ಗುರುವಾರ , ಮೇ 28, 2020
27 °C

ಜೀ ವೀಕ್ಷಕರಿಗೆ ಈ ವಾರ ಡಬಲ್ ಧಮಾಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜೀ ಕನ್ನಡ’ ವಾಹಿನಿಯು ಈ ವಾರ ‘ಡ್ರಾಮಾ ಜೂನಿಯರ್ಸ್-3’ ಹಾಗೂ ‘ಸರಿಗಮಪ-15’ ಮೂಲಕ ವಿಶೇಷ ಮನರಂಜನೆ ನೀಡಲು ಸಜ್ಜಾಗಿದೆ. ಇದಕ್ಕೆ ವಾಹಿನಿ ‘ಡಬಲ್ ಧಮಾಕಾ’ ಎಂಬ ಹೆಸರಿತ್ತಿದೆ.

70ನೇ ಗಣರಾಜ್ಯೋತ್ಸವ ಪ್ರಯುಕ್ತ ಡ್ರಾಮಾ ಜೂನಿಯರ್ಸ್‌ನ ಮೂರೂ ಸೀಸನ್ನುಗಳ ಚಿಣ್ಣರು ಹಾಗೂ ಇತರ 150ಕ್ಕೂ ಹೆಚ್ಚು ಮಕ್ಕಳು ಒಗ್ಗೂಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ‘ಭಾರತ ಭಾಗ್ಯವಿಧಾತ’ ಎಂಬ ವಿಶೇಷ ನಾಟಕವನ್ನು ಅಭಿನಯಿಸುತ್ತಿದ್ದಾರೆ. ಇದರ ಜೊತೆಗೇ, ವೀರ ಯೋಧರ ಕಥೆ ಹೊಂದಿರುವ ‘ಗಡಿ ಭಾವೈಕ್ಯತೆ’ ಎಂಬ ನಾಟಕ, ರಾಷ್ಟ್ರಕವಿ ಕುವೆಂಪು ರಚಿಸಿದ ‘ಶ್ರೀರಾಮಾಯಣ ದರ್ಶನಂ’ನಲ್ಲಿ ಬರುವ ವಾಲಿವಧೆ ಪ್ರಸಂಗವನ್ನು ಕೂಡ ನಾಟಕ ರೂಪದಲ್ಲಿ ಅಭಿನಯಿಸಿ ತೋರಿಸಲಿದ್ದಾರೆ. ಮೂರೂ ನಾಟಕಗಳು ಶನಿವಾರ (ಜನವರಿ 26) ರಾತ್ರಿ 8 ಗಂಟೆಗೆ ಪ್ರಸಾರವಾಗಲಿವೆ.

‘ಸರಿಗಮಪ’ ಸಂಚಿಕೆಯಲ್ಲಿ ಕಳೆದ ಸೀಸನ್‍ಗಳ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಈ ಸೀಸನ್ನಿನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇದು ಭಾನುವಾರ (ಜನವರಿ 27) ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.