ಮತ್ತೆ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮ

7

ಮತ್ತೆ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮ

Published:
Updated:
Deccan Herald

ಜೀ ಕನ್ನಡ ವಾಹಿನಿಯು 2007ರಲ್ಲಿ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮದ ಮೊದಲ ಸರಣಿ ಆರಂಭಿಸಿತ್ತು. ಈ ಕಾರ್ಯಕ್ರಮ ಜನರ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿತ್ತು. ಮತ್ತೆ ಹೊಸ ರೂಪದೊಂದಿಗೆ ಆಗಸ್ಟ್ 4ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6:30ಕ್ಕೆ ಕಾರ್ಯಕ್ರಮ ಮೂಡಿಬರಲಿದೆ. 

ಕನ್ನಡ ದೃಶ್ಯ ಮಾಧ್ಯಮದಲ್ಲಿ ಜೀ ವಾಹಿನಿಯು ತನ್ನದೇ ಆದ ಸ್ಥಾನ ಪಡೆದಿದೆ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ, ಏಕಕಾಲದಲ್ಲಿಯೇ ಸಾಮಾಜಿಕ ಬದ್ಧತೆ ಉಳಿಸಿಕೊಳ್ಳುವತ್ತಲೂ ಹೆಜ್ಜೆ ಹಾಕುತ್ತಿದೆ.

ಹೆಸರಾಂತ ತಾರೆಯರೊಂದಿಗೆ ‘ಯಾರಿಗುಂಟು ಯಾರಿಗಿಲ್ಲ’ ಸರಣಿ ಆರಂಭವಾಗುತ್ತಿದೆ. ಜೀ ಕನ್ನಡ  ಪರಿವಾರದ ‘ನಾಗಿಣಿ’, ‘ಕಮಲಿ’, ‘ಬ್ರಹ್ಮಗಂಟು’, ‘ಯಾರೇ ನೀ ಮೋಹಿನಿ’, ‘ಗಂಗಾ’, ‘ಜೋಡಿಹಕ್ಕಿ’, ‘ಮಹಾದೇವಿ’, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಶೋಗಳ ಕಲಾವಿದರು ಪ್ರತ್ಯೇಕ ತಂಡಗಳಾಗಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಈ ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲೂ 6 ಜನ ತಾರೆಯರು ಇರುತ್ತಾರೆ. ಒಟ್ಟು 4 ಸುತ್ತುಗಳು ಇರುತ್ತವೆ. ಪ್ರತಿ ಸುತ್ತಿನಲ್ಲೂ ಮನರಂಜನೆ ನೀಡುವ ಉದ್ದೇಶ ಹೊಂದಲಾಗಿದೆ. 

ಹೊಸ ನೋಟ, ಹೊಸ ಆಟದ ಜೊತೆ ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ಅಪ್ಪಣ್ಣ ಹಾಗೂ ಸೂರಜ್ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !