ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬಾಸ್‌ ಮನೆಯಲ್ಲಿ ನವೀನ್, ಅಕ್ಷತಾ, ರಂಜಿನಿ?

ಬಿಗ್‌ ಬಾಸ್‌–6
Last Updated 15 ಅಕ್ಟೋಬರ್ 2018, 9:58 IST
ಅಕ್ಷರ ಗಾತ್ರ

ಇದೇ ತಿಂಗಳು ಅಕ್ಟೋಬರ್‌ 21 ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಷೋ ಆರನೇ ಆವೃತ್ತಿ ಆರಂಭವಾಗಲಿದೆ. ಈ ಸಲ ಬಿಗ್‌ಬಾಸ್ ಮನೆಯಲ್ಲಿ ಯಾರ‍್ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಚರ್ಚೆ, ಊಹಾಪೋಹಗಳೂ ಜೋರಾಗಿವೆ.

ಮೂಲಗಳ ಪ್ರಕಾರ ಗಾಯಕ ನವೀನ್ ಸಜ್ಜು ಮತ್ತು ನಟಿ ಅಕ್ಷತಾ ಪಾಂಡವಪುರ ಈ ಸಲದ ಬಿಗ್‌ ಬಾಸ್‌ ಮನೆಯಲ್ಲಿ ಇರುವುದು ಬಹುತೇಕ ಖಚಿತ. ಹಾಗೆಯೇ ‘ಪುಟ್ಟಗೌರಿ ಮದುವೆ’ ಚಿತ್ರದ ರಂಜನಿ ಅವರೂ ಇರಲಿದ್ದಾರೆ.

ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅಕ್ಷತಾ ಪಾಂಡವಪುರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. ‘ಪಲ್ಲಟ’ ಸಿನಿಮಾದ ನಟನೆಗಾಗಿ ಅವರಿಗೆ ರಾಜ್ಯಪ್ರಶಸ್ತಿಯೂ ಬಂದಿತ್ತು. ಇತ್ತೀಚೆಗೆ ಅವರು ವಿ.ಎಂ. ಮಂಜುನಾಥ್ ನಿರ್ದೇಶನದ ‘ಇಬೆಲ್ಲ’ ಎಂಬ ಮಹಿಳಾಪ್ರಧಾನ ಸಿನಿಮಾದಲ್ಲಿ ನಟಿಸಿದ್ದರು.

‘ಲೂಸಿಯಾ’ ಸಿನಿಮಾದ ‘ತಿನ್ಬೇಡ ಕಮ್ಮಿ..’ ಹಾಡಿನ ಮೂಲಕ ಪ್ರಸಿದ್ಧಿಗೆ ಬಂದ ಗಾಯಕ ನವೀನ್ ಸಜ್ಜು. ಕನ್ನಡದ ಹಲವು ಸಿನಿಮಾಗಳಿಗೆ ಹಾಡಿರುವ ಅವರು ಸಂಗೀತ ನಿರ್ದೇಶಕನಾಗಿಯೂ ಗುರ್ತಿಸಿಕೊಂಡಿದ್ದಾರೆ. ಬಿಗ್‌ಬಾಸ್‌ನ ಹಿಂದಿನ ಆವೃತ್ತಿಯಲ್ಲಿ ಗಾಯಕ ಚಂದನ್‌ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿದ್ದರು. ಈ ಸಲವೂ ಒಂದು ಗಾಯಕನಿಗೆ ಅವಕಾಶ ಕೊಡಬೇಕು ಎಂಬ ಆಯೋಜಕರ ಲೆಕ್ಕಾಚಾರದ ಪ್ರಕಾರ ನವೀನ್‌ ಸಜ್ಜು ಮನೆಯೊಳಗೆ ಅಡಿಯಿಡುತ್ತಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್ ಮನೆಯೊಳಗೆ ಈ ಗಾಯಕ ಎಂಥ ಮೋಡಿ ಮಾಡಬಹುದು ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕು.

‘ಪುಟ್ಟಗೌರಿ ಮದುವೆ’ ಧಾರಾವಾಹಿಯ ನಾಯಕಿ ರಂಜನಿ ಅವರೂ ಈ ಸಲ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ರಾಜಹಂಸ’ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು.

ಈ ಬಾರಿ ಒಟ್ಟು ಹದಿನೆಂಟು ಜನರು ಬಿಗ್‌ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರಂತೆ. ಕಳೆದ ಬಾರಿ ಒಟ್ಟು ಸ್ಪರ್ಧಾಳುಗಳಲ್ಲಿ ಅರ್ಧದಷ್ಟು ಸೆಲೆಬ್ರಿಟಿಗಳು ಇರುವಂತೆ ನೋಡಿಕೊಳ್ಳಲಾಗಿತ್ತು. ಈ ಬಾರಿ ಸೆಲೆಬ್ರಿಟಿಗಳ ಸಂಖ್ಯೆ ಕಡಿಮೆ ಇರಲಿದ್ದು ಸಾಮಾನ್ಯರೇ ಹೆಚ್ಚು ಕಾಣಿಸಿಕೊಳ್ಳಲಿದ್ದಾರಂತೆ. ಪ್ರತಿವರ್ಷದಂತೆ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಕಿಚ್ಚ ಸುದೀಪ್‌
ಕಿಚ್ಚ ಸುದೀಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT