ಡಿಕೆಡಿಯ ಸ್ಮರ್ಧಿಗಳನ್ನು ನಟ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಕರೆದುಕೊಂಡು ಹೋಗಿರುವ ವಿಡಿಯೊವನ್ನು ಜೀ ಕನ್ನಡ ವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಜೀ ಕನ್ನಡ ವಾಹಿನಿ ಹಂಚಿಕೊಂಡ ವಿಡಿಯೊದಲ್ಲಿ, ‘ಸದ್ಯ, ಡಿಕೆಡಿಯ ತೀರ್ಪುಗಾರರಾಗಿರುವ ಶಿವರಾಜ್ ಕುಮಾರ್ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ತಂಡದವರನ್ನು ತಮ್ಮ ತಂದೆ ರಾಜಕುಮಾರ್ ಅವರ ನಿವಾಸವಾದ ಗಾಜನೂರಿಗೆ ಕರೆದುಕೊಂಡು ಹೋಗಿದ್ದಾರೆ. ಆ ಮನೆಯಲ್ಲಿನ ತಮ್ಮ ಬಾಲ್ಯದ ನೆನಪುಗಳನ್ನು ಶಿವಣ್ಣ ಅವರು ಸ್ಪರ್ಧಿಗಳ ಜತೆ ಹಂಚಿಕೊಂಡಿದ್ದಾರೆ. ನಿರೂಪಕಿ ಅನುಶ್ರೀ, ಪ್ರೀತಮ್, ಪೂಜಾ, ಮೋನಿಷಾ ಕವಿತಾ ಮತ್ತು ಪ್ರಭು, ಮಹೇಂದ್ರ ಸೇರಿ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಗಾಜನೂರಿಗೆ ಆಗಮಿಸಿದ ಸ್ಪರ್ಧಿಗಳಿಗೆ ಶಿವರಾಜ್ ಕುಮಾರ್ ದಂಪತಿ ಊಟ ಹಾಕಿಸುವ ಮೂಲಕ ಅತಿಥ್ಯ ಸತ್ಕಾರ ಮಾಡಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಸ್ಪರ್ಧಿಗಳು ಹಳ್ಳಿಯ ಮನೆಯ ಸುತ್ತಲಿನ ವಾತಾವರಣವನ್ನು ಆನಂದಿಸಿದ್ದಾರೆ. ಈ ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.