ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಧಾರಾವಾಹಿಯು ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಸದ್ಯ, ಜೈದೇವ್ ಅಸಲಿ ಮುಖ ಸಿಂಪಲ್ ಹುಡುಗ ಸುನೀಲ್ ಮುಂದೆ ಬಯಲಾಗಿದೆ.

ಮಾಜಿ ಪತ್ನಿ ಮಲ್ಲಿ ಹಾಗೂ ಗೌತಮ್ ದಿವಾನ್ ನೆಮ್ಮದಿ ಕೆಡಿಸುವ ಶಪಥ ಹೊತ್ತಿದ್ದಾನೆ ಸಹೋದರ ಜೈದೇವ್.
.ಅಣ್ಣಯ್ಯ ಧಾರಾವಾಹಿ: ಶಿವಣ್ಣನ ತಂಗಿ ರತ್ನಾಳ ಎದುರು ವೀರಭದ್ರನ ಮುಖವಾಡ ಬಯಲು.
ಗೌತಮ್ ಹಾಗೂ ಪತ್ನಿ ಭೂಮಿಕಾ ಅವರು ಮಲ್ಲಿಯನ್ನು ತಮ್ಮ ದೊಡ್ಡ ಮಗಳೆಂದು ಭಾವಿಸಿದ್ದಾರೆ. ತಮ್ಮ ಹಿರಿಯ ಮಗಳು ಮಲ್ಲಿಯ ಉತ್ತಮ ಭವಿಷ್ಯ ರೂಪಿಸುವುದಾಗಿ ಪಣತೊಟ್ಟಿದ್ದು, ಅದರಂತೆಯೇ ಮಲ್ಲಿಗೆ ಪರೀಕ್ಷೆ ಬರೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಮಲ್ಲಿಯನ್ನು ಭಾವಿ ಪತಿ ಸುನೀಲ್ ಜೊತೆ ಪರೀಕ್ಷೆ ಬರೆಸಲು ಕಳುಹಿಸುತ್ತಾರೆ.

ಆದರೆ, ಜೈ ದೇವ್ ಮಾತ್ರ ಮಾಜಿ ಪತ್ನಿ ಮಲ್ಲಿ ಯಾವುದೇ ಪರೀಕ್ಷೆ ಬರೆಯಬಾರದೆಂದು ತೊಂದರೆ ನೀಡಲು ಮುಂದಾಗಿ, ಸುನೀಲ್ ಹಾಗೂ ಮಲ್ಲಿ ವಿರುದ್ಧ ರೌಡಿಗಳನ್ನು ಕಳುಹಿಸುತ್ತಾನೆ. ಈ ವಿಷಯ ತಿಳಿದ ಗೌತಮ್ ಅಪತ್ಬಾಂಧವನಂತೆ ಬಂದು, ಮಲ್ಲಿಯನ್ನು ಅಪಾಯದಿಂದ ಪಾರು ಮಾಡಿ ಪರೀಕ್ಷೆ ಬರೆಯಲು ಕಳುಹಿಸುತ್ತಾನೆ.

ಸಂಚು ಅರಿಯದ ಸುನೀಲ್ ರೌಡಿಗಳ ಕಥೆಯನ್ನು ಜೈದೇವ್ ಬಳಿ ಹೇಳುತ್ತಾನೆ. ಇದಕ್ಕೆ ಉತ್ತರಿಸಿದ ಜೈದೇವ್, ‘ಈ ಸಂಚಿನ ಸೂತ್ರಧಾರ ನಾನೇ’ ಎನ್ನುತ್ತಾನೆ. ಸತ್ಯ ತಿಳಿದ ಸುನೀಲ್ ಈಗ ಜೈದೇವ್ನಿಂದ ದೂರಾ ಆಗ್ತಾನಾ ಎಂಬುವುದೇ ಮುಂದಿನ ಕಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.