ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮ, ಬದ್ಧತೆ ಫಿಟ್‌ನೆಸ್‌ ಗುಟ್ಟು

Last Updated 20 ಜನವರಿ 2019, 19:30 IST
ಅಕ್ಷರ ಗಾತ್ರ

* ಬಾಡಿ ಬಿಲ್ಡರ್‌ ಪೈಲ್ವಾನ್‌ ಆದದ್ದು ಹೇಗೆ?
ಕಾಲೇಜು ದಿನಗಳಲ್ಲಿ ನಾನು ಬಾಡಿ ಬಿಲ್ಡಿಂಗ್‌ ಬಗ್ಗೆ ಕಲಿತಿದ್ದೆ. ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೆ. ಅದಾದ ನಂತರ ಧಾರವಾಹಿಯಲ್ಲಿ ನನಗೆ ಅವಕಾಶ ಸಿಕ್ಕಿತು. ಇದು ಹಳ್ಳಿ ಸೊಗಡಿನ ಪಾತ್ರ. ಕಟ್ಟುಮಸ್ತಾದ ದೇಹ, ಗರಡಿಮನೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ.ಇದರಲ್ಲಿ ನಾನೊಬ್ಬ ರೈತ ಹಾಗೂ ಪೈಲ್ವಾನನು ಆಗಿರುವುದರಿಂದ ಬೇರೆ ಪಾತ್ರಗಳಿಗಿಂತ ಇದು ಭಿನ್ನವಾಗಿದೆ. ಇದಕ್ಕಾಗಿ ಹೆಚ್ಚಿನ ತಯಾರಿ ನಡೆಸಿದ್ದೇನೆ. ಈ ಮೊದಲು ಸಿಕ್ಸ್‌ ಪ್ಯಾಕ್‌ ಎಲ್ಲವನ್ನು ಮಾಡುತ್ತಿದ್ದೆ. ಆದರೆ ಪೈಲ್ವಾನ್‌ ಪಾತ್ರದಲ್ಲಿ ಸಿಕ್ಸ್‌ ಪ್ಯಾಕ್‌ ಎಲ್ಲ ಇರುವಂತಿಲ್ಲ. ಬಾಡಿ ಬಿಲ್ಡಿಂಗ್‌ ಮತ್ತು ಪೈಲ್ವಾನ್‌ ಇಬ್ಬರ ಶಕ್ತಿ ಒಂದೇ ಇರುತ್ತದೆ. ಆದರೆ ಪೈಲ್ವಾನ ಎಂದರೆ ಗರಡಿ ಮನೆಯಲ್ಲಿ ಕಲಿಯುವ ಪಟ್ಟುಗಳು ತಿಳಿದಿರಬೇಕು. ಚೆನ್ನಾಗಿ ತಿನ್ನಬೇಕು ಇದೆಲ್ಲವೂ ಇದೆ.

* ದಿನನಿತ್ಯದ ವರ್ಕ್‌ಔಟ್‌ ಹೇಗಿರುತ್ತದೆ?
ಪ್ರತಿದಿನ ಎರಡುವರೆ ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತೇನೆ. ಮೊದಲ ಒಂದು ಗಂಟೆ ಓಡುವುದು, ಆಟ, ಹರ್ಡಲ್ಸ್‌ಗೆ ಮೀಸಲು ನಂತರ ಜಿಮ್‌ನಲ್ಲಿ ಕಸರತ್ತು ನಡೆಸುತ್ತೇನೆ.

ಪೈಲ್ವಾನ್‌ ಪಾತ್ರಕ್ಕಾಗಿ ಗರಡಿಮನೆ ತರಬೇತುದಾರರಿಂದ ತರಬೇತಿ ಪಡೆದಿದ್ದೇನೆ. ನನಗೂ ಮೊದಲ ಬಾಡಿ ಬಿಲ್ಡಿಂಗ್‌ ಬಗ್ಗೆ ಆಸಕ್ತಿ ಇದಿದ್ದರಿಂದ ಅಷ್ಟೇನು ಕಷ್ಟ ಎನಿಸಿಲ್ಲ.ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ಸ್‌ಗಳು ಚಿತ್ರೀಕರಣ ಸಮಯದಲ್ಲಿ ತರಬೇತಿ ನೀಡುತ್ತಾರೆ. ಉಳಿದಂತೆ ಚಿಕ್ಕಪುಟ್ಟ ಫೈಟಿಂಗ್‌ ದೃಶ್ಯಗಳಿಗಾಗಿ ನಾನೇ ಸಿದ್ಧನಾಗುತ್ತೇನೆ.

* ಪ್ರತಿದಿನ ಆಹಾರ ಪದ್ಧತಿ ಹೇಗಿರುತ್ತದೆ?
ಅಂದಿಗೂ ಇಂದಿಗೂ ಸಂಪೂರ್ಣ ಬದಲಾವಣೆ ಇದೆ. ಈ ಮೊದಲು ಬಾಡಿ ಬಿಲ್ಡಿಂಗ್‌ ಮಾಡುವಾಗ ದಿನಕ್ಕೆ 2 ಕೆ.ಜಿ.ಚಿಕನ್‌, 30 ಮೊಟ್ಟೆ, 1 ಕೆ.ಜಿ. ಹಣ್ಣು 1 ಕೆ.ಜಿ. ತರಕಾರಿ ತಿನ್ನುತ್ತಿದ್ದೆ. ಇದು ಅಂದಿನ ಅಗತ್ಯವಾಗಿತ್ತು. ಅದರಲ್ಲಿಯೂ ಉಪ್ಪು, ಕಾರ ಕಡಿಮೆ ಇರುವಂತಹ ಆಹಾರ ಸೇವನೆಗೆ ಪ್ರಾಮುಖ್ಯತೆ ಕೊಡುತ್ತಿದ್ದೆ.

ಆದರೆ ಇಂದು ನಾನು ಮಾಡುತ್ತಿರುವ ಪಾತ್ರಕ್ಕೆ ತಕ್ಕಂತೆ ನನ್ನ ಆಹಾರ ವೈವಿಧ್ಯತೆಯೂ ಇದೆ. ಏನು ಬೇಕಾದರೂ ತಿನ್ನಬಹುದು. ಕೊಬ್ಬಿನ ಅಂಶವಿರುವ ಆಹಾರಕ್ಕೆ ಮೊದಲ ಆಧ್ಯತೆ. ಎಲ್ಲರೂ ತಿನ್ನುವಂತೆ ನನಗಿಷ್ಟ ಬಂದದ್ದನ್ನು ತಿನ್ನುತ್ತೇನೆ. ಮೊದಲು ಸಿಹಿ ತಿನ್ನುವಂತಿರಲಿಲ್ಲ. ಈಗ ಇವೆಲ್ಲವೂ ಅಗತ್ಯವಾಗಿದೆ.

* ಶೂಟಿಂಗ್‌ ಮತ್ತು ವ್ಯಾಯಾಮದ ನಡುವೆ ಸಮಯ ನಿರ್ವಹಣೆ ಹೇಗೆ ಮಾಡಿಕೊಳ್ಳುವಿರಿ?
ಇವೆರಡು ನನ್ನ ಜೀವನದ ಪ್ರಮುಖ ಭಾಗಗಳು. ಇವೆರಡರಲ್ಲೂ ರಾಜಿ ಸಂಧಾನದ ಮಾತೇ ಇರುವುದಿಲ್ಲ. ನಿದ್ದೆಗೆ ಸ್ಪಲ್ಪ ಬ್ರೇಕ್‌ ಕೊಟ್ಟು ಸಮಯ ನಿರ್ವಹಣೆ ಮಾಡಿಕೊಳ್ಳುತ್ತೇನೆ. ಕೆಲಸಗಳ ಒತ್ತಡದಿಂದಾಗಿ ವ್ಯಾಯಾಮಕ್ಕೆ ಸಮಯ ಕೊಡಲು ಆಗುವುದಿಲ್ಲ. ಅಂತಹ ಸಮಯದಲ್ಲಿ ವ್ಯಾಯಾಮಕ್ಕೆ ವಿರಾಮ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT