ಭಾನುವಾರ, ಅಕ್ಟೋಬರ್ 24, 2021
21 °C

ಬಿಗ್‌ಬಾಸ್‌–15: ಸಲ್ಮಾನ್‌ ಖಾನ್‌ಗೆ ’ಮನಿಕೆ ಮಗೆ ಹಿತೆ’ ಹಾಡು ಹೇಳಿಕೊಟ್ಟ ಯೋಹನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಮನಿಕೆ ಮಗೆ ಹಿತೆ' ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಶ್ರೀಲಂಕಾದ ಗಾಯಕಿ ಯೋಹನಿ, ಹಿಂದಿ ಬಿಗ್‌ಬಾಸ್‌ ಮನೆಗೆ ಹೋಗಿ ಸಲ್ಲು ಬಾಯ್‌ ಅವರಿಗೆ ’ಮನಿಕೆ ಮಗೆ ಹಿತೆ’ ಹಾಡು ಕಲಿಸಿದ್ದಾರೆ.

ಇತ್ತೀಚೆಗಷ್ಟೆ ಭಾರತ ಪ್ರವಾಸ ಕೈಗೊಂಡಿರುವ ಯೋಹನಿ ಎರಡು ದಿನಗಳ ಹಿಂದೆ ಬಾಲಿವುಡ್‌ ನಟಿ ಹಾಗೂ ಮಾಜಿ ಮಿಸ್ ಶ್ರೀಲಂಕಾ ಆಗಿದ್ದ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದರು. 

ಬಿಗ್‌ಬಾಸ್‌ ಮನೆಯಲ್ಲಿ ಸಲ್ಮಾನ್‌ ಖಾನ್‌ ಅವರನ್ನು ಭೇಟಿ ಮಾಡಿದ ಯೋಹನಿ, ಅವರಿಗೆ ’ಮನಿಕೆ ಮಗೆ ಹಿತೆ’ ಹಾಡು ಹೇಳಿಕೊಟ್ಟರು. ಸಲ್ಲು ಬಾಯ್‌ ಹಾಡಿರುವ ಸಾಂಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಇದನ್ನೂ ಓದಿ: ಜಾಕ್ವೆಲಿನ್ ಫೆರ್ನಾಂಡಿಸ್ ಭೇಟಿ ಮಾಡಿದ ಮನಿಕೆ ಮಗೆ ಹಿತೆ ಖ್ಯಾತಿಯ ಯೋಹನಿ

ಗಾಯಕಿ ಯೋಹನಿ ಅವರು ಮನಿಕೆ ಮಗೆ ಹಿತೆ ಕವರ್ ಹಾಡಿನ ಮೂಲಕ ಇಂಟರ್‌ನೆಟ್‌ ಸ್ಟಾರ್ ಅನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಿಂದಿ ಬಿಗ್‌ಬಾಸ್‌ 15: ವಾರಕ್ಕೆ ₹35 ಲಕ್ಷ ಸಂಭಾವನೆ ಕೇಳಿದ ರಿಯಾ ಚಕ್ರವರ್ತಿ?

ಹಿಂದಿಯ 15ನೇ ಬಿಗ್‌ಬಾಸ್‌ ಸರಣಿ ಕಿರುತೆರೆಯಲ್ಲಿ ಅಕ್ಟೋಬರ್‌ 2ರಿಂದ ಪ್ರಸಾರವಾಗುತ್ತಿದೆ. ಈ ರಿಯಾಲಿಟಿ ಶೋ ಅನ್ನು ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿದ್ದಾರೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು