ಮಂಗಳವಾರ, ಜೂನ್ 28, 2022
27 °C

ಕಿರುತೆರೆ ಹಿರಿಯ ನಟಿ ತರ್ಲಾ ಜೋಶಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕಿರುತೆರೆಯ ಹಿರಿಯ ನಟಿ ತರ್ಲಾ ಜೋಶಿ (90) ಅವರು ಹೃದಯಾಘಾತದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.

ಈ ಬಗ್ಗೆ ಸ್ಟಾರ್‌ಪ್ಲಸ್‌ ಶೋ ‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ಜೋಶಿಯ ಸಹ ನಟಿ ಅಂಜು ಮಹೇಂದ್ರೂ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ತರ್ಲಾ ಜೋಶಿ ಅವರು ಅಜ್ಜಿಯ ಪಾತ್ರವನ್ನು ಅಭಿನಯಿಸಿದ್ದರು. ಗುಜರಾತಿ ಭಾಷೆಯ ಹಲವು ಸಿನಿಮಾಗಳಲ್ಲೂ ನಟಿಸಿದ್ದರು.

ತರ್ಲಾ ಜೋಶಿ ಅವರು ‘ಸಾರಾಭಾಯಿ ವರ್ಸರ್ಸ್‌ ಸಾರಾಭಾಯಿ’,‘ಬಾಂದಿನಿ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದರು. 

‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದ ನಿಯಾ ಶರ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು