ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಂದಗೋಕುಲ' ಧಾರಾವಾಹಿ ಕೌಟುಂಬಿಕ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ಈಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ.

ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ಕುಟುಂಬಸ್ಥರಿಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಕೇಶವನನ್ನು ನೋಡಿದ ಮೀನಾ ತಂದೆ ʼಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆʼ ಅವಮಾನ ಮಾಡಿದ್ದರು.

ಈಗ ಕೇಶವ, ತನಗಿರುವ ಸರ್ಕಾರಿ ಕೆಲಸದ ಕನಸಿನ ಬಗ್ಗೆ ತನ್ನ ತಮ್ಮ ವಲ್ಲಭನ ಬಳಿ ಹೇಳಿಕೊಂಡಿದ್ದಾನೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಶಪಥ ಮಾಡಿದ್ದಾನೆ.

ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಹಣ ಸಂಪಾದಿಸಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ ಬಿಚ್ಚಿಟ್ಟಿದ್ದಾನೆ.

ಯಾವುದೇ ಕಾರಣಕ್ಕೂ ನಮ್ಮಿಬ್ಬರ ನಡುವಿನ ಈ ಮಾತು ನಮ್ಮ ಮನೆಯವರಿಗೆ ಗೊತ್ತಾಗಬಾರದು ಎಂದು ಇಬ್ಬರು ಸಹೋದರರು ನಿರ್ಧರಿಸಿರುತ್ತಾರೆ. ಆದರೆ, ಕೇಶವ ಮನೆಗೆ ಬಂದವನೇ ತನ್ನ ಪತ್ನಿ ಮೀನಾ ಮುಂದೆ ವಲ್ಲಭ ಡ್ರೈವಿಂಗ್ ಕೆಲಸಕ್ಕೆ ಹೋಗುವ ಗುಟ್ಟನ್ನು ಹೇಳಿಬಿಟ್ಟಿದ್ದಾನೆ.

ಇತ್ತ, ವಲ್ಲಭ ಕೂಡ ತನ್ನ ಹೆಂಡತಿ ಅಮೂಲ್ಯ ಬಳಿ ಬಂದು ʼಕೇಶವಣ್ಣ ಗೌವರ್ನ್ಮೆಂಟ್ ಕೆಲಸಕ್ಕೆ ಸೇರ್ತಾರೆ ಮೀನಾಳ ಮುಂದೆ ಹೇಳಬೇಡʼ ಎಂದು ಗುಟ್ಟನ್ನು ರಟ್ಟು ಮಾಡಿದ್ದಾನೆ.

ಒಟ್ಟಿನಲ್ಲಿ ಇಬ್ಬರ ಕೆಲಸದ ಗುಟ್ಟು ಮನೆಯವರ ಎದುರು ಗೊತ್ತಾಗುವ ಸುಳಿವು ಸಿಕ್ಕಿರುವುದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.