ವೆಬ್‌ ಸರಣಿಯಲ್ಲಿ ಅಕ್ಷಯ್ ಆ್ಯಕ್ಷನ್‌

ಶನಿವಾರ, ಮಾರ್ಚ್ 23, 2019
34 °C

ವೆಬ್‌ ಸರಣಿಯಲ್ಲಿ ಅಕ್ಷಯ್ ಆ್ಯಕ್ಷನ್‌

Published:
Updated:
Prajavani

ಬಿ ಟೌನ್‌ನ ‘ರಫ್‌ ಆ್ಯಂಡ್‌ ಟಫ್‌ ಗಯ್‌’ ಅಕ್ಷಯ್‌ ಕುಮಾರ್‌ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಆ್ಯಕ್ಷನ್‌–ಅಡ್ವೆಂಚರ್‌–ಥ್ರಿಲ್ಲರ್‌ ಕತೆಯುಳ್ಳ ವೆಬ್‌ ಸರಣಿ ‘ದಿ ಎಂಡ್‌’ನಲ್ಲಿ ಅಕ್ಷಯ್‌ ಕಥಾನಾಯಕನಾಗಿ ನಟಿಸಲಿದ್ದಾರೆ. 

ಮುಂಬೈನಲ್ಲಿ ಕಳೆದ ವಾರ ಅಮೆಜಾನ್‌ ಪ್ರೈಮ್‌ ವಿಡಿಯೊ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅಕ್ಷಯ್‌ ಅಕ್ಷರಶಃ ಸಾಹಸಮಯವಾಗಿ ಎಂಟ್ರಿ ಕೊಟ್ಟಿದ್ದರು. ಧರಿಸಿದ್ದ ಸೂಟು ತುಂಬಾ ಬೆಂಕಿ ಹಚ್ಚಿಸಿಕೊಂಡು ಕ್ಯಾಟ್‌ವಾಕ್‌ ಮಾಡಿ ಪ್ರೇಕ್ಷಕರು ಉಸಿರುಗಟ್ಟಿ ನೋಡುವಂತೆ ಮಾಡಿದ್ದರು. ಅದೇ ವೇದಿಕೆಯಲ್ಲಿ ಅಕ್ಷಯ್‌ ತಮ್ಮ ವೆಬ್‌ ಸರಣಿ ಪ್ರವೇಶದ ಬಗ್ಗೆ ಮಾತನಾಡಿದ್ದರು. ಅಸಲಿಗೆ, ಇದು ‘ದಿ ಎಂಡ್‌’ನ ಮೊದಲ ಹೆಜ್ಜೆಯೇ ಆಗಿತ್ತು. 

ಅಕ್ಷಯ್‌ ನಟಿಸಿದ ಬಹುತೇಕ ಚಿತ್ರಗಳು ವಿಶಿಷ್ಟ ಮತ್ತು ವಿಭಿನ್ನ ಕತೆಗಳನ್ನು ಹೇಳಿದ್ದವು.

‘ದಿ ಎಂಡ್‌’ ಕೂಡಾ ಅಂತಹುದೇ ವೈಶಿಷ್ಟ್ಯದಿಂದ ಕೂಡಿರುತ್ತದೆ ಎನ್ನಲಾಗಿದೆ. ಅಬಂಡೆನ್ಷಿಯಾ ಎಂಟರ್‌ಟೇನ್‌ನಮೆಂಟ್‌ ನಿರ್ಮಿಸಲಿರುವ ಈ ಸರಣಿ ಅಮೆಜಾನ್‌ ಒರಿಜಿನಲ್‌ನಲ್ಲಿ ಪ್ರಸಾರವಾಗಲಿದೆ. 

51ರ ಹರೆಯದ ಅಕ್ಷಯ್‌ಗೆ ಡಿಜಿಟಲ್‌ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದೇ ಥ್ರಿಲ್ಲಿಂಗ್ ಆಗಿದೆಯಂತೆ. ‘ಯುವಜನರು ಸಮಯ ಸಿಕ್ಕಿದಾಗಲೆಲ್ಲ ಈ ಕ್ಷೇತ್ರಕ್ಕೆ ಹಣಕಿಹಾಕುತ್ತಾರೆ. ಅಂತಹ ಜನಪ್ರಿಯ ಮಾಧ್ಯಮಕ್ಕೆ ನನ್ನ ನಟನೆಯನ್ನು ವಿಸ್ತರಿಸಿಕೊಂಡು ಹೊಸತನವನ್ನು ನೀಡಲು ಪ್ರಯತ್ನಿಸುತ್ತೇನೆ’ ಎಂದು ಅಕ್ಷಯ್‌ ಹೇಳಿಕೊಂಡಿದ್ದಾರೆ.

‘ದಿ ಎಂಡ್‌’ ಚಿತ್ರೀಕರಣಕ್ಕೂ ಮೊದಲೇ ಭಾರಿ ಕುತೂಹಲ ಹುಟ್ಟಿಸಿದೆ. ಅಕ್ಷಯ್‌ ಅಲ್ಲಿ ಯಾವ ರೀತಿ ಸಾಹಸ ಮಾಡುತ್ತಾರೋ ಕಾದು ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !