ಗುರುವಾರ , ಅಕ್ಟೋಬರ್ 6, 2022
25 °C

Bigg Boss 8: ಛಲ ಬಿಡದೆ ಗೆದ್ದು ನಾಯಕಿಯಾದ ದಿವ್ಯಾ ಸುರೇಶ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ಮತ್ತೊಬ್ಬ ಮಹಿಳಾ ಸ್ಪರ್ಧಿ ಮನೆಯ ನಾಯಕಿಯಾಗಿದ್ದಾರೆ. ದಿವ್ಯಾ ಉರುಡುಗ ಬಳಿಕ ದಿವ್ಯಾ ಸುರೇಶ್ ಈಗ ಮನೆಯ ಚುಕ್ಕಾಣಿ ಹಿಡಿದಿದ್ದಾರೆ.

ಹೌದು, ಬಹುತೇಕ ಕ್ಯಾಪ್ಟನ್ಸಿ ಕಂಟೆಂಡರ್ ಟಾಸ್ಕ್‌ಗಳಲ್ಲಿ ಅಂತಿಮ ಹಂತದವರೆಗೂ ಬಂದು ನಾಯಕಿಯ ಪಟ್ಟಕ್ಕೇರುವಲ್ಲಿ ವಿಫಲವಾಗುತ್ತಿದ್ದ ಮನೆಯ ಟಾಪ್ ಕಂಟೆಂಡರ್ ದಿವ್ಯಾ ಸುರೇಶ್ ಈ ವಾರ ಭರ್ಜರಿ ಪ್ರದರ್ಶನ ನೀಡುವ ಮೂಲಕ ನಾಯಕಿಯಾಗಿದ್ದಾರೆ.

ಸೋಪ್ ಪೌಡರ್ ಬಳಸಿ ಬಟ್ಟೆ ಒಗೆಯುವ ಟಾಸ್ಕ್‌ನಲ್ಲಿ ಮಂಜು ಪಾವಗಡ ಅವರ ನಿಂಗೈತೆ ಇರು ತಂಡ ಗೆದ್ದು, ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹತೆ ಪಡೆಯಿತು. ಇಲ್ಲಿ, ಹಣೆ ಮೇಲೆ ಒಂದರ ಮೇಲೊಂದು 18 ನಾಣ್ಯಗಳನ್ನು ಜೋಡಿಸಿಕೊಂಡು 5 ಸೆಕೆಂಡ್ ಎಣಿಸುವ ಟಾಸ್ಕ್ ಇತ್ತು. ಎಂದಿನಂತೆ ತಾಳ್ಮೆಯ ಆಟವಾಡಿದ ದಿವ್ಯಾ ಸುರೇಶ್ ಟಾಸ್ಕ್ ಗೆದ್ದು ಈ ವಾರದ ಕ್ಯಾಪ್ಟನ್ ಆದರು. ಪೈಪೋಟಿ ನೀಡಿದ ದಿವ್ಯಾ ಉರುಡುಗ ಎರಡು ನಾಣ್ಯಗಳಿಂದ ಹಿಂದೆ ಉಳಿದರು.

ಬಹುದಿನಗಳ ಬಯಕೆ ಈಡೇರಿತು: ಬಿಗ್ ಬಾಸ್ ಫೈನಲ್‌ಗೆ ಹೋಗದಿದ್ದರೂ ಪರವಾಗಿಲ್ಲ. ಆದರೆ, ಒಮ್ಮೆಯಾದರೂ ಮನೆಯ ಕ್ಯಾಪ್ಟನ್ ಆಗಬೇಕೆಂಬ ದಿವ್ಯಾ ಸುರೇಶ್ ಬಯಕೆ ಈಡೇರಿದೆ. ಹಲವು ಬಾರಿ ಟಾಸ್ಕ್‌ಗಳಲ್ಲಿ ಮಂಜು, ಅರವಿಂದ್ ಅವರನ್ನು ಸೋಲಿಸಿರುವ ದಿವ್ಯಾ ಸುರೇಶ್ ನಾನೂ ಸಹ ಟಾಪ್ ಕಂಟೆಂಡರ್ ಎಂಬುದನ್ನು ಸಾಬೀತುಪಡಿಸಿದ್ದರು. ಆದರೆ, ಕ್ಯಾಪ್ಟನ್ಸಿ ಮಾತ್ರ ಒಲಿದಿರಲಿಲ್ಲ. ಈ ವಾರ ಆ ಬಯಕೆಯೂ ಈಡೇರಿದೆ. ಛಲ ಬಿಡದೆ ನಡೆಸಿದ ಪ್ರಯತ್ನ ಫಲ ನೀಡಿದೆ.

ಕ್ಯಾಪ್ಟನ್ಸಿ ಟಾಸ್ಕ್‌ಗೂ ಮುನ್ನ ಕನ್ನಡಿ ಮುಂದೆ ನಿಂತು ಬಿಗ್ ಬಾಸ್ ದಿವ್ಯಾ ಸುರೇಶ್ ಈ ವಾರದ ಕ್ಯಾಪ್ಟನ್ ಎಂದು ಘೋಷಿಸಿ ಎಂದು ದಿವ್ಯಾ ಸುರೇಶ್ ಕನವರಿಸುತ್ತಿದ್ದರು. ಕಾಕತಾಳಿಯವೆಂಬಂತೆ ನಂತರ ನಡೆದ ಟಾಸ್ಕ್‌ನಲ್ಲಿ ಅವರೇ ಗೆದ್ದು ನಾಯಕಿಯಾಗಿದ್ದಾರೆ.

ಇದನ್ನೂ ಒದಿ.. ‘ಜೊತೆ ಜೊತೆಯಲಿ’ ಧಾರಾವಾಹಿ ಬಿಡುವ ಸುದ್ದಿಗಳ ಬಗ್ಗೆ ‘ಅನು ಸಿರಿಮನೆ’ ಸ್ಪಷ್ಟನೆ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು