ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಬಿಗ್‌ಬಾಸ್‌ 15: ವಾರಕ್ಕೆ ₹35 ಲಕ್ಷ ಸಂಭಾವನೆ ಕೇಳಿದ ರಿಯಾ ಚಕ್ರವರ್ತಿ?

Last Updated 29 ಸೆಪ್ಟೆಂಬರ್ 2021, 7:37 IST
ಅಕ್ಷರ ಗಾತ್ರ

ಹಿಂದಿಯ 15ನೇ ಬಿಗ್‌ಬಾಸ್‌ ಸರಣಿ ಕಿರುತೆರೆಯಲ್ಲಿ ಇದೇಅಕ್ಟೋಬರ್‌ 2ರಿಂದ ಪ್ರಸಾರವಾಗಲಿದೆ.

ಈ ಸಲ ಸಲ್ಮಾನ್‌ ಖಾನ್‌ ನಿರೂಪಣೆಗೆ ಭಾರೀ ಮೊತ್ತ ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಬಿಗ್‌ಬಾಸ್‌ ಮನೆಗೆ ಬರುವುದು ಬಹುತೇಕ ಖಚಿತವಾಗಿದೆ.

ಸದ್ಯ ಅವರು ಒಂದು ವಾರಕ್ಕೆ ₹35 ಲಕ್ಷ ಕೇಳಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಅಷ್ಟೂಮೊತ್ತ ಕೊಡಲು ನಿರ್ಮಾಪಕರು ಒಪ್ಪಿದ್ದಾರೆ ಎನ್ನಲಾಗಿದೆ.

ಈಗಾಗಲ ಬಿಗ್‌ಬಾಸ್‌ ಪ್ರೋಮೋ ಬಿಡುಗಡೆಯಾಗಿದೆ. ಅದರಲ್ಲಿ 'ಬಿಗ್‌ಬಾಸ್ ಕಾಡಿಗೆ ಈ ಬಾರಿ ಬಹಳ ವಿಚಿತ್ರ ಪ್ರಾಣಿಗಳು ಬರಲಿವೆ ಎಂದು ಹೇಳಲಾಗಿದೆ. ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ಸಿಂಭಾ ನಾಗ್‌ಪಾಲ್, ಅಫ್ಸಾನಾ ಖಾನ್ ಅವರುಗಳು ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ.

ಇವರಲ್ಲದೇಉಮರ್ ರಿಯಾಜ್, ದೋನಲ್ ಬಿಷ್ಟ್, ಪ್ರತೀಕ್ ಸೆಹೆಜ್‌ಪಾಲ್, ನಿಶಾಂತ್ ಭಟ್, ರಾಖಿ ಸಾವಂತ್ ಪತಿ ರಿತೇಶ್, ವಿಶಾಲ್ ಕೋಟಿಯಾನ್, ಅಕಾಶಾ ಸಿಂಗ್ ಅವರು ಕೂಡ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT