ಪರಿಸರ ಸ್ನೇಹಿ ಬ್ಯಾಗ್‌ಗಳ ಮೂಲಕ ಜಾಗೃತಿ

ಗುರುವಾರ , ಜೂಲೈ 18, 2019
23 °C

ಪರಿಸರ ಸ್ನೇಹಿ ಬ್ಯಾಗ್‌ಗಳ ಮೂಲಕ ಜಾಗೃತಿ

Published:
Updated:
Prajavani

ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ಸಿದ್ದಪಡಿಸಿದ್ದ 500ಕ್ಕೂ ಹೆಚ್ಚು ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ಗಳನ್ನು ರಸ್ತೆ ಬದಿಯಿರುವ ಅಂಗಡಿಗಳಿಗೆ ಉಚಿತವಾಗಿ ವಿತರಿಸಿದರು.

ಇನ್ನೂರಕ್ಕೂ ಹೆಚ್ಚು ಮರಗಳಿಗೆ ಹಸಿರು ಪಟ್ಟಿ ಬರೆದರು. ‘ನನ್ನನ್ನು ಕಡಿಯಬೇಡಿ’ ಎನ್ನುವ ಸಂದೇಶವನ್ನು ಮರಗಳ ಮೇಲೆ ಬರೆದು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಸಿಮೆಂಟ್ ಅಂಗಡಿ, ಇಸ್ತ್ರಿ ಮಾಡುವವರು,  ಮೊಬೈಲ್ ಅಂಗಡಿ, ದೇವಸ್ಥಾನ, ಗ್ಯಾರೇಜ್, ಕಿರಾಣಿ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ರಾಮಮೂರ್ತಿನಗರದ ಬಂಜಾರ ಬಡಾವಣೆಯ ಸ್ಫೂರ್ತಿ ಸಾಗರಿಕ ಪಬ್ಲಿಕ್ ಶಾಲೆ, ಪರಿಸರ ಸಂರಕ್ಷಣಾ ಅಭಿಯಾನವನ್ನು ಈ ರೀತಿ ನೂತನವಾಗಿ ಆಚರಿಸಿತು. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಜಾಗೃತಿ ಕಾರ್ಯದಲ್ಲಿ ತೊಡಗಿದರು.

ಸಸಿಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ, ಹಸಿರೇ ಉಸಿರು, ಗಿಡಮರಗಳನ್ನು ಕಡಿಯಬೇಡಿ, ಸಸಿಗಳನ್ನು ಮಕ್ಕಳಂತೆ ಪೋಷಿಸಿ ಎನ್ನುವ ಘೋಷಣೆಗಳೊಂದಿಗೆ ಕಲ್ಕೆರೆ, ಅಗರ ಮುಖ್ಯರಸ್ತೆ, ಬಂಜಾರ ಬಡಾವಣೆ, ಖಾನೆ ರಸ್ತೆಗಳಲ್ಲಿ ಜಾಥಾ ನಡೆಸಿದರು.

ಶಾಲಾ ಮುಖ್ಯ ಶಿಕ್ಷಕಿ ಎಸ್. ಆರ್.ಜಾನಕಿ ಮಾತನಾಡಿ, ‘ಪರಿಸರದ ಜಾಗೃತಿ ಕುರಿತು ಒಂದು ತಿಂಗಳು ಅಭಿಯಾನ ನಡೆಸಲಾಗುತ್ತದೆ. ಮಕ್ಕಳು ತಮ್ಮ ಕೈಯಿಂದಲೇ ತಯಾರಿಸಿದ ಪೇಪರ್ ಬ್ಯಾಗ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !