ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕೇಶ್‌ ಗರ್ಲ್​ಫ್ರೆಂಡ್​ ಹುಡುಕಿಕೊಂಡಿದ್ದಾನೆ: ನಟಿ ನೇಹಾ ಮಾತಿಗೆ ಶಮಿತಾ ಶಾಕ್‌

Last Updated 11 ಜನವರಿ 2022, 11:33 IST
ಅಕ್ಷರ ಗಾತ್ರ

ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ ರಿಯಾಲಿಟಿ ಶೋ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದು ಕೊನೆಯ ಹಂತ ತಲುಪಿದೆ.

ಬಿಗ್‌ಬಾಸ್‌ ಮನೆಯಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಈ ಬಾರಿ ಪ್ರಬಲ ಸ್ಪರ್ಧಿಯಾಗಿದ್ದು ಅವರು ಸದ್ಯ ಕ್ಯಾಫ್ಟನ್‌ ಆಗಿದ್ದಾರೆ. ಶಮಿತಾ ಈ ಸಲ ಗೆಲ್ಲಲ್ಲಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆಗೆ ಬಂದಿದ್ದ ಶಮಿತಾ ಗೆಳತಿ ನೇಹಾ ಭಾಸಿನ್ ನೇರವಾಗಿವೇದಿಕೆಗೆ ಬಂದಿದ್ದರು. ಮನೆಯ ಸದಸ್ಯರು ಹಾಗೂ ಸಲ್ಲೂ ಬಾಯ್‌ ಜತೆ ಕೆಲ ಕಾಲ ಹರಟೆ ಹೊಡೆದಿದ್ದರು.

ಈ ನಡುವೆ ಶಮಿತಾಗೆ ಶಾಕ್​ ನೀಡಿದ ಭಾಸಿನ್‌, ರಾಕೇಶ್ ಕೂಡ ನಿನ್ನ ಬಗ್ಗೆ ಕೇಳುತ್ತಿರುತ್ತಾರೆ, ಈ ಮಧ್ಯೆ ಅವರು ಹೊಸ ಗರ್ಲ್​ಫ್ರೆಂಡ್​ ಹುಡುಕಿಕೊಂಡಿದ್ದಾರೆ ಎಂದು ಶಮಿತಾಗೆ ಹೇಳಿದರು. ಈ ವಿಚಾರ ಕೇಳಿ ಶಮಿತಾ ಒಂದು ಕ್ಷಣ ಶಾಕ್​ ಆದರು. ತಕ್ಷಣವೆ ನಾನು ತಮಾಷೆಗೆ ಹೇಳಿದ್ದು ಎಂದು ಭಾಸಿನ್‌ ನಕ್ಕರು.

ತಕ್ಷಣ ಪ್ರತಿಕ್ರಿಯಿಸಿದ ಶಮಿತಾ ’ಹೊ, ದಯವಿಟ್ಟು ಹೃದಯಾಘಾತ​ ಮಾಡಿಸಬೇಡ’ ಎಂದರು. ಆಗ ಸಲ್ಮಾನ್​ ಖಾನ್​ ಕೂಡ ನಕ್ಕರು.

ಶಮಿತಾ ಹಾಗೂ ರಾಕೇಶ್​, ನಿರ್ದೇಶಕಕರಣ್‌ ಜೋಹರ್‌ ನಡೆಸಿಕೊಟ್ಟ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಭಾಗವಹಿಸಿದ್ದರು. ಮನೆಯಲ್ಲಿ ಇಬ್ಬರ ಗೆಳೆತನಪ್ರೀತಿಗೆ ತಿರುಗಿತ್ತು. ನಂತರಪ್ರೀತಿಯಲ್ಲಿಇರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು.

ಬಿಗ್​ ಬಾಸ್​ 15ನೇ ಆವೃತ್ತಿಗೆ ಶಮಿತಾ ಮೊದಲು ಮನೆ ಒಳಗೆ ಬಂದರೇ, ವೈಲ್ಡ್​ ಕಾರ್ಡ್​ ಮೂಲಕ ರಾಕೇಶ್​ ಬಂದಿದ್ದರು. ಆದರೆ ಅವರು ಮನೆಯಲ್ಲಿ ಬಹಳ ದಿನ ಉಳಿಯದೇ ಎಲಿಮಿನೇಟ್‌ ಆದರು.

ಜನವರಿ ಕೊನೆ ವಾರದಲ್ಲಿ ಈ ರಿಯಾಲಿಟಿ ಶೋ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT