ಕಿರುತೆರೆ ಲೋಕದಲ್ಲಿ ಈಗ ಧಾರಾವಾಹಿಗಳದ್ದೇ ಕಾರುಬಾರು. ಹಲವು ಕಥೆಗಳು, ವಿಭಿನ್ನ ಪಾತ್ರಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ತಮ್ಮದೇ ಮನೆಯ ಕಥೆ ಎನ್ನುವಂತೆ ಕನ್ನಡಿಗರು ಅಪ್ಪಿಕೊಂಡಿರುವ ಧಾರಾವಾಹಿಗಳ ಸಾಲಿನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ಗಂಧದಗುಡಿ’ ಕೂಡ ಸೇರಿದೆ.

ಹೆಣ್ಣು ದಿಕ್ಕೇ ಇಲ್ಲದ, ಗಂಡು ಮಕ್ಕಳಷ್ಟೇ ಇರುವ ಮನೆಗೆ ಸೊಸೆಯಾಗಿ ಬರುವ ಚಂದನಾ ಹೇಗೆ ಮನೆಯ ನಂದಾ ದೀಪವಾಗುತ್ತಾಳೆ, ಹೇಗೆ ಎಲ್ಲರನ್ನೂ ಸ್ವಂತದವರಂತೆ ನೋಡುತ್ತಾಳೆ ಎನ್ನುವ ಕಥಾ ಹಂದರ ಶ್ರೀ ಗಂಧದಗುಡಿ ಧಾರಾವಾಹಿಯದ್ದು. ಈ ಕಥೆಯ ಮುಖ್ಯ ಪಾತ್ರದಾರಿ ಚಂದನಾ. ಚಂದನಾ ಪಾತ್ರಕ್ಕೆ ಜೀವ ತುಂಬಿದವರು ಸ್ನೇಹಾ ಮಂಜುನಾಥ್.

ಹಾವೇರಿ ಜಿಲ್ಲೆಯ ಹಿರೇಕೆರೂರು ಮೂಲದ ಸ್ನೇಹಾ, ಬೆಳೆದಿದ್ದು ಅವರ ಅಜ್ಜಿಯ ಊರು ರಟ್ಟಿಹಳ್ಳಿಯಲ್ಲಿ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶ್ರೀ ಗಂಧದಗುಡಿಯಲ್ಲಿ ಪಾತ್ರ ಹೇಗಿದೆ, ನಟನಾ ಕ್ಷೇತ್ರದ ಅನುಭವದ ಬಗ್ಗೆ ‘ಪ್ರಜಾವಾಣಿ ಡಿಜಿಟಲ್’ ಜತೆಗೆ ಸ್ನೇಹಾ ಮಂಜುನಾಥ್ ಮಾತನಾಡಿದ್ದಾರೆ.

‘ನನ್ನ ನೈಜ ವ್ಯಕ್ತಿತ್ವಕ್ಕೂ ಚಂದನಾ ಪಾತ್ರಕ್ಕೂ ಅಜಗಜಾಂತರವಿದೆ. ಚಂದನಾ ಮೃದು ಸ್ವಭಾವದ ಹುಡುಗಿ, ಆದರೆ ನಾನು ನಿಜವಾಗಿಯೂ ಅದರ ತದ್ವಿರುದ್ಧವಾಗಿದ್ದೇನೆ. ಚಂದನಾ ಪಾತ್ರದಲ್ಲಿದ್ದವರ ನಟನೆಗೆ ಜನ ಒಗ್ಗಿಕೊಂಡಿದ್ದರು. ಹೊಸದಾಗಿ ನಾನು ಬಂದಾಗ ಆ ಪಾತ್ರವನ್ನು ಮುಂದುವರಿಸಿಕೊಂಡು ಹೋಗಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಆರಂಭದಲ್ಲಿ ಈ ಬಗ್ಗೆ ತುಂಬಾ ಭಯವೂ ಕಾಡಿತ್ತು. ಜನರು ಹೇಗೆ ಸ್ವೀಕರಿಸುತ್ತಾರೋ, ನೆಗೆಟಿವ್ ಕಮೆಂಟ್ಗಳು ಬರುವುದೋ ಎನ್ನುವ ಆತಂಕವಿತ್ತು. ಆದರೆ ವೀಕ್ಷಕರು ನನ್ನನ್ನು ಒಪ್ಪಿಕೊಂಡಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ ಅದಕ್ಕೆ ಖುಷಿಯಿದೆ. ಅಂದು ಚಂದನಾ ಪಾತ್ರಕ್ಕೆ ಒಪ್ಪಿಕೊಂಡಿದ್ದು ಸರಿ ಎನ್ನುವ ಭಾವನೆಯಿದೆ.

ಪ್ರತಿ ಹೆಣ್ಣು ಮದುವೆಯಾಗಿ ಹೋದಾಗ ಹೊಂದಿಕೊಳ್ಳುವುದು ಅವಳಿಗೆ ತುಸು ಕಷ್ಟ. ಗಂಡನ ಮನೆಯವರ ಪರಿಸರದ ಬಗ್ಗೆ, ಅಲ್ಲಿಯ ಜನರ ಬಗ್ಗೆ ಗಂಧಗಾಳಿಯೂ ಗೊತ್ತಿರದ ಕಾರಣ ಮದುವೆಯ ಬಳಿಕದ ಜೀವನ ಸವಾಲೇ ಆಗಿರುತ್ತದೆ. ನನ್ನ ಪಾತ್ರದಲ್ಲಿಯೂ ಅದೇ ಇರುವುದು. ಒಂದು ವಿಭಿನ್ನತೆ ಎಂದರೆ ಹೆಣ್ಣುಮಕ್ಕಳೇ ಇಲ್ಲದ ಮನೆಗೆ ಚಂದನಾ ಸೊಸೆಯಾಗಿ ಬಂದಿರುತ್ತಾಳೆ. ಹೀಗಾಗಿ ಎಲ್ಲವನ್ನೂ ನಿಭಾಯಿಸುವುದು ಆರಂಭದಲ್ಲಿ ಕಷ್ಟವಾಗಿರುತ್ತದೆ. ಆದರೂ ಸಣ್ಣದೊಂದು ನಂಬಿಕೆ ಬೆಳೆದ ಮೇಲೆ ಆಕೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಾಳೆ. ಆಕೆಗೂ ಬೇರೆ ದಾರಿ ಇರದಿರುವುದೂ ಹೊಂದಿಕೊಳ್ಳುವುದಕ್ಕೆ ಒಂದು ಕಾರಣವಾಗುತ್ತದೆ.

ಮದುವೆಯಾಗಿ ನೆಲೆಕಂಡುಕೊಳ್ಳಬೇಕು ಎನ್ನುವುದು ಅನೇಕ ಹೆಣ್ಣುಮಕ್ಕಳ ಭಾವನೆ. ಆದರೆ ಇನ್ನೂ ಕೆಲವರದ್ದು ತಾನೂ ಏನಾದರೊಂದು ಸಾಧನೆ ಮಾಡಬೇಕು, ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕು ಎನ್ನುವ ಕನಸಿರುತ್ತದೆ. ಅಂತಹ ಕನಸು ಚಂದನಾಳದ್ದು. ಚಂದನಾ ಪಾತ್ರದಿಂದ ಹಿಡಿದು ನಮ್ಮ ಧಾರಾವಾಹಿಯಲ್ಲಿ ಇರುವ ಎಲ್ಲಾ ಪಾತ್ರಗಳೂ ಒಬ್ಬರಲ್ಲ ಒಬ್ಬರ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ಹೀಗಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆಯಿದೆ.

ಶಿಶಿರ್ ಅವರು ಕುಲವಧು ಧಾರಾವಾಹಿ ಮಾಡುವಾಗ ನಾನಿನ್ನೂ ಚಿಕ್ಕಹುಡುಗಿಯಾಗಿದ್ದೆ. ಅವರ ಧಾರಾವಾಹಿ ನೋಡುವುದೇ ಒಂದು ಖುಷಿಯಾಗಿತ್ತು. ಈಗ ಅವರೆದುರು ನಿಂತು, ಅವರೊಂದಿಗೇ ನಟಿಸಬೇಕೆಂದಾಗ ಸಣ್ಣ ಭಯವಿತ್ತು. ಆದರೆ ಮೊದಲ ದಿನದ ಚಿತ್ರೀಕರಣದಲ್ಲೇ ಆರಾಮದ ಅನುಭವ ನೀಡಿದ್ದರು. ಕಳೆದ 2,3 ತಿಂಗಳಿನಿಂದ ‘ಶ್ರೀ ಗಂಧದಗುಡಿ’ಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಸಬಳು ಎನ್ನುವಂತೆ ಯಾರೂ ನೋಡಿಲ್ಲ. ಹೀಗಾಗಿ ವರ್ಷಗಳಿಂದ ಅವರ ಜೊತೆ ನಟಿಸುತ್ತಿದ್ದೇನೆ ಎನ್ನುವ ಭಾವವಿದೆ.

ಚಿಕ್ಕಂದಿನಲ್ಲಿ ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದೆ. ನಂತರ ಬೆಂಗಳೂರಿಗೆ ಬಂದ ಮೇಲೆ ಕೆಲಸದ ಜೊತೆಗೆ ಆಡಿಷನ್ ನೀಡುತ್ತಿದ್ದೆ. 2019ರಲ್ಲಿ ನಟನೆಯತ್ತ ಸಾಗಲೇಬೇಕು ಎನ್ನುವ ತುಡಿತ ಕಾಡಿತ್ತು. ಅಲ್ಲಿಂದ ಒಂದಲ್ಲ ಒಂದು ಆಡಿಷನ್ ಕೊಡುತ್ತಲೇ ಇದ್ದೆ. ಕನ್ನಡದಲ್ಲಿ ‘ಮಾರಾಯ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದೆ. ಒಂದಷ್ಟು ಆಲ್ಬಂ ಸಾಂಗ್ಗಳಲ್ಲೂ ನಟಿಸಿದ್ದೇನೆ. ಈಗ ಶ್ರೀ ಗಂಧದಗುಡಿಯಲ್ಲಿ ‘ಚಂದನಾ’ ಪಾತ್ರ ನಿರ್ವಹಿಸುತ್ತಿದ್ದೇನೆ. ಒಂದಷ್ಟು ಜನರ ಪ್ರೀತಿ ಗಳಿಸಿದ್ದೇನೆ ಎನ್ನುವುದಕ್ಕೆ ಸಂತಸವಿದೆ’.
.ಹೊಸ ಕಥೆ, ಹೊಸ ಪಾತ್ರ ಎಂದರೆ ದೊಡ್ಡ ಜವಾಬ್ದಾರಿ: ಶಮಂತ್ ಗೌಡ ಮನದ ಮಾತು.‘ಅಗ್ನಿಸಾಕ್ಷಿ’ ಹಳೆಯ ಧಾರಾವಾಹಿಯ ಮುಂದುವರಿದ ಭಾಗವೇ? ನಟಿ ವರ್ಷಿಣಿ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.