ಶುಕ್ರವಾರ, ಮಾರ್ಚ್ 24, 2023
30 °C

ಪ್ರಿಯಾಂಕಾ ಚೌಧರಿ, ಸಾಜಿದ್ ಖಾನ್ ಅವರೊಂದಿಗೆ ನಟಿಸಲು ಬಯಸುತ್ತೇನೆ: ಸಲ್ಮಾನ್ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಚೌಧರಿ ಮತ್ತು ಸಾಜಿದ್ ಖಾನ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಹಿಂದಿಯ ಬಿಗ್ ಬಾಸ್–16 ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಸಿಮಿ ಗರೆವಾಲ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿರುವ ಸಲ್ಮಾನ್, ಈ ಸೀನನ್‌ನ ಸ್ಪರ್ಧಿಯಾಗಿರುವ ಪ್ರಿಯಾಂಕಾ ಚೌಧರಿ ಹಾಗೂ ಸಾಜಿದ್ ಖಾನ್ ಅವರೊಂದಿಗೆ ಮುಂಬರುವ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

ಸಲ್ಮಾನ್ ಖಾನ್‌ ಈ ಹಿಂದೆ, ಪ್ರಿಯಾಂಕಾ ಅವರನ್ನು 'ಹೀರೋಯಿನ್ ಮೆಟಿರಿಯಲ್' ಎಂದು ಅಭಿನಂದಿಸಿದ್ದರು. 

 ಈ ವಾರ ಬಿಗ್ ಬಾಸ್ ಸೀಸನ್‌ನಲ್ಲಿ ಕುಟುಂಬದವರನ್ನು ಭೇಟಿ ಮಾಡುವ ಸಂಚಿಕೆ ಪ್ರಸಾರವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು