7

ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್

Published:
Updated:
ರಕ್ಷಿತಾ 

ಜೀ ಕನ್ನಡ ವಾಹಿನಿಯಲ್ಲಿ ಇದೇ 7ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌’ ರಿಯಾಲಿಟಿ ಶೋ ನಡೆಯಲಿದೆ.

ಕನ್ನಡ ಚಿತ್ರರಂಗಕ್ಕೆ ಹಾಸ್ಯ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ನಡೆದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಯಶಸ್ಸು ಕಂಡಿತ್ತು. ಸೀಸನ್ 1ರಲ್ಲಿ ನಕ್ಕು ನಲಿಸಿದ ಕಾಮಿಡಿ ಕಿಲಾಡಿಗಳ ಜೊತೆಗೆ ಅವರಷ್ಟೇ ಸರಿಸಮಾನರಾಗಿ ಜನಮೆಚ್ಚುಗೆ ಗಳಿಸಿದ ಸೀಸನ್ 2 ಕಾಮಿಡಿ ಕಿಲಾಡಿಗಳೆಲ್ಲರೂ ತಂಡಗಳಾಗಿ ರೂಪುಗೊಂಡು ನಗಿಸಲು ಸಜ್ಜಾಗಿದ್ದಾರೆ.

ಚಂದನವನದ ಹಾಸ್ಯ ಕಲಾವಿದರು ತಮ್ಮ ವೃತ್ತಿ ಬದುಕಿನ ಅನುಭವವನ್ನು ಪರಿಚಯಿಸುವುದರ ಜೊತೆಗೆ ಕಾಮಿಡಿ ಕಿಲಾಡಿಗಳಿಗೆ ನಟನೆಯ ಮಾರ್ಗದರ್ಶನ ನೀಡಲಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್ ಮತ್ತು ನಟಿ ರಕ್ಷಿತಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಾಸ್ಟರ್ ಆನಂದ್ ಅವರ ನಿರೂಪಣೆ ಮಾಡಲಿದ್ದಾರೆ.

6 ತಂಡಗಳನ್ನು ಪ್ರತಿನಿಧಿಸುವ 3 ನಿರ್ಣಾಯಕರು ಮತ್ತು ರಾಯಭಾರಿಗಳ ಮುಖಾಮುಖಿಯಲ್ಲಿ ನಗೆಯ ಕಾಳಗದೊಂದಿಗೆ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ವಾಹಿನಿಯ ಮುಖ್ಯಸ್ಥರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !