ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮನೆಯ ಯಜಮಾನ, ಸಹೋದರ ವೀರು ಹಾಗೂ ಕುಟುಂಬಸ್ಥರನ್ನು ವಿಜಯಾಂಬಿಕಾ ಮನೆಯಿಂದ ಹೊರ ಹಾಕಿದ್ದಾಳೆ.

ವೀರುವಿನಿಂದ ಪತ್ಮಿ ನಂದಿನಿ, ಪುತ್ರಿ ಶ್ರಾವಣಿ ಹಾಗೂ ಸ್ನೇಹಿತ ಪೃಥ್ವಿ ತನ್ನ ಸಂಚಿನಿಂದ ದೂರ ಮಾಡಿದ್ದಳು. ಆದಾದ ಬಳಿಕ ವೀರು ಆಸ್ತಿಯನ್ನು ಅಕ್ಕ ವಿಜಯಾಂಬಿಕಾ ಮೋಸದಿಂದ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಳು.

ಈಗ, ಅವಳು ಮಾಡಿದ್ದ ಮೋಸಗಳು ಎಲ್ಲವೂ ವೀರು ಮುಂದೆ ಬಯಲಾಗಿದೆ. ಇದಕ್ಕೆ ಕೋಪಗೊಂಡ ವೀರು ಅವಳಿಗೆ ಕೆನ್ನೆ ಹೊಡೆದು ಮನೆಯಿಂದ ಹೊರ ಹೋಗುವಂತೆ ಹೇಳಿದ್ದನು.

ಆದರೆ, ಅವಳು ವೀರು ಹಾಗೂ ಅವನ ಪುತ್ರಿ ಶ್ರಾವಣಿಯನ್ನೇ ಯಾಮಾರಿಸಿ ಎಲ್ಲಾ ಆಸ್ತಿಯನ್ನು ಕಬಳಿಸಿದ್ದಾಳೆ. ಇಷ್ಟು ದಿನ ಆಸರೆಯಾಗಿದ್ದ ವೀರು ಮನೆಯರನ್ನೇ ಹೊರ ಹಾಕಿದ್ದಾಳೆ.

ಶ್ರಾವಣಿ, ಸುಬ್ರಮಣ್ಯ, ನಂದಿನಿಗೆ ಈ ವಿಷಯ ತಿಳಿದಿಲ್ಲ. ವಿಜಯಾಂಬಿಕಾಳ ಮೋಸಕ್ಕೆ ಒಳಗಾದ ವೀರು ಮುಂದಿನ ನಿರ್ಧಾರ ಏನು ಎಂಬುವುದು ಕೂತುಹಲಕಾರಿ ಸಂಚಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.