ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಜೀವನದ ವಿಸ್ಮಯ

Last Updated 26 ಜನವರಿ 2019, 19:30 IST
ಅಕ್ಷರ ಗಾತ್ರ

1. ಗಿಣಿಗಳಲ್ಲಿ ಹಲವಾರು ವಿಧಗಳಿವೆ. ಸುಮಾರು 380 ಪ್ರಭೇದಗಳಿವೆ. ಅವುಗಳಲ್ಲಿ ಎರಡು ಬಗೆಯ ಗಿಣಿಗಳು ಚಿತ್ರ-1 ಮತ್ತು ಚಿತ್ರ-2ರಲ್ಲಿವೆ. ಈ ಗಿಣಿ ವಿಧಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
ಅ. ಲೋರಿಕೀಟ್ ಬ. ಪ್ಯಾರಟ್ ಕ. ಮಕಾ
ಡ. ಅಮೆಜಾನ್ ಇ . ಕೊಕ್ಯಾಟೋ
ಈ. ಪ್ಯಾರಾಕೀಟ್ ಉ. ಬಡ್ಜೆರಿಯಾರ್

2. ಅತ್ಯಂತ ಪರಿಚಿತವಾದ ಒಂದು ಪ್ರಾಣಿ ಚಿತ್ರ-3 ರಲ್ಲಿದೆ :
ಅ. ಈ ಪ್ರಾಣಿ ಯಾವುದು?
ಬ. ಈ ಪ್ರಾಣಿ ಮನುಷ್ಯರಿಗೆ ಹತ್ತಿರದ ಸಂಬಂಧಿ ಹೇಗೆ?

3. ಬಲಿಷ್ಠ ಬೇಟೆಗಾರ ಪ್ರಾಣಿಯಾದ ‘ಮೊಸಳೆ’ ಚಿತ್ರ-4 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ ಯಾವುದು ಮೊಸಳೆ ವಿಧ ಅಲ್ಲ?
ಅ. ಕೇಮ್ಯಾನ್ ಬ. ಮಗ್ಗರ್
ಕ. ಜಾಗ್ವಾರ್
ಡ. ಘವಿಯಲ್
ಇ. ಆಲಿಗೇಟರ್

4. ಸ್ತನಿ ವರ್ಗದ ಪ್ರೈಮೇಟ್ ಗುಂಪಿನ ಪ್ರಸಿದ್ಧ ಪ್ರಾಣಿ ‘ಲೀಮರ್’ ಚಿತ್ರ-5 ರಲ್ಲಿದೆ. ಲೀಮರ್ ಗಳಲ್ಲಿ 105 ಪ್ರಭೇದಗಳಿವೆ. ಹಾಗಿದ್ದೂ ಅವೆಲ್ಲವೂ ಧರೆಯ ಒಂದೇ ಒಂದು ದ್ವೀಪದಲ್ಲಿ ನೆಲೆಗೊಂಡಿವೆ. ಆ ದ್ವೀಪ ಯಾವುದು ಗೊತ್ತೇ?
ಅ. ನ್ಯೂಜಿಲ್ಯಾಂಡ್ ಬ. ಹವಾಯ್
ಕ. ಶ್ರೀಲಂಕಾ ಡ. ಬೋರ್ನಿಯೋ
ಇ. ಮಡಗಾಸ್ಕರ್ ಈ. ಟಾಸ್ಮೇನಿಯಾ

5. ಆಳ ಕಡಲಿನಲ್ಲಿ ಕಾಣಬಹುದಾದ ಮತ್ಸ್ಯ ಸಂಬಂಧೀ ದೃಶ್ಯವೊಂದು ಚಿತ್ರ-6 ರಲ್ಲಿದೆ. ಈ ದೃಶ್ಯ ಏನೆಂದು ಗುರುತಿಸಬಲ್ಲಿರಾ?
ಅ. ಮರಿ ಮೀನಿಗೆ ತಾಯಿ ಮೀನಿನ ಕಾವಲು
ಬ. ಮರಿ ಮೀನಿಗೆ ಆಹಾರ ನೀಡಿಕೆ
ಕ. ಗಾಳ ಹಾಕಿ ಸೆಳೆದು ಬೇಟೆ
ಡ. ಶತ್ರುವನ್ನು ಬೆದರಿಸುತ್ತಿರುವ ಚಿಕ್ಕ ಮೀನು

6. ಪುಕ್ಕ-ಗರಿಗಳ ವಿಶಿಷ್ಟ ವೇಷದ ಬೇಟೆಗಾರ ಹಕ್ಕಿಯೊಂದು ಚಿತ್ರ-7 ರಲ್ಲಿದೆ. ಈ ಹಕ್ಕಿ ಯಾವುದು?
ಅ. ಸೆಕ್ರೆಟರಿ ಹಕ್ಕಿ ಬ. ನವಿಲು ಕ. ರಣ ಹದ್ದು
ಡ. ಫ್ಲೆಮಿಂಗೋ ಇ. ರೋಡ್ ರನ್ನರ್

7. ಮೀನುಗಳಿಗೆ ಸಂಬಂಧಿಸಿಯೇ ಇಲ್ಲದ, ಹಾಗಿದ್ದೂ ಹೆಸರಿನಲ್ಲಿ ಮೀನನ್ನು ಹೊಂದಿರುವ ಸಾಗರ ಪ್ರಾಣಿ ‘ನಕ್ಷತ್ರ ಮೀನು’ ಚಿತ್ರ-8ರಲ್ಲಿದೆ. ಇದೇ ರೀತಿ ಮೀನು ಅಲ್ಲದ ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ
ಅ. ಬೆಳ್ಳಿ ಮೀನು ಬ. ಹಾರುವ ಮೀನು
ಕ. ಹುಲಿ ಮೀನು ಡ. ಜೀಬ್ರಾ ಮೀನು
ಇ. ಕಟ್ಲ್ ಮೀನು ಈ. ಖಡ್ಗ ಮೀನು
ಉ. ಮುಳ್ಳು ಹಂದಿ ಮೀನು

8. ಕೀಟ ವರ್ಗಕ್ಕೇ ಸೇರಿದ್ದು, ಆ ವರ್ಗದಲ್ಲೂ ಒಂದೇ ಕುಟುಂಬಕ್ಕೆ ಸೇರಿರುವ ‘ಚಿಟ್ಟೆ ಮತ್ತು ಪತಂಗ’ಗಳ ಒಂದೊಂದು ಪ್ರಭೇದ ಕ್ರಮವಾಗಿ ಚಿತ್ರ-9 ಮತ್ತು ಚಿತ್ರ-10 ರಲ್ಲಿವೆ. ಕೀಟ ವರ್ಗದಲ್ಲಿ ಚಿಟ್ಟೆ ಮತ್ತು ಪತಂಗಗಳು ಯಾವ ಕುಟುಂಬಕ್ಕೆ ಸೇರಿವೆ ?
ಅ. ಕೋಲಿಯಾಪ್ಟೆರಾ ಬ. ಲೆಪಿಡಾಪ್ಟೆರಾ
ಕ. ಡೈಪ್ಟೆರಾ ಡ. ಹೈಮನಾಪ್ಟೆರಾ
ಇ. ಹೆಮಿಪ್ಟೆರಾ

9. ‘ಭಾರೀ ಬೆಕ್ಕುಗಳು’ ಎಂದೇ ವರ್ಗೀಕರಿಸಲಾಗಿರುವ ಎಂಟು ವಿಧ ಬೆಕ್ಕುಗಳಲ್ಲೊಂದು ಚಿತ್ರ-11ರಲ್ಲಿದೆ:
ಅ. ಯಾವುದು ಈ ಬೆಕ್ಕು ?
ಬ. ಈ ಬಗೆಯ ಬೆಕ್ಕು ಯಾವ ಯಾವ ಭೂ ಖಂಡಗಳಲ್ಲಿ ನೈಸರ್ಗಿಕ ನೆಲೆಯನ್ನು ಹೊಂದಿದೆ?

10. ಮಂಗಗಳ ಎರಡು ವಿಖ್ಯಾತ ವಿಧಗಳು ಚಿತ್ರ-12 ಮತ್ತು ಚಿತ್ರ-13ರಲ್ಲಿವೆ. ಈ ಕೆಳಗೆ ಹೆಸರಿಸಿರುವ ಕೆಲ ಪ್ರಸಿದ್ಧ ಮಂಗಗಳ ಪಟ್ಟಿಯಲ್ಲಿ ಚಿತ್ರಗಳಲ್ಲಿರುವ ಮಂಗಗಳನ್ನು ಗುರುತಿಸಬಲ್ಲಿರಾ ?
ಅ. ಲಂಗೂರ್ ಬ. ಉವಕಾರೀ
ಕ. ಮ್ಯಾಂಡ್ರಿಲ್ ಡ. ಹೌಲರ್
ಇ. ಕೊಲೋಬಸ್ ಈ. ಮೆಕಾಕ್
ಉ. ಬಬೂನ್ ಟ. ಕಪೂಚಿನ್
ಣ. ಮಾರ್ಮಾಸೆಟ್ ಸ. ಜೇಡ ಮಂಗ

11. ಹೊಂದಿಸಿ ಕೊಡಿ :
1. ಸಲಮ್ಯಾಂಡರ್‌ ಅ. ಸರ್ಪ
2. ಪಫಿನ್ ಬ. ಹಲ್ಲಿ
3. ಮಾಂಬಾ ಕ. ಕೀಟ
4. ಸಾಲ್ಮನ್ ಡ. ಹಕ್ಕಿ
5. ಗೆಕೋ ಇ. ಮತ್ಸ್ಯ
6. ಕಣಜ ಈ. ಉಭಯವಾಸಿ

ಉತ್ತರಗಳು :

1. ಚಿತ್ರ 1 - ಕೊಕ್ಯಾಟೋ ; ಚಿತ್ರ 2 - ಮಕಾ
2. ಅ. ಬಾವಲಿ. ಬ. ಅದೂ ಮನುಷ್ಯರಂತೆ ಸ್ತನಿ ವರ್ಗಕ್ಕೆ ಸೇರಿದೆ
3. ಕ. ಜಾಗ್ವಾರ್. ಇದು ಮೊಸಳೆ ಅಲ್ಲ
4. ಇ. ಮಡಗಾಸ್ಕರ್
5. ಕ. ಗಾಳ ಹಾಕಿ ಬೇಟೆ
6. ಇ. ರೋಡ್ ರನ್ನರ್
7. ಬೆಳ್ಳಿ ಮೀನು ಮತ್ತು ಕಟ್ಲ್ ಮೀನು. ಇವು ಮೀನುಗಳಲ್ಲ
8. ಬ. ಲೆಪಿಡಾಪ್ಟೆರಾ
9. ಅ. ಚಿರತೆ ; ಬ. ಆಫ್ರಿಕ ಮತ್ತು ಏಷ್ಯಾ
10. ಚಿತ್ರ 12 - ಉವಕಾರೀ. ಚಿತ್ರ 13 - ಬಬೂನ್
11. 1. ಈ ; 2. ಡ ; 3. ಅ ; 4. ಇ ; 5. ಬ ; 6. ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT