ಶನಿವಾರ, ಡಿಸೆಂಬರ್ 7, 2019
18 °C

ಕನ್ನಡಕ್ಕೆ ಡಬ್ ಆಗಲಿದೆ ಮಾಲ್ಗುಡಿ ಡೇಸ್

Published:
Updated:

ಬೆಂಗಳೂರು: ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ನಿರ್ಮಿಸಿದ್ದ ಮಾಲ್ಗುಡಿ ಡೇಸ್ ಧಾರವಾಹಿ ಕನ್ನಡಕ್ಕೆ ಡಬ್ ಆಗಲಿದೆ.

2017 ಮಾರ್ಚ್ ತಿಂಗಳಲ್ಲಿ ಸತ್ಯದೇವ್ ಐಪಿಎಸ್,  ನವೆಂಬರ್‌ನಲ್ಲಿ ಧೀರ,  2018 ಆಗಸ್ಟ್ ತಿಂಗಳಲ್ಲಿ ಕಮಾಂಡೊ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದ್ದ ಹರಿವು ಕ್ರಿಯೇಷನ್ಸ್ , ವಿಕ್ರಮ್ ಟೆಲ್ಲಿಸ್ ಜೊತೆಗೂಡಿ ಇದೀಗ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಲಿದೆ. 

ಆಗಸ್ಟ್ ತಿಂಗಳಲ್ಲಿ ಕನ್ನಡ ಗ್ರಾಹಕರ ಕೂಟ ಮಾಲ್ಗುಡಿ ಡೇಸ್ ಕನ್ನಡಕ್ಕೆ ಡಬ್ ಆಗಿ ಬರಲಿ ಎಂಬ ಟ್ವಿಟರ್ ಅಭಿಯಾನ ನಡೆಸಿತ್ತು. ಆಗಸ್ಟ್ 8, 2018ರ ಸಂಜೆ 6 ಗಂಟೆಯಿಂದ 8 ಗಂಟೆ ತನಕ #MalgudiDaysInKannada ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಅಭಿಯಾನ ನಡೆದಿತ್ತು. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಮಾಲ್ಗುಡಿ ಡೇಸ್ ಕನ್ನಡ ಸಬ್ ಟೈಟಲ್‍ನಲ್ಲಿ ಪ್ರಸಾರವಾಗಿದ್ದಾಗಲೂ, ಕನ್ನಡಕ್ಕೆ ಡಬ್ ಆಗಬೇಕು ಎಂಬ ಕೂಗು ಕೇಳಿ ಬಂದಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು