ಕಿರುತೆರೆಯ ನಿಕಟ ದೃಶ್ಯವೇ ಮುಳುವಾಯಿತೇ?: ನಟಿ ಚಿತ್ರಾ ಪತಿ ಹೇಮಂತ್ ಬಂಧನ

ಚೆನ್ನೈ: ತಮಿಳಿನ ಕಿರುತೆರೆ ನಟಿ ಚಿತ್ರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹೇಮಂತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳಿಗೆ ಸಾಯುವ ಹಾಗೆ ಹೊಡೆದಿದ್ದಾನೆ ಎಂದು ನಟಿಯ ತಾಯಿ ಆರೋಪಿಸಿದ ಒಂದು ದಿನದ ಬಳಿಕ ಬಂಧಿಸಿ ಕರೆದೊಯ್ದಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವುದು ಸಾಬೀತಾಗಿದ್ದು, ಹಣಕಾಸಿನ ಸಮಸ್ಯೆ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಎಂದು ಹೇಳಲಾಗುತ್ತಿದೆ.
ಬಂಧಿತನಾಗಿರುವ ನಟಿಯ ಪತಿ ಹೇಮಂತ್, ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ಧಾನೆ.
ಡಿಸೆಂಬರ್ 10ರಂದು ಚೆನ್ನೈನ ಹೊರವಲಯದ ಹೋಟೆಲೊಂದರಲ್ಲಿ ನಟಿ ಚಿತ್ರಾ ಮೃತದೇಹ ಪತ್ತೆಯಾಗಿತ್ತು.
ಕೆಲ ತಿಂಗಳ ಹಿಂದಷ್ಟೇ ಚಿತ್ರಾ ಮತ್ತು ಹೇಮಂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ಧಾರಾವಾಹಿಯಲ್ಲಿ ಚಿತ್ರಾ ನಿಕಟ ದೃಶ್ಯಗಳಲ್ಲಿ ನಟಿಸುತ್ತಿದ್ದ ಬಗ್ಗೆ ಹೇಮಂತ್ ಅಸಮಾಧಾನಗೊಂಡಿದ್ದರು
`ಕಿರುತೆರೆಯಲ್ಲಿ ಚಿತ್ರಾ ನಟಿಸಿದ್ದ ದೃಶ್ಯ ಹೇಮಂತ್‌ಗೆ ಇಷ್ಟವಾಗಿರಲಿಲ್ಲ. ಚಿತ್ರಾ ಸಾವಿಗೆ ಮೊದಲು ಅವರಿಬ್ಬರ ನಡುವೆ ಜಗಳ ನಡೆದಿತ್ತು. ಹೇಮಂತ್ ಆಕೆಯನ್ನು ತಳ್ಳಿದ್ದ' ಎಂದು ಎಸಿಪಿ ಸುದರ್ಶನ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.