ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗೌರಿ ಕಲ್ಯಾಣ’ ಧಾರಾವಾಹಿಯು ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.

ಮಧ್ಯಮ ವರ್ಗದ ಕಾಂತಲಕ್ಷ್ಮಿಗೆ ಮೂವರು ಹೆಣ್ಣುಮಕ್ಕಳು. ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂವರೂ ಮಕ್ಕಳನ್ನು ಶ್ರೀಮಂತರ ಮನಗೆ ಮದುವೆ ಮಾಡಿಕೊಡಬೇಕು ಎಂಬುದು ಆಕೆಯ ಕನಸು. ಅದರಂತೆ ದೀನಬಂಧು ಮನೆತನದ ಶ್ರೀಮಂತಿಕೆಗೆ ಮನಸೋತ ಕಾಂತಲಕ್ಷ್ಮಿ, ತನ್ನ ದೊಡ್ಡ ಮಗಳು ಮೋನಿಕಾಳನ್ನು ವಿವೇಕ್ ಜೊತೆ ಮದುವೆ ಸಿದ್ಧತೆ ಮಾಡಿಕೊಂಡಿರುತ್ತಾಳೆ.

ಆದರೆ, ಮೋನಿಕಾ ತಾಯಿ ಗೊತ್ತುಪಡಿಸಿದ ಮದುವೆ ಮುರಿದುಕೊಂಡು, ಮನೆಬಿಟ್ಟು ತನ್ನ ಪ್ರಿಯಕರನ ಜೊತೆ ಹೋಗುತ್ತಾಳೆ. ವಿಷಯ ತಿಳಿದ ಕಾಂತಲಕ್ಷ್ಮೀ ಮರ್ಯಾದೆಗೆ ಅಂಜಿ ಸಾಯುವ ನಿರ್ಧಾರ ಮಾಡುತ್ತಾಳೆ.
.ಅಣ್ಣಯ್ಯ ಧಾರಾವಾಹಿ: ಪರಶು ಮುಖವಾಡ ಕಳಚಿದರೆ ಸುಮ್ಮನಿರುತ್ತಾನಾ ಮಾರಿಗುಡಿ ಶಿವಣ್ಣ?.
ಆದರೆ, ಕುಟುಂಬ ಗೌರವಕ್ಕಾಗಿ ಗೌರಿಯೇ ವಧುವಾಗಿ ಬರುತ್ತಾಳೆ. ಗೌರಿಯನ್ನು ಕಂಡರೆ ಆಗದ ವಿವೇಕ್ ಒಲ್ಲದ ಮನಸ್ಸಿನಲ್ಲೇ ಆಕೆಗೆ ತಾಳಿ ಕಟ್ಟುತ್ತಾನೆ. ಬಳಿಕ ಗೌರಿಯನ್ನು ಮನೆ ತುಂಬಿಸಿಕೊಳ್ಳಲು ವಿವೇಕ್ ತಾಯಿ ಸರಿತಾ ಒಪ್ಪಿಕೊಳ್ಳುವುದಿಲ್ಲ.

ದೀನಬಂಧು ಕುಟುಂಬದ ಹಿರಿಯರು ಹೇಳಿದ ಬಳಿಕ ಮನೆಯ ಸೊಸೆಯನ್ನು ಒಳಗೆ ಬರಲು ಒಪ್ಪಿಗೆ ನೀಡುತ್ತಾರೆ. ಆದರೆ, ಗೌರಿ ಸೊಸೆಯಾಗಿ ಉಳಿಯಬೇಕಾದರೆ ‘ತವರು ಮನೆಯ ಸಂಬಂಧ ತೊರೆಯಬೇಕು’ ಎಂದು ಸರಿತಾ ಅವರು ಷರತ್ತು ವಿಧಿಸುತ್ತಾರೆ.

ಅತ್ತೆ ಸರಿತಾಳ ಮಾತು ಕೇಳಿ ಗೌರಿಯು ತವರು ಮನೆ ತೊರೆದು ದೀನಬಂಧು ಕುಟುಂಬದ ಸೊಸೆಯಾಗಲು ಒಪ್ಪಿಕೊಳ್ಳುತ್ತಾಳಾ ಎಂಬುವುದೇ ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.