ಗುರುವಾರ , ಅಕ್ಟೋಬರ್ 17, 2019
28 °C

ಕಲರ್ಸ್ ಸೂಪರ್’ನಲ್ಲಿ ಹೊಸ ಧಾರಾವಾಹಿ 'ಭೂಮಿ ತಾಯಾಣೆ'

Published:
Updated:
Prajavani

ರಾಜ್‌ಕಿಶೋರ್‌ ನಿರ್ದೇಶನ, ವಿನೋದ್‌ ಆಳ್ವಾ ಮತ್ತು ಭವ್ಯ ಲೋಕೇಶ್‌ ನಟನೆಯ ‘ಭೂಮಿ ತಾಯಾಣೆ’ ಸಿನಿಮಾ 1988ರಲ್ಲಿ ತೆರೆಕಂಡಿತ್ತು. ಈಗ ಅದೇ ಹೆಸರಿನ ಹೊಸ ಧಾರಾವಾಹಿ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಇದೇ 14ರಿಂದ ಸಂಜೆ 7ಕ್ಕೆ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿದೆ. ಇದು ಹಳ್ಳಿ ಬದುಕಿನ ಕಥೆಯನ್ನು ಆಧರಿಸಿದ ಧಾರಾವಾಹಿ.

ಒಬ್ಬ ಹಳ್ಳಿ ಹುಡುಗಿಯ ಮುಗ್ಧತೆ, ಆಕೆಯ ಬದುಕಿನ ಏರಿಳಿತಗಳು, ಅವು ಕಥೆಯೊಂದಿಗೆ ಬೆಸೆದುಕೊಂಡ ರೀತಿ, ತನ್ನ ಅಕ್ಕರೆ ತುಂಬಿದ ಮನಸ್ಸಿನಲ್ಲೇ ಆಕೆ ಸಂಬಂಧಗಳನ್ನು ಕಾಯ್ದುಕೊಳ್ಳುವ ಕತೆಯೇ ‘ಭೂಮಿ ತಾಯಾಣೆ’ಯ ಹೂರಣ. ಕಲರ್ಸ್ ಸೂಪರ್ ವಾಹಿನಿಯ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿ ತಂಡದ ಎರಡನೇ ಕಾಣಿಕೆ ಇದು.

ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಹೊಸ ಪರಿಚಯವಾಗಿ ಅಶ್ವಿನಿ, ಅಭಿನವ್, ಶರತ್ ಜೊತೆಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹೆಸರಾದ ಅಶ್ವಿನಿ ಗೌಡ, ಮೈಕೋ ಮಂಜು, ಮಹಾಲಕ್ಷ್ಮಿ, ಶ್ವೇತಾ ಶ್ರೀನಿವಾಸ್, ಅಂಬರೀಶ್ ಸಾರಂಗಿ, ಸುಮಾ ಶಾಸ್ತ್ರಿ ಕಾಣಿಸಿಕೊಳ್ಳಲ್ಲಿದ್ದಾರೆ. 

ಮಂಡ್ಯ, ಪಾಂಡವಪುರ, ಚನ್ನಪಟ್ಟಣ, ಶ್ರೀರಂಗಪಟ್ಟಣ, ಚಿಕ್ಕಮಗಳೂರು, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಚಿತ್ರೀಕರಣ ಆಗಿದೆ. ಭೂಮಿ ತಾಯಾಣೆಯ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರಘುಚರಣ್ ತಿಪಟೂರು ನಿರ್ವಹಿಸಿತ್ತಿದ್ದು, ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ರಾಜಶ್ರೀ ಕ್ಯಾಂಪಜ್‌ನ ಬ್ಯಾನರ್‌ನಡಿ ಧಾರಾವಾಹಿಯ ನಿರ್ಮಾಣ ಪಿ.ಎಲ್. ಸೋಮಶೇಖರ ಅವರದ್ದು.

Post Comments (+)