ಸೋಮವಾರ, ಜನವರಿ 17, 2022
27 °C

ನಮ್ಮ ಮೊದಲ ಭೇಟಿ ವಾಟ್ಸ್‌ಆ್ಯಪ್‌ನಲ್ಲಿ: ರಾಖಿ ಸಾವಂತ್ ಬಗ್ಗೆ ಪತಿ ರಿತೇಶ್ ಮಾತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

rakhi sawanth instagram post

ಬೆಂಗಳೂರು: ಕಲರ್ಸ್ ವಾಹಿನಿಯ ಬಿಗ್ ಬಾಸ್ ಸೀಸನ್ 15ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ನಟಿ ರಾಖಿ ಸಾವಂತ್ ಬಗ್ಗೆ ಅವರ ಪತಿ ರಿತೇಶ್ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ರಾಖಿ ಸಾವಂತ್ ಜತೆ ಮದುವೆಯಾದ ಸಮಯದಿಂದಲೂ ರಿತೇಶ್ ಅವರು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಆದರೆ ಈ ಬಾರಿ ಬಿಗ್ ಬಾಸ್ ಸೀಸನ್ 15ರಲ್ಲಿ ರಾಖಿ ಸಾವಂತ್ ಅವರ ಜತೆಗೆ ಪತಿ ರಿತೇಶ್ ಕೂಡಾ ಭಾಗವಹಿಸಿದ್ದಾರೆ.

ಈ ಜೋಡಿಯ ವಿವಾಹ 2019ರಲ್ಲಿ ನಡೆದಿದ್ದು, ರಾಖಿ ಸಾವಂತ್‌ಗೆ ಹಲವು ಬಾರಿ ಅಭಿಮಾನಿಗಳು ಪತಿ ರಿತೇಶ್‌ರನ್ನು ಪರಿಚಯಿಸುವಂತೆ ಕೇಳಿಕೊಂಡಿದ್ದರು..

ತಮ್ಮಿಬ್ಬರ ಭೇಟಿ ಹೇಗಾಯಿತು ಎನ್ನುವ ಬಗ್ಗೆ ರಿತೇಶ್ ಅವರು ಬಿಗ್‌ಬಾಸ್ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

ರಾಖಿ ಸಾವಂತ್ ಅವರ ಫೋನ್ ನಂಬರ್ ಪಡೆದುಕೊಂಡಿದ್ದ ರಿತೇಶ್, ಮೊದಲಿಗೆ ವಾಟ್ಸ್‌ಆ್ಯಪ್ ಮೂಲಕ ಮೆಸೇಜ್ ಕಳುಹಿಸಿದ್ದರಂತೆ.. ನಂತರ ಅವರಿಬ್ಬರ ಮಧ್ಯೆ ಮಾತುಕತೆ ಆರಂಭವಾಗಿತ್ತು. ಅದಾದ ಬಳಿಕ ಅವರಿಬ್ಬರು ಪರಸ್ಪರ ಭೇಟಿಯಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು