ಶುಕ್ರವಾರ, ಜೂನ್ 18, 2021
24 °C

‘ಜೊತೆ ಜೊತೆಯಲಿ’ ಮತ್ತು ‘ಗಟ್ಟಿಮೇಳ’ದ ಬೆಸುಗೆ: ವೀಕ್ಷಕರಿಗೆ ಡಬಲ್‌ ಖುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ ಕನ್ನಡ ವಾಹಿನಿಯಲ್ಲಿ ಪರಸ್ಪರ ಟಿಆರ್‌ಪಿಗೆ ಪೈಪೋಟಿ ನಡೆಸುತ್ತಿರುವ ಧಾರಾವಾಹಿಗಳೆಂದರೆ ಒಂದು ‘ಜೊತೆ ಜೊತೆಯಲಿ’ ಮತ್ತು ಇನ್ನೊಂದು ‘ಗಟ್ಟಿಮೇಳ’. ಸಿನಿಮಾ ತಾರೆ ಅನಿರುದ್ಧ ಜಟ್ಕರ್‌ ‘ಜೊತೆ ಜೊತೆಯಲಿ’ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ಆರ್ಯವರ್ಧನ್‌ ‍ಪಾತ್ರದಲ್ಲಿ ಆರಂಭದಿಂದಲೂ ವೀಕ್ಷಕರ ಮೇಲೆ ಮೋಡಿ ಮಾಡಿದ್ದಾರೆ. ಇನ್ನು ‘ಗಟ್ಟಿಮೇಳ’ ಧಾರಾವಾಹಿಯ ವೇದಾಂತ್‌ ಪಾತ್ರವೂ ಅಷ್ಟೇ ಪ್ರಭಾವಿಯಾಗಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ವೇದಾಂತ್‌ ಪಾತ್ರದಲ್ಲಿ ಮಿಂಚುತ್ತಿರುವವರು ನಟ ರಕ್ಷ್‌. ಈ ಇಬ್ಬರು ನಟರು ಈ ಧಾರಾವಾಹಿಗಳಲ್ಲಿ ದೊಡ್ಡ ಉದ್ಯಮಿಗಳು. ಈ ಯಶಸ್ವಿ ಉದ್ಯಮಿಗಳನ್ನು ಮಹಾಸಂಗಮದಲ್ಲಿ ಮುಖಾಮುಖಿಯಾಗುವಂತೆ ಬೆಸೆದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂದಿದ್ದೇ ತಂಡ ಜೀ ಕನ್ನಡ ವಾಹಿನಿ ಹೊಸ ಪ್ರಯೋಗಕ್ಕೆ ಕೈ ಹಾಕಿಯೇ ಬಿಟ್ಟಿತು. 

ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ಎರಡು ಧಾರಾವಾಹಿಗಳಿಗೆ ಬೆಸುಗೆ ಹಾಕಿ ‘ಮಹಾಸಂಗಮ’ ಎನ್ನುವ ಹೆಸರಿಟ್ಟಿದೆ. ಆಗಸ್ಟ್ 17ರಿಂದಲೇ ಜೀ ಕನ್ನಡದಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿಗಳ ‘ಮಹಾಸಂಗಮ’ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿಯಲ್ಲಿ ಪ್ರಸಾರವಾಗುತ್ತಿದೆ. ಆರ್ಯವರ್ಧನ್‌ ‍ಮತ್ತು ವೇದಾಂತ್ ಅವರ ಲುಕ್, ಖದರ್‌, ವ್ಯವಹಾರಿಕ ಚಾಣಾಕ್ಷತನದ ನಟನೆಯೂ ವೀಕ್ಷಕರಿಗೆ ತುಂಬಾ ಇಷ್ಟವಾಗಲಾರಂಭಿಸಿದೆ. ಆರ್ಯವರ್ಧನ್‌ ಮತ್ತು ವೇದಾಂತ್‌ ಒಟ್ಟಿಗೆ ಕಾಣಿಸಿಕೊಂಡು ವೀಕ್ಷಕರನ್ನು ಸಖತ್ತಾಗಿಯೆ ರಂಜಿಸುತ್ತಿದ್ದಾರೆ.

‘ಜೀ ಕನ್ನಡ ವೀಕ್ಷಕರ ಅಭಿರುಚಿಗೆ ಇಷ್ಟವಾಗುವ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ನಮ್ಮ ಎರಡು ಜನಪ್ರಿಯ ಧಾರಾವಾಹಿಗಳಾದ ‘ಜೊತೆ ಜೊತೆಯಲಿ’ ಮತ್ತು ‘ಗಟ್ಟಿಮೇಳ’ದ ಪಾತ್ರಗಳನ್ನು ‘ಮಹಾಸಂಗಮ’ದಲ್ಲಿ ಒಗ್ಗೂಡಿಸಿದ್ದೇವೆ. ವೀಕ್ಷಕರಿಗೆ ಮನರಂಜನೆಯ ಮಹಾಪೂರವೇ ಸಿಗುತ್ತಿದೆ. ಈ ಎರಡೂ ಧಾರಾವಾಹಿಗಳ ವೀಕ್ಷಕರ ನಿರೀಕ್ಷೆಗೆ ಒಂದಿನಿತು ಭಂಗವಾಗದಂತೆ ಈ ಮಹಾಸಂಗಮವನ್ನು ಬೆಸೆಯಲಾಗಿದೆ. ನಮ್ಮ ವಾಹಿನಿಯ ಎಲ್ಲ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ಮೆಚ್ಚಿದ ವೀಕ್ಷಕರು ಈ ಮಹಾಸಂಗಮವನ್ನು ಪ್ರೀತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ’ ಎನ್ನುವುದು ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಅನಿಸಿಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು