ಬುಧವಾರ, ಜೂನ್ 3, 2020
27 °C

ಧಾರಾವಾಹಿ:ಹೊಸ ಕಂತು ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಲಾಕ್‌ಡೌನ್‌ ಕಾರಣಕ್ಕೆ ಟಿ.ವಿ. ಧಾರಾವಾಹಿಗಳ ಚಿತ್ರೀಕರಣ ಸ್ಥಗಿತವಾಗಿದ್ದು, ಧಾರಾವಾಹಿಗಳ ಹೊಸ ಕಂತುಗಳು ಪ್ರಸಾರವಾಗದೆ ಇದ್ದಿದ್ದು ಹಳೆಯ ಸುದ್ದಿ. ಎಲ್ಲವೂ ಅಂದುಕೊಂಡಂತೆ ಆದರೆ, ಮೇ 3ರ ನಂತರ ಲಾಕ್‌ಡೌನ್‌ ತೆರವಾದರೆ ಧಾರಾವಾಹಿಗಳ ಹೊಸ ಕಂತುಗಳನ್ನು ವೀಕ್ಷಕರು ಎಂದಿನಿಂದ ನೋಡಬಹುದು?

‘ಲಾಕ್‌ಡೌನ್‌ ತೆರವಾದ ತಕ್ಷಣದಲ್ಲೇ ಧಾರಾವಾಹಿ ತಂಡಗಳು ಚಿತ್ರೀಕರಣ ಶುರು ಮಾಡಿದರೂ ಎಡಿಟಿಂಗ್ ಕೆಲಸ ಪೂರ್ಣಗೊಳಿಸಿ, ವೀಕ್ಷಕರಿಗೆ ಒದಗಿಸಲು ಒಂದು ವಾರ ಬೇಕಾಗಬಹುದು’ ಎನ್ನುತ್ತಾರೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್.

ಅಂದರೆ, ಮೇ 11ರ ಸುಮಾರಿಗೆ ವೀಕ್ಷಕರಿಗೆ ಧಾರಾವಾಹಿಗಳ ಹೊಸ ಕಂತುಗಳನ್ನು ಕಾಣುವ ಅವಕಾಶ ಲಭಿಸುವ ನಿರೀಕ್ಷೆ ಇದೆ.

ಕನ್ನಡದ ಹಲವು ಧಾರಾವಾಹಿಗಳು ಈಗ ಹಳೆಯ ಕಂತುಗಳನ್ನೇ ಪ್ರಸಾರ ಮಾಡುತ್ತಿವೆ. ಕೆಲವೇ ಕೆಲವು ಧಾರಾವಾಹಿಗಳು ಮಾತ್ರ ಹೊಸ ಕಂತುಗಳನ್ನು ನೀಡುತ್ತಿವೆ. ‘ಅವರು ಒಂದೊಂದು ಕಂತಿನ ಅವಧಿಯನ್ನು ಕಿರಿದು ಮಾಡಿದ್ದಾರೆ. ಅಲ್ಲದೆ, ಹಿಂದಿನ ಕಂತಿನಲ್ಲಿ ಆಗಿದ್ದನ್ನು ರಿಕ್ಯಾಪ್‌ ಎಂದು ತೋರಿಸುವ ಭಾಗವನ್ನು ಒಂದಿಷ್ಟು ಹಿಗ್ಗಿಸಿಕೊಂಡಿದ್ದಾರೆ. ತಮ್ಮ ಸಂಗ್ರಹದಲ್ಲಿ ಇರುವ ಕಂತುಗಳನ್ನು ತುಸು ಹೆಚ್ಚು ದಿನಗಳಿಗೆ ಆಗುವಂತೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದರು ಶಿವಕುಮಾರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು