ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ಹಂಚುವ ‘ರಾಧಿಕಾ’

Last Updated 10 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಟಿವಿ ನಿರೂಪಕಿಯಾಗಿ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡ ಕಾವ್ಯಾ ಶಾಸ್ತ್ರಿ ಅವರು ನಂತರದ ದಿನಗಳಲ್ಲಿ ಟಿವಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಾ ಖ್ಯಾತಿ ಗಳಿಸಿದ್ದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗಿನಲ್ಲೂ ನಟಿಸುವ ಮೂಲಕ ತಮ್ಮ ನಟನೆಯ ಛಾಪು ತೋರಿದ್ದರು. ಜೀ ಕನ್ನಡದ ‘ಶುಭವಿವಾಹ’ ಧಾರಾವಾಹಿಯ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದ ಕಾವ್ಯ ಶಾಸ್ತ್ರಿ ಇದೀಗ ‘ರಾಧಿಕಾ’ಳಾಗಿ ಮತ್ತೆ ಕನ್ನಡ ಕಿರುತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

‘ರಾಧಿಕಾ’ ಧಾರಾವಾಹಿ ಉದಯ ವಾಹಿನಿಯಲ್ಲಿ ಮಾರ್ಚ್‌ 14 ರಿಂದ ರಾತ್ರಿ 8.30 ರಿಂದ 9 ಗಂಟೆವರೆಗೆ ಪ್ರಸಾರವಾಗುತ್ತಿದೆ. ಕಥಾನಾಯಕಿ ರಾಧಿಕಾಳ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಕಾವ್ಯಾ. ‘ರಾಧಿಕಾ’ ತಮಿಳಿನ ‘ಕಾಯಲ್‌’ ಧಾರಾವಾಹಿಯ ಕನ್ನಡ ಅವತರಣಿಕೆ. ದರ್ಶಿತ್ ಭಟ್ ಈ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದಾರೆ.

‘ರಾಧಿಕಾ ದಿಟ್ಟ ಹುಡುಗಿ. ತಂದೆಯಿಲ್ಲದ ಮನೆಗೆ ಮಗನಂತಿರುವ ಹುಡುಗಿ ಆಕೆ. ಮನೆಯ ಜವಾಬ್ದಾರಿ, ಕುಡುಕ ಅಣ್ಣಾ ಹೀಗೆ ಸಂಸಾರದ ಭಾರವೆಲ್ಲಾ ತನ್ನ ತಲೆ ಮೇಲೆ ಇದ್ದರೂ ಮನಸ್ಸಿನೊಳಗೆ ನೋವೆಲ್ಲಾ ನುಂಗಿಕೊಂಡು ಜಗತ್ತಿಗೆ ಖುಷಿ ಹಂಚುವ ಲವಲವಿಕೆಯ ಹುಡುಗಿ ರಾಧಿಕಾ. ಈ ಪಾತ್ರ ನನಗೆ ಬಹಳ ಖುಷಿಕೊಟ್ಟಿದೆ. ಈ ಪಾತ್ರವನ್ನು ಜನ ಮೆಚ್ಚಿಕೊಂಡು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಕಾವ್ಯ.

ಸಿನಿಮಾಗಳಲ್ಲಿ ನಟನೆ: ಕಾವ್ಯ ದುನಿಯಾ ವಿಜಯ್‌ ನಟನೆಯ ‘ಯುಗ’ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಇತ್ತೀಚೆಗೆ ಧಾರಾವಾಹಿ ಜೊತೆಗೆ ‘ಲವ್‌ 360’, ‘ಜೇಮ್ಸ್‌’ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT