ಗುಂಡಮ್ಮಳ ಡಾನ್ಸ್‌ ಜರ್ನಿ

7

ಗುಂಡಮ್ಮಳ ಡಾನ್ಸ್‌ ಜರ್ನಿ

Published:
Updated:
ಗುಂಡಮ್ಮ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಬ್ರಹ್ಮಗಂಟು’. ಇದರಲ್ಲಿ ಈಗ ಗುಂಡಮ್ಮಳ ಡಾನ್ಸ್ ಅಧ್ಯಾಯ ಆರಂಭವಾಗಿದೆ.

ಧಾರಾವಾಹಿಯ ಕಥೆಯಾಗಿ ಧಾರಾವಾಹಿಯಲ್ಲಿಯೇ ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧೆ ನಡೆಯುತ್ತಿದೆ. ನಟ ವಿಜಯ್‌ರಾಘವೇಂದ್ರ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಧಾರಾವಾಹಿಯಲ್ಲಿಯೂ ಸ್ಪರ್ಧೆಯ ತೀರ್ಪುಗಾರರಾಗಿದ್ದು, ಡಿಕೆಡಿ ವೇದಿಕೆಯಲ್ಲಿಯೇ ಸ್ಪರ್ಧೆಯ ಚಿತ್ರೀಕರಣ ನಡೆದಿದೆ.

ಗುಂಡಮ್ಮ ಡಾನ್ಸ್‌ನಲ್ಲಿ ಭಾಗಿಯಾಗಲು ಪ್ರಮುಖ ಕಾರಣ ಕಥೆಯ ನಾಯಕ ಲಕ್ಕಿ. ‘ಜೀವನದಲ್ಲಿ ಏನಾದ್ರು ಸಾಧನೆ ಮಾಡು’ ಎಂದು ಸವಾಲು ಹಾಕುವ ಲಕ್ಕಿಯ ಪ್ರವೃತಿಯೇ ಆಕೆ ಸ್ಪರ್ಧೆಗೆ ಹೆಜ್ಜೆ ಇಡಲು ಕಾರಣ. ಆಕೆ ಎಲ್ಲದರಲ್ಲಿಯೂ ಯಶಸ್ವಿಯಾಗಬೇಕು ಎಂಬುದು ಅಪ್ಪನ ಆಸೆಯೂ ಆಗಿತ್ತು. ಅಪ್ಪ ಸತ್ತ ಬಳಿಕ ಅವರ ಆಸೆ ಮಣ್ಣಾಗಿತ್ತು.

‘ಲಕ್ಕಿಯಿಂದ ಪ್ರೀತಿ ಪಡೆದರೆ ಸಾಕಾಗಲ್ಲ, ಗೌರವವನ್ನೂ ಗಳಿಸಬೇಕು. ನಿನ್ನ ಕೈಯಲ್ಲಿ ಏನಾದ್ರು ಮಾಡಕಾಗುತ್ತೆ ಅಂತ ಸಾಬೀತು ಮಾಡು’ ಎಂದು ಪುಟ್ಟತ್ತೆಯೂ ಗುಂಡಮ್ಮಳಿಗೂ ಹೇಳಿದ್ದರು. ಹಾಗಾಗಿ, ಗುಂಡಮ್ಮ ಡಾ‌ನ್ಸ್ ವೇದಿಕೆಗೆ ಬಂದಿದ್ದಾಳೆ.

ಈಗಾಗಲೇ, ಧಾರಾವಾಹಿಯಲ್ಲಿ ಡಾನ್ಸ್ ಅಧ್ಯಾಯ ಪ್ರಸಾರವಾಗುತ್ತಿದೆ. ಒಂದೂವರೆ ತಿಂಗಳ ಕಾಲ ಗುಂಡಮ್ಮಳ ಡಾನ್ಸ್ ಜರ್ನಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಆಕೆ ಗೆದ್ದು ಲಕ್ಕಿ ಮನಸ್ಸಿನಲ್ಲಿ ಗೌರವ ಮೂಡುವಂತೆ ಮಾಡುತ್ತಾಳೋ ಅಥವಾ ಸೋತು ಮತ್ತೆ ಅವಮಾನಕ್ಕೆ ಗುರಿಯಾಗುತ್ತಾಳೋ ಎಂಬುದು ಕುತೂಹಲ. 

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10 ಗಂಟೆಗೆ ‘ಬ್ರಹ್ಮಗಂಟು’ ಪ್ರಸಾರವಾಗಲಿದೆ. ಇದರ ನಿರ್ದೇಶಕಿ ಶ್ರುತಿ ನಾಯ್ಡು. ಅವರೇ ಬಂಡವಾಳ ಕೂಡ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !