ಗುರುವಾರ , ಆಗಸ್ಟ್ 6, 2020
28 °C

ಪುಟಾಣಿಗಳ ಫ್ಯಾಷನ್‌ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ರೂಪದರ್ಶಿಗಳಂತೆ ಮಿಂಚಿದ ಪುಟಾಣಿಗಳು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಟ್ಟೆಗೆ ತಕ್ಕ ಕೇಶ ವಿನ್ಯಾಸ, ಅದಕ್ಕೊಪ್ಪುವ ಆಭರಣಗಳನ್ನು ತೊಟ್ಟುಕೊಂಡಿದ್ದ ಮಕ್ಕಳು, ನಗುಮೊಗದೊಂದಿಗೆ ಹೆಜ್ಜೆ ಹಾಕುವ ಮೂಲಕ, ಫ್ಯಾಷನ್‌ ಜಗತ್ತಿನ ಹಾವ ಭಾವಗಳನ್ನು ಪ್ರದರ್ಶಿಸಿದರು. 

ಹಾಪ್‌ಸ್ಕಾಚ್‌ ಸಂಸ್ಥೆ ಆಯೋಜಿಸಿದ್ದ ಫ್ಯಾಷನ್‌ ವೀಕ್‌ ಕ್ಯಾಟ್‌ವಾಕ್‌ನಲ್ಲಿ ಹತ್ತಾರು ಮಕ್ಕಳು ಭಾಗವಹಿಸಿದ್ದರು. ಈಗಾಗಲೇ ಆನ್‌ಲೈನ್‌ ತಾಣದ ಮೂಲಕ ಪ್ರಸಿದ್ದಿ ಪಡೆದುಕೊಂಡಿರುವ ಈ ಸಂಸ್ಥೆ ಪ್ರತಿದಿನ ಹೊಸತನ ಕಾಪಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿತು. 

ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಪೋಷಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಉಡುಗೆಗಳನ್ನು ತಯಾರಿಸುವುದಾಗಿ ಸಂಸ್ಥೆ ಪ್ರಕಟಿಸಿತು. ಆಧುನಿಕ ಉಡುಗೆಗಳನ್ನು ಕೈಗೆಟುಕುವ ದರದಲ್ಲಿ ನೀಡುವ ಬಗ್ಗೆ ಸಾಕಷ್ಟು ಮಾಹಿತಿ ನೀಡಿತು. 

ಪುಟಾಣಿಗಳು ಮುಗ್ಧ ನಡಿಗೆಯ ಮೂಲಕ ನೆರೆದವರನ್ನು ರಂಜಿಸಿದರು. ಓವರ್‌ ದಿ ರೈನ್‌ಬೊ ಸಂಗ್ರಹಗಳನ್ನು ತೊಟ್ಟುಕೊಂಡಿದ್ದ ಮಕ್ಕಳು ಅದಕ್ಕೆ ತಕ್ಕಂತೆ ರ‍್ಯಾಂಪ್‌ ಮೇಲೆ ನಡೆದರು. ಕಾಮನಬಿಲ್ಲಿನ ಬಣ್ಣದ ಬಟ್ಟೆಗಳು ಹೆಚ್ಚು ಆಕರ್ಷಕವಾಗಿದ್ದವು. ಕೈಯಲ್ಲಿ ಛತ್ರಿಗಳನ್ನು ಹಿಡಿದು ನಡೆದರು. ಮಿನಿ ಸಂಗ್ರಹ ಎಲೆಕ್ಟ್ರಿಕ್‌ ಗ್ರೇ ಮತ್ತು ಗ್ಲಾಮರಸ್‌ ರೇನ್‌ಬೊ ಬೈಟ್ಸ್ ಉಡುಗೆಗಳನ್ನು  ಕೂಡ ಧರಿಸಿ ಗಮನ ಸೆಳೆದರು. 

ಹಾಪ್‌ಸ್ಕಾಚ್‌ ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬಗೆಯ ಸ್ಟೈಲಿಷ್‌ ಉಡುಗೆಗಳನ್ನು ವೆಬ್‌ಸೈಟ್ ಮೂಲಕ ಪ್ರದರ್ಶಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಮಕ್ಕಳ ಪ್ಯಾಷನ್‌ ಟ್ರೆಂಡ್‌ಗೆ ಇದು ಹೊಸ ಆಯಾಮ ನೀಡಿದೆ. 

ಬಾಲಿವುಡ್‌ ನಟಿ ಹಾಗೂ ನಿರ್ಮಾಪಕಿ ತಾರಾ ಶರ್ಮಾ ಅವರು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ತಮ್ಮ ಮುದ್ದಾದ ಮಕ್ಕಳೊಂದಿಗೆ ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ನಡೆದು ಅವರು ಪುಳಕಿತರಾದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು