ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಪವಿತ್ರ ಬಂಧನ‘ ಧಾರಾವಾಹಿಯ ಸಂಚಿಕೆಗಳು ಕುತೂಹಲ ಹುಟ್ಟಿಸಿದೆ. ಯಾವಾಗಲೂ ದೇವ್ನನ್ನು ಕಂಡರೆ ಸಿಡುಕುತ್ತಿದ್ದ ಪವಿತ್ರಾಳಿಗೆ ತನ್ನ ತಪ್ಪಿನ ಅರಿವು ಆಗಿದೆ.

ರಾಧಿಕಾ ತನ್ನ ಕುಟುಂಬದ ಗೌರವ ಹೆಚ್ಚಿಸಿಕೊಳ್ಳಲು ಪುತ್ರ ದೇವ್ ಹಾಗೂ ಪವಿತ್ರಾಳ ಆರತಕ್ಷತೆ ಪಾರ್ಟಿ ಏರ್ಪಡಿಸಿದ್ದರು. ಅಲ್ಲಿ ಪವಿತ್ರಾಳಿಗೆ ಅವಮಾನ ಮಾಡುವ ದೃಷ್ಟಿಯಿಂದ ಅವಳ ಮನೆಯವರನ್ನು ಪಾರ್ಟಿಗೆ ನಮೃತಾ ಆಹ್ವಾನ ಮಾಡಿದ್ದಳು.

ಸತ್ಯ ತಿಳಿಯದೇ ಆ ಪಾರ್ಟಿಗೆ ಪವಿತ್ರಾಳ ಮನೆಯವರು ಆಗಮಿಸಿದ್ದರು. ಅವರನ್ನು ಹಳ್ಳಿ ಜನ ಎನ್ನುವ ಕಾರಣಕ್ಕೆ ನಮೃತಾಳ ಸ್ನೇಹಿತರು ಅವಮಾನ ಮಾಡಿದ್ದರು. ಇದಕ್ಕೆಲ್ಲಾ ದೇವ್ ಕಾರಣ ಎಂದು ಪವಿತ್ರಾ ಕೋಪ ಮಾಡಿಕೊಂಡಿದ್ದಳು.

ಪತ್ನಿ ಮನೆಯವರಿಗೆ ಅವಮಾನ ಮಾಡಿದವರಿಗೆ ದೇವ್ ತಕ್ಕ ಪಾಠ ಕಲಿಸುವುದರ ಜೊತೆಗೆ ತಾಯಿ ರಾಧಿಕಾಳ ಎದುರು ಪವಿತ್ರಾಳ ಪರ ಮಾತನಾಡಿದ್ದಾನೆ.

ದೇವ್ನನ್ನು ಕಂಡರೆ ಪ್ರತಿ ಬಾರಿಯೂ ಸಿಡುಕುತ್ತಿದ್ದ ಪವಿತ್ರಾ, ಮೊದಲ ಬಾರಿ ಪತ್ನಿ ಸಹಾಯ ನೆನೆದು ಪಶ್ಚಾತಾಪ ಪಡುತ್ತಿದ್ದಾಳೆ. ತನ್ನ ತಪ್ಪಿನ ಅರಿವಾಗಿ ದೇವ್ ಬಳಿ ಕ್ಷಮೆ ಕೇಳುತ್ತಾಳಾ ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.