ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಟಿ ಶೋ’ ಫಿನಾಲೆ ಹಂತ ತಲುಪಿದ್ದು, ಸಿದ್ದೇಗೌಡ - ದೀಶಲ್ ಜೋಡಿ ‘ಟಿಕೆಟ್ ಟು ಫಿನಾಲೆ‘ ಪಡೆದು ನೇರವಾಗಿ ಫಿನಾಲೆ ರೌಂಡ್ಗೆ ಆಯ್ಕೆಯಾಗಿದ್ದಾರೆ.

ನೃತ್ಯದ ಮೂಲಕ ಗಮನ ಸೆಳೆದಿದ್ದ ಸಿದ್ದೇಗೌಡ - ದೀಶಲ್ ಜೋಡಿಗೆ ತೀರ್ಪುಗಾರರಾದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಫಿನಾಲೆ ಟಿಕೆಟ್ ನೀಡಿದ್ದಾರೆ.
.ರಣವೀರ್ ಸಿಂಗ್ ನಟನೆಯ ‘ಧುರಂಧರ್–2’ ಇಂದಿನಿಂದ ಕನ್ನಡದಲ್ಲಿ ಬಿಡುಗಡೆ.ಗಾಜನೂರಿನಲ್ಲಿ ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣನ ಆತಿಥ್ಯ ಸತ್ಕಾರ.
ಫಿನಾಲೆ ಟಿಕೆಟ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಸಿದ್ದೇಗೌಡ (ಧನಂಜಯ) ಅವರು, ‘ಇವತ್ತು ತುಂಬಾ ವಿಶೇಷ ದಿನ. ನಮ್ಮ ಚಿತ್ರರಂಗದಲ್ಲಿ ಅಪ್ಪು ಸರ್ ಅಂದ್ರೆ ಡ್ಯಾನ್ಸ್.. ಡ್ಯಾನ್ಸ್ ಅಂದ್ರೆ ಅಪ್ಪು ಸರ್. ಇವತ್ತು ಡ್ಯಾನ್ಸ್ ಗೆದ್ದಿದ್ದೆ ಜೊತೆಗೆ ನಾವು ಗೆದ್ದಿದ್ದೇವೆ. ನಿಮ್ಮೆಲ್ಲರ ಆಶೀರ್ವಾದಿಂದ ಹಾಗೂ ಕೊರಿಯೋಗ್ರಾಫರ್ ರುದ್ರ ಮಾಸ್ಟರ್ ಸಹಕಾರದಿಂದ ನಮಗೆ ಈ ಟಿಕೆಟ್ ಸಿಕ್ಕಿದೆ. ನಮ್ಮ ಅಮ್ಮನ ಕನಸು ಕೊನೆಗೂ ಈಡೇರಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಟು ಫಿನಾಲೆ ಅನುಭವ ಹಂಚಿಕೊಂಡ ದೀಶಲ್ ಅವರು, ‘ ಈ ಕ್ಷಣ ತುಂಬಾ ಖುಷಿ ನೀಡಿದೆ. ಇದೇ ವೇದಿಕೆಯಲ್ಲಿ ಹಿನ್ನೆಲೆ ವೇದಿಕೆ ನೃತ್ಯಗಾರನಾಗಿ ಕೆಲಸ ಮಾಡುತ್ತಿದ್ದೆ. ಈಗ ನೃತ್ಯದ ಮೂಲಕ ಗಮನಸೆಳೆದು ಫಿನಾಲೆ ಟಿಕೆಟ್ ಪಡೆದುಕೊಂಡಿರುವುದಕ್ಕೆ ಹೆಮ್ಮೆ ಇದೆ. ನನಗೆ ಸಹಕರಿಸಿದ ನನ್ನ ತಂಡದವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ.

ನಿರೂಪಕಿ ಅನುಶ್ರೀ ಅವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಚಿತಾ ರಾಮ್ ಅವರು ತೀರ್ಪುಗಾರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.