್ಯಾತ ಗಾಯಕರಾದ ಅನುರಾಧಾ ಭಟ್, ವ್ಯಾಸರಾಜ್, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್, ಶಮಿತಾ ಮಲ್ನಾಡ್ ಕೂಡ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !