ಎಲ್ಲ ಅಡೆತಡೆ ಮೀರಿ ಮದುವೆ ಮಂಟಪದಲ್ಲಿ ಕುಳಿತಿರುವ ಕರ್ಣನ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ‘ಕರ್ಣ‘ ಧಾರಾವಾಹಿ ಪ್ರಸಾರವಾಗುತ್ತದೆ.

ಕರ್ಣ, ನಿಧಿ ಒಂದಾಗಬಾರದೆಂದು ರಮೇಶ್ ನಾನಾ ಕಸರತ್ತು ಮಾಡಿದ್ದ. ನಿಧಿಗೆ ಅರ್ಜುನ್ ಜೊತೆ ಮದುವೆ ಸಿದ್ಧತೆ ಮಾಡಿಸಿದ್ದ. ಆದರೆ, ತನ್ನ ನಿಧಿ ಇಷ್ಟಪಡುತ್ತಿದ್ದ ಹುಡುಗ ಕರ್ಣ ಎಂದು ನಿತ್ಯಾಳಿಗೆ ಕೊನೆ ಘಳಿಗೆಯಲ್ಲಿ ಸತ್ಯ ತಿಳಿಯಿತು.

ಈ ಸತ್ಯ ತಿಳಿದ ನಿತ್ಯಾ, ಕರ್ಣ ಹಾಗೂ ನಿಧಿ ಪ್ರೀತಿ ವಿಷಯವನ್ನು ಮನೆಯವರ ಮುಂದೆ ಹೇಳಿದ್ದಳು. ಅಕ್ಕನ ಜೀವನ ಹಾಳು ಆಗಬಾರದೆಂದು ಯೋಚಿಸಿದ ನಿಧಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಳು.

ಅವಳನ್ನು ಹಿಂಬಾಲಿಸಿದ ಕರ್ಣ, ನಿಧಿಯನ್ನು ಮನೆವೊಲಿಸಿ ಮನೆಗೆ ಕರೆತಂದನು. ಕೊನೆಗೂ ಇವರ ಪ್ರೀತಿಯನ್ನು ಮನೆಯವರು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದರು. ಇನ್ನೇನು ಕರ್ಣ, ನಿಧಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಕರ್ಣನ ಫೋನ್ಗೆ ಬಂದ ಸಂದೇಶ ಆ ಶುಭಕಾರ್ಯವನ್ನೆ ನಿಲ್ಲಿಸುತ್ತದೆ.

ಆ ಫೋನ್ಗೆ ಬಂದ ಸಂದೇಶವನ್ನು ನಿಧಿಯನ್ನು ಕರ್ಣ ವಿವಾಹ ಆಗುತ್ತಾನಾ ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.