ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.28ರಿಂದ ಬಿಗ್‌ಬಾಸ್‌ ಸೀಸನ್‌ 8

Last Updated 15 ಫೆಬ್ರುವರಿ 2021, 15:06 IST
ಅಕ್ಷರ ಗಾತ್ರ

ಬೆಂಗಳೂರು: ಜನರು ಸಾಕಷ್ಟು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ 8ನೇ ಆವೃತ್ತಿಗೆ ನಟ ಸುದೀಪ್‌ ಜೋಯಿಸಿರಾಗಿ ಬಂದು ಮುಹೂರ್ತ ಇಟ್ಟಿದ್ದಾರೆ. ಫೆ.28ರ ಸಂಜೆ 6ಕ್ಕೆ 8ನೇ ಆವೃತ್ತಿಯ ಗ್ರ್ಯಾಂಡ್‌ ಓಪನಿಂಗ್‌ ನಡೆಯಲಿದೆ.

ಕಲರ್ಸ್‌ ಕನ್ನಡ ಚಾನೆಲ್‌ ಹೊಸ ಆವೃತ್ತಿಯ ವಿಡಿಯೊ ಪ್ರೋಮೊ ಬಿಡುಗಡೆ ಮಾಡಿದ್ದು, ದ್ವಿಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ‘ಚಂದ್ರ, ರವಿ, ಶುಕ್ರ, ಮಂಗಳ, ಬುಧ, ಗುರು, ಶನಿ ಹೀಗೆ ಗ್ರಹ, ಉಪಗ್ರಹ ಹಾಗೂ ಮಿತ್ರಗ್ರಹ ಎಲ್ಲವೂ ಎಂಟನೇ ಮನೆಯಲ್ಲೇ ಲಾಕ್‌ಡೌನ್, 100 ದಿನ ಅಲ್ಲೇ ಇರುತ್ತೆ. ರಾಜಯೋಗ ಫೆ.28ರಿಂದ ಸಂಜೆ 6ಕ್ಕೆ ಆರಂಭ ಆಗುತ್ತದೆ’ ಎಂದು ಭವಿಷ್ಯ ಹೇಳುವ ಮುಖಾಂತರ ಸುದೀಪ್‌ ಹೊಸ ಆವೃತ್ತಿಯೆ ಘೋಷಣೆ ಮಾಡಿದ್ದಾರೆ.

8ನೇ ಸೀಸನ್‌ನಲ್ಲಿ ಸ್ಪರ್ಧಿಗಳು ಯಾರು ಎನ್ನುವ ಸುಳಿವನ್ನು ಕಲರ್ಸ್‌ ಕನ್ನಡ ಇನ್ನೂ ಬಿಟ್ಟುಕೊಟ್ಟಿಲ್ಲ. ಕೋವಿಡ್‌–19 ಕಾರಣದಿಂದ ಸ್ಪರ್ಧೆಯ ಸ್ವರೂಪ ಹೇಗಿರುತ್ತದೆ, ಹೊಸ ನಿಯಮಗಳೇನು ಎನ್ನುವುದ ಬಗ್ಗೆ ಕುತೂಹಲ ಜನರಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT