ʻಮೂಗುತಿಮಲ್ಲಿʼಯಂತಹ ಜನಪ್ರಿಯ ಧಾರಾವಾಹಿಯನ್ನು ಪರಿಚಯಿಸಿದ ಸನ್ ಉದಯ ಟಿವಿ, ಈಗ ಮತ್ತೊಂದು ಹೊಸ ಕತೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ.

ಕೌಟುಂಬಿಕ ಕತೆ ಇರುವ ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿ ಜೂನ್ 1ರಿಂದ ಆರಂಭವಾಗಿದೆ. ಸೋಮವಾರದಿಂದ ಶನಿವಾರ 6.30ಕ್ಕೆ ಪ್ರಸಾರವಾಗಲಿದೆ.

ಕಥೆಯ ನಾಯಕ ಶ್ರೀಹರಿ ಹಾಗೂ ಮಹಾಲಕ್ಷ್ಮೀ ಇಬ್ಬರು ಮಧ್ಯಮ ವರ್ಗದವರು. ಹುಟ್ಟಿನಿಂದ ಬಡತನ ಅನುಭವಿಸಿರುವ ಶ್ರೀಹರಿ ಕುಟುಂಬಸ್ಥರಿಗೆ ಶ್ರೀಮಂತ ಮನೆಯ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕು ಎಂಬ ಕನಸು ಇರುತ್ತದೆ.

ಇತ್ತ, ಮಹಾಲಕ್ಷ್ಮೀ ಕೂಡ ಮಧ್ಯಮ ವರ್ಗದ ಹುಡುಗಿ ಆಗಿದ್ದರಿಂದ ಕಷ್ಟ ಜೀವನದ ಒಂದು ಭಾಗ ಎಂದು ಬದುಕುತ್ತಿರುತ್ತಾಳೆ.

ಕೊನೆಗೆ ಶ್ರೀಹರಿ ಹಾಗೂ ಮಹಾಲಕ್ಷ್ಮೀ ವಿವಾಹ ಆಗಲೇಬೇಕಾದ ಪರಿಸ್ಥಿತಿ ಬರುತ್ತದೆ. ಅದುವೇ ಈ ಧಾರಾವಾಹಿಯ ತಿರುವು.

ಮಹಾಲಕ್ಷ್ಮೀ ಪಾತ್ರದಲ್ಲಿ ನಟಿ ಅಮೂಲ್ಯ ಗೌಡ ಹಾಗೂ ಶ್ರೀಹರಿಯಾಗಿ ಭರತ್ ಶಿವಣ್ಣ ನಟಿಸುತ್ತಿದ್ದಾರೆ. ಶಿವಾಜಿರಾವ್ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ, ಹರಿಪ್ರಿಯಾ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವು ಪೂಜೇನ ಅಗ್ರಹಾರ ನಿರ್ದೇಶನ ಈ ಧಾರಾವಾಹಿಯನ್ನು ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.