ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ್‌ ‘ಸ್ಪೆಲಿಂಗ್‌ ಬೀ’ ಚಾಂಪಿಯನ್‌

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಭಾರತ ಮೂಲದ 14 ವರ್ಷದ ವಿದ್ಯಾರ್ಥಿ ಕಾರ್ತಿಕ್‌ ನೆಮ್ಮನಿ ಅವರು ಈ ಸಲದ ಪ್ರತಿಷ್ಠಿತ ರಾಷ್ಟ್ರೀಯ ಸ್ಪೆಲಿಂಗ್‌ ಬೀ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಈ ಮೂಲಕ ಸತತ 11ನೇ ವರ್ಷವೂ ಭಾರತೀಯರೇ ಈ ಸ್ಪರ್ಧೆಯಲ್ಲಿ ಪಾರಮ್ಯ ಮೆರೆದಿದ್ದಾರೆ.

ಟೆಕ್ಸಾಸ್‌ನ ಮ್ಯಾಕ್‌ಕಿನ್ನೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಕಾರ್ತಿಕ್‌ 91ನೇ ಆವೃತ್ತಿಯಲ್ಲಿ "koinonia" ಪದವನ್ನು ಸರಿಯಾಗಿ ಉಚ್ಛರಿಸುವ ಮೂಲಕ ಪ್ರಶಸ್ತಿ ಗೆದ್ದರು.

ಆರಂಭಿಕ ಸುತ್ತಿನಲ್ಲಿ 516 ಮಂದಿ ಸ್ಪರ್ಧಾಳುಗಳಿದ್ದರು. ಅಂತಿಮ ಸುತ್ತಿನಲ್ಲಿ ಕಾರ್ತಿಕ್‌ಗೆ ಭಾರತ ಮೂಲದ ನ್ಯಾಸಾ ಮೋದಿ ಪ್ರಬಲ ಸ್ಪರ್ಧೆಯೊಡ್ಡಿದಳು.

‘ನನಗೆ ಸಂಪೂರ್ಣ ವಿಶ್ವಾಸವಿತ್ತು, ಆದರೆ ಚಾಂಪಿಯನ್‌ ಆಗಿ ಹೊರಹೊಮ್ಮುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಗೆಲುವಿನ ಬಳಿಕ ಕಾರ್ತಿಕ್‌ ತಿಳಿಸಿದರು.

‘ಸ್ಪರ್ಧೆಯಲ್ಲಿ ಗೆದ್ದ ಕಾರ್ತಿಕ್‌ 40 ಸಾವಿರ ಡಾಲರ್‌ (₹ 26.85 ಲಕ್ಷ ನಗದು) ಟ್ರೋಫಿ, ನ್ಯೂಯಾರ್ಕ್‌, ಹಾಲಿವುಡ್‌ಗೆ ಪ್ರವಾಸ, ಶಾಲೆಯಲ್ಲಿ ಫಿಜಾ ಪಾರ್ಟಿ ನೀಡುವ ಪ್ರಾಯೋಜಕತ್ವ ಪಡೆಯಲಿದ್ದಾರೆ’ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಕಳೆದ ವರ್ಷ ಭಾರತ ಮೂಲದ ವಿದ್ಯಾರ್ಥಿನಿ 12 ವರ್ಷದ ಅನನ್ಯಾ ವಿನಯ್‌ ವಿಜೇತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT