‘ರಾಧೆ ಶ್ಯಾಮ’ ಧಾರಾವಾಹಿಯ ನಟ ಅನುಪ್ ಗೌಡ ಅವರು ತಮ್ಮ ಸ್ನೇಹಿತೆ ಜಯಲಕ್ಮ್ಮೀ ಸುರೇಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಕುಟುಂಬ ಸಮೇತರಾಗಿ ಜಯಲಕ್ಷ್ಮೀ ಮನೆಗೆ ಬಂದು ವಿವಾಹದ ಮಾತುಕತೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅನುಪ್, ಜಯಲಕ್ಷ್ಮೀ ಅವರಿಗೆ ಹೂಗುಚ್ಛ ನೀಡಿದ್ದಾರೆ. ‘ಹಿರಿಯರ ಆಶೀರ್ವಾದದೊಂದಿಗೆ ನಮ್ಮ ಮದುವೆ ನಿಶ್ಚಯವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ತಾಂಬೂಲ ಬದಲಾಯಿಸಿಕೊಂಡಿರುವ ಈ ಜೋಡಿ ಮದುವೆ ದಿನಾಂಕದ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ರಾಧೆಯಾಗಿ ತನ್ವಿ ರಾವ್ ಹಾಗೂ ಶ್ಯಾಮನಾಗಿ ಅನುಪ್ ಗೌಡ ನಟಿಸಿದ್ದರು. ಅವರು ನಟನೆ ಜೊತೆಗೆ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ರಲ್ಲಿ ಮೈಸೂರಿನ ಮಾಡೆಲ್ ಆಗಿ ಆಯ್ಕೆ ಆಗಿದ್ದರು. ಜಯಲಕ್ಮ್ಮೀ ಅವರು ಕಾಸ್ಟ್ಯೂಮ್ ಡಿಸೈನರ್ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.