ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ’ ಧಾರಾವಾಹಿಯು ಕಥೆಯ ಮೂಲಕವೇ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಇದೀಗ, ಅರ್ಜುನ್ ಜೊತೆ ನಿಧಿ ಮದುವೆ ಮಾಡಲು ಆಕೆಯ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.

ಕರ್ಣನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅವನ ತಂದೆ ರಮೇಶ್ ಪಣ ತೊಟ್ಟಿದ್ದಾರೆ. ಅದರಂತೆ ರಮೇಶ್ ಈಗ, ಕರ್ಣನ ಪ್ರೇಯಸಿ ನಿಧಿಯನ್ನು ದೂರ ಮಾಡಲು ಯೋಚಿಸುತ್ತಿದ್ದಾನೆ.

ಸ್ನೇಹಿತನ ಮಗ ಅರ್ಜುನ್ನನ್ನು ಮನೆಗೆ ಕರೆಸಿ, ಹೆಣ್ಣು ನೋಡುವ ಶಾಸ್ತ್ರ ಮಾಡಿಸಿದ್ದಾನೆ. ಈ ಹುಡುಗ ಅವಳ ಮನೆಯವರಿಗೂ ಇಷ್ಟವಾಗಿದ್ದಾನೆ. ಅರ್ಜುನ್ಗೂ ನಿಧಿ ಒಪ್ಪಿಗೆ ಆಗಿದ್ದಾಳೆ. ಆದರೆ ಈ ಮದುವೆ ನಿಧಿಗೆ ಇಷ್ಟವಿಲ್ಲ.

ಈ ಮದುವೆಯಿಂದ ಪಾರಾಗಲು ನಿಧಿ ಹಾಗೂ ಕರ್ಣ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ರಮೇಶ್ ಈ ಜೋಡಿಯನ್ನು ದೂರ ಮಾಡಲು ಬೇರೆ ಮಾರ್ಗ ಹಿಡಿಯುತ್ತಿದ್ದಾನೆ. ರಮೇಶ್ ಸಂಚು ಫಲಿಸಿ ನಿಧಿ ಹಾಗೂ ಕರ್ಣ ದೂರ ಆಗ್ತಾರಾ? ಎಂಬುವುದು ಮುಂದಿನ ಸಂಚಿಕೆ.

'ಸೀತಾರಾಮ' ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಅವರು ಅರ್ಜುನ್ ಪಾತ್ರದ ಮೂಲಕ ಮತ್ತೆ ನಟನೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.