ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವೇದಿಕೆಗಳಿಂದ ವಿಡಿಯೊ, ಲೇಖನ ತೆಗೆದುಹಾಕಲು ಅಶುತೋಷ್‌ ಮನವಿ

‘ಮರೆಯುವ ಹಕ್ಕು’ ಪ್ರತಿಪಾದಿಸಿದ ಅರ್ಜಿದಾರರು
Last Updated 22 ಜುಲೈ 2021, 15:46 IST
ಅಕ್ಷರ ಗಾತ್ರ

ನವದೆಹಲಿ: ‘ಮರೆಯುವುದು ಸಹ ಹಕ್ಕು’ ಎಂದು ಪ್ರತಿಪಾದಿಸಿರುವ ರಿಯಾಲಿಟಿ ಷೋ ಸೆಲೆಬ್ರಿಟಿ ಅಶುತೋಷ್‌ ಕೌಶಿಕ್‌, ತಮ್ಮ ಕೆಲವು ವಿಡಿಯೊಗಳು, ಚಿತ್ರಗಳು ಮತ್ತು ಲೇಖನಗಳನ್ನು ಆನ್‌ಲೈನ್‌ ವೇದಿಕೆಗಳಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಮತ್ತು ಗೂಗಲ್‌ಗೆ ನಿರ್ದೇಶನ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಕೋರಿದ್ದಾರೆ.

‘ಆನ್‌ಲೈನ್‌ ವೇದಿಕೆಗಳಲ್ಲಿರುವ ಈ ವಿಡಿಯೊಗಳು, ಚಿತ್ರಗಳು ಮತ್ತು ಲೇಖನಗಳಿಂದ ತಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ನನ್ನ ಘನತೆಯನ್ನು ಕಾಪಾಡಲು ಇವುಗಳನ್ನು ತೆಗೆದುಹಾಕುವುದು ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಮರೆಯುವ ಹಕ್ಕು ಸಹ ಖಾಸಗಿತನದ ಹಕ್ಕಿನಲ್ಲಿ ಒಳಗೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಸಹ ನಿರ್ದೇಶನಗಳನ್ನು ನೀಡಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿದಾರರು ‘ಖಾಸಗಿತನದ ಹಕ್ಕು’ ಮತ್ತು ‘ಮರೆಯುವ ಹಕ್ಕು’ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಗೂಗಲ್‌ ಎಲ್‌ಎಲ್‌ಸಿ, ಭಾರತೀಯ ಪತ್ರಿಕಾ ಮಂಡಳಿ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಿಗಾ ಕೇಂದ್ರಕ್ಕೆ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ನೋಟಿಸ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT