ಹವ್ಯಾಸಿಯ ಪಕ್ಷಿ ಮೋಹ

7
ಹವ್ಯಾಸ

ಹವ್ಯಾಸಿಯ ಪಕ್ಷಿ ಮೋಹ

Published:
Updated:

ಕಾರ್ಗಿಲ್ ಬಿಸಿನೆಸ್ ಸರ್ವಿಸ್ ಕಂಪನಿಯ ಅಕೌಂಟಿಂಗ್ ವಿಭಾಗದ ಪ್ರೋಸೆಸ್ ಮುಖ್ಯಸ್ಥ ರಕ್ಷಿತ್ ಎ. ಜಕಾತಿ ಪಕ್ಷಿ ಮೋಹಿ. ವೃತ್ತಿಪರ ಛಾಯಾಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಪಕ್ಷಿಗಳ ಮನಸೆಳೆಯುವ ಫೋಟೊಗಳಿಗೆ ಫಿದಾ ಆಗಿ ಅವುಗಳ ಹಿಂದೆ ಬಿದ್ದವರು ಅವರು.

ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಕೊರಳಿಗೆ ಕ್ಯಾಮೆರಾ ನೇತ್ಹಾಕಿಕೊಂಡು ನಗರ ಸುತ್ತುವ ಜಕಾತಿ ಅವರಿಗೆ, ಹವ್ಯಾಸಿಯಾಗಿಯೇ ಫೋಟೊಗ್ರಫಿಯಲ್ಲಿ ಹೆಸರು ಮಾಡುವ ತುಡಿತ. ನಗರದಲ್ಲಿ ಪಕ್ಷಿಗಳು ಹೆಚ್ಚಾಗಿ ಸಿಗುವ ಜಾಗದತ್ತ ಬಿಡುವಿನ ವೇಳೆ ಹೆಜ್ಜೆ ಹಾಕುವ ಅವರು ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಕಾದು ತಮ್ಮ ಕ್ಯಾಮೆರಾದಲ್ಲಿ ಹಕ್ಕಿಗಳನ್ನು ಸೆರೆಹಿಡಿದಿದ್ದಾರೆ. ಅವರ ಆ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಓವರ್ ಟು ಜಕಾತಿ...

‘ಇನ್‌ಸ್ಟಾಗ್ರಾಂ’ನಲ್ಲಿ ನನ್ನ ಸ್ನೇಹಿತರದ್ದು ಕೆಲವೊಂದಿಷ್ಟು ಗುಂಪುಗಳಿವೆ. ಅದರಲ್ಲಿ ವೃತ್ತಿಪರ ಛಾಯಾಗ್ರಹಕರೂ ಇದ್ದಾರೆ. ಅವರು ಕ್ಯಾಮೆರಾದಲ್ಲಿ ಸೆರೆಹಿಡಿದ ಹಕ್ಕಿಗಳ ಚಿತ್ರಗಳನ್ನು ಹಾಗೂ ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅವೆಲ್ಲವನ್ನೂ ನೋಡಿ, ಅವರಂತೆಯೇ ಛಾಯಾಗ್ರಹಕನಾಗಬೇಕು ಎಂಬ ಆಸೆ ನನ್ನಲ್ಲಿ ಚಿಗುರೊಡೆಯಿತು.

ಮನೆ–ಕಚೇರಿ ಸುತ್ತಮುತ್ತ ಕಾಣುವ ಪಕ್ಷಿಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಆರಂಭಿಸಿದೆ. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು.

ಬೆಂಗಳೂರಿನಲ್ಲಿ ಸಾಕಷ್ಟು ಕೆರೆಗಳು ಹಾಗೂ ಸುಂದರವಾದ ಸ್ಥಳಗಳಿವೆ. ಅಲ್ಲೆಲ್ಲ ಬೇರೆ ಬೇರೆ ಪ್ರಭೇದದ ಹಕ್ಕಿಗಳು ಕಾಣಸಿಗುತ್ತವೆ. ಆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಸ್ನೇಹಿತರ ಸಲಹೆ ಮೇರೆಗೆ ಗುಣಮಟ್ಟದ ಕ್ಯಾಮೆರಾ ಖರೀದಿಸಿ, ಚಿತ್ರಗಳನ್ನು ಯಾವ ರೀತಿ ಸೆರೆಹಿಡಿಯಬೇಕು ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಪೂರ್ವಸಿದ್ಧತೆ ಬಗ್ಗೆ ಅವರಿಂದ ಕೇಳಿ ತಿಳಿದುಕೊಂಡೆ.

ಫೋಟೊಗ್ರಫಿ ನನಗೆ ‘ಸ್ಟ್ರೆಸ್‌ ಬಸ್ಟರ್’
ಬರ್ಡ್ ಫೋಟೊಗ್ರಫಿ ನನಗೆ ಅತಿದೊಡ್ಡ ‘ಸ್ಟ್ರೆಸ್‌ ಬಸ್ಟರ್’. ಬೆಳಿಗ್ಗೆಯಿಂದ ರಾತ್ರಿ ವರೆಗೆ ಕೆಲಸ ಮಾಡಿ ಸುಸ್ತಾಗಿರುತ್ತೇವೆ. ಬಿಡುವಿನ ವೇಳೆ ಪ್ರಕೃತಿಯೊಂದಿಗೆ ಬೆರೆತರೆ ಒತ್ತಡ ಕಡಿಮೆಯಾಗುತ್ತದೆ. ನಮ್ಮನ್ನು ನಾವು ಮತ್ತಷ್ಟು ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಲು ಅದು ಅನುಕೂಲ. ಹಕ್ಕಿಗಳ ಬಗ್ಗೆ ಹಾಗೂ ಕ್ಯಾಮೆರಾ ಸೆಟ್ಟಿಂಗ್ಸ್ ಬಗ್ಗೆ ಒಂದಿಷ್ಟು ತಿಳಿದುಕೊಂಡರೆ ಫೋಟೊಗ್ರಫಿ ವೇಳೆ ಅದು ಸಹಾಯಕ್ಕೆ ಬರುತ್ತದೆ. 

ಫೋಟೊಗ್ರಫಿಯಲ್ಲಿ ತೊಡಗಿಕೊಂಡ ಬಳಿಕ ಹಕ್ಕಿಗಳು ನನ್ನ ಒಳ ಮನಸ್ಸಿಗೆ ವಿಶಿಷ್ಟವಾಗಿ ಕಾಣಿಸುತ್ತಿವೆ. ಪ್ರಕೃತಿಗೂ, ನನಗರಿವಿಲ್ಲದೇ ಮತ್ತಷ್ಟು ಹತ್ತಿರವಾಗತೊಡಗಿದ್ದೇನೆ. ಪ್ರತಿ ಪಕ್ಷಿಗಳ ವರ್ತನೆ ಬಗ್ಗೆ ತಿಳಿಯುವ ತುಡಿತ ಹೆಚ್ಚುತ್ತಿದೆ. ಈಗೀಗ, ಯಾವುದೇ ಪಕ್ಷಿಯ ಚಿಲಿಪಿಲಿ ಕಿವಿಗೆ ಬಿದ್ದ ಕೂಡಲೇ ಓಹ್ ಇದು ಇಂತಹದ್ದೇ ಪಕ್ಷಿಯ ಸದ್ದು ಎಂದು ಗುರುತಿಸುತ್ತಿದ್ದೇನೆ.

‘ಜೇನುಹಿಡುಕನಿಗೆ ದಿನಗಟ್ಟಲೆ ಕಾದೆ’
‘ಕನಕಪುರ ರಸ್ತೆ ಬದಿಯಿರುವ ವ್ಯಾಲಿ ಸ್ಕೂಲ್‌ ಪಕ್ಕದಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಿ ಬೇರೆ ಬೇರೆ ಪ್ರಭೇದದ ಹಕ್ಕಿಗಳು ಇವೆ. ಜೇನು ಹುಳುಗಳನ್ನು ತಿಂದೇ ಜೀವನ ಸಾಗಿಸುವ ಹಕ್ಕಿ ಜೇನುಹಿಡುಕವೂ ಸಹ ಅಲ್ಲಿ ಕಾಣಸಿಗುತ್ತದೆ. ಅದು ಸಾಮಾನ್ಯವಾಗಿ ಒಂದೇ ಕಡೆಹೆಚ್ಚು ಸಮಯ ಕೂರುವುದಿಲ್ಲ’ ಎನ್ನುತ್ತಾರೆ ರಕ್ಷಿತ್ ಎ. ಜಕಾತಿ.

‘ಜೇನು ಹುಳ ಬೆನ್ನತ್ತಿ ಜೇನುಹಿಡುಕ ಹೋದಂತೆ ನಾನು ಆ ಹಕ್ಕಿಯ ಹಿಂದೆ ಹೋದೆ. ಆ ಅರಣ್ಯ ಪ್ರದೇಶದಲ್ಲಿನ ಬರುಡಾದ ರೆಂಬೆ ಕೊಂಬೆಗಳ ಮೇಲೆ ಜೇನು ಹಿಡುಕ ಕೂರುವುದನ್ನು ಗಮನಿಸಿ,  ಸಮೀಪದಲ್ಲೇ ಟ್ರೈಪಾಡ್ ಇಟ್ಟು ಅದಕ್ಕೆ ಕ್ಯಾಮೆರಾ ಅಳವಡಿಸಿದೆ.’

‘ಸೂರ್ಯ ಆಗಷ್ಟೇ ಉದಯಿಸಿತೊಡಗಿದ. ಹಸಿರಿನ ನಡುವೆ ಎಳೆಬಿಸಿಲು ತೂರಿಕೊಂಡು ಬರುತ್ತಿತ್ತು. ಫೋಟೊ ಕ್ಲಿಕ್ಕಿಸಲು ಸೂಕ್ತವಾದ ಸಮಯ ಅದು. ಆ ವಾತಾವರಣ ಮನಸಿಗೆ ಮುದ ನೀಡುತ್ತಿತ್ತು. ಅದೇ ಸಮಯಕ್ಕೆ ಜೋಡಿ ಜೇನುಹಿಡುಕಗಳು ಹಾರಿಬಂದು ಕೊಂಬೆಯ ಮೇಲೆ ಕೂತಿದ್ದವು. ಸುಂದರವಾದ ಪ್ರಕೃತಿಯ ಸೊಬಗಿಗೆ ಮೈಮರೆತಿದ್ದರಿಂದ ಅವು ಬಂದದ್ದನ್ನು ಗಮನಿಸಲಾಗಲಿಲ್ಲ. ಅವುಗಳು ಕಣ್ಣಿಗೆ ಬಿದ್ದ ಕೂಡಲೇ ಕ್ಯಾಮೆರಾ ಕ್ಲಿಕ್ಕಿಸಲು ಮುಂದಾದೆ. ಇನ್ನೇನು ಅವುಗಳ ಮುದ್ದಾಟದ ದೃಶ್ಯ ಸೆರೆಹಿಡಿಯಬೇಕು ಎನ್ನುವಷ್ಟರಲ್ಲಿ ಅವು ಹಾರಿ ಹೋದವು.’ 

‘ಆ ಬಳಿಕ ಗಂಟೆಗಟ್ಟಲೆ ಅವುಗಳಿಗಾಗಿ ಕಾದುಕುಳಿತೆ. ಕಾದು ಕಾದು ಬೇಸರವಾಯಿತು. ಆ ಹಕ್ಕಿಗಳು ಮತ್ತೆ ಕಾಣಿಸಲಿಲ್ಲ. ಅವು ಮತ್ತೆ ಬರುತ್ತವೆ ಎಂಬ ಭರವಸೆ ಮೇರೆಗೆ ಕಾದು ಕುಳಿತೆ. ಹಸಿವಾಗಿತ್ತು. ಆದರೂ ಊಟ ಮಾಡಲು ಮನಸ್ಸಾಗಲಿಲ್ಲ. ಊಟ ಮಾಡುವ ವೇಳೆ ಅವು ಬಂದುಬಿಟ್ಟರೆ ಎಂಬ ಆತಂಕ. ಕೊನೆಗೂ ಮತ್ತೆ ಜೋಡಿಯಾಗಿಯೇ ಬಂದ ಜೇನುಹಿಡುಕಗಳು ಕೊಂಬೆಯೊಂದರ ಮೇಲೆ ಕೂತವು. ಫೋಟೊ ಕ್ಲಿಕ್ಕಿಸಿದೆ. ಆದರೆ, ಮೊದಲು ಕಂಡ ಮುದ್ದಾಟದ ದೃಶ್ಯ ಸಿಗಲಿಲ್ಲ. ಒಂದರೆ ಗಳಿಗೆಯ ಮೈಮರೆವು ಒಂದು ಚಂದದ ಚಿತ್ರ ಮಿಸ್‌ ಮಾಡಿತು ಎನ್ನುವ ಭಾವ ಮಾತ್ರ ಸ್ಥಾಯಿಯಾಗಿ ಉಳಿದೇಹೋಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

*

‘ಜೇನುಹಿಡುಕನಿಗೆ ದಿನಗಟ್ಟಲೆ ಕಾದೆ’
ಕನಕಪುರ ರಸ್ತೆ ಬದಿಯಿರುವ ವ್ಯಾಲಿ ಸ್ಕೂಲ್‌ ಪಕ್ಕದಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಿ ಬೇರೆ ಬೇರೆ ಪ್ರಭೇದದ ಹಕ್ಕಿಗಳು ಇವೆ. ಜೇನು ಹುಳುಗಳನ್ನು ತಿಂದೇ ಜೀವನ ಸಾಗಿಸುವ ಹಕ್ಕಿ ಜೇನುಹಿಡುಕವೂ ಸಹ ಅಲ್ಲಿ ಕಾಣಸಿಗುತ್ತದೆ. ಅದು ಸಾಮಾನ್ಯವಾಗಿ ಒಂದೇ ಕಡೆ ಹೆಚ್ಚು ಸಮಯ ಕೂರುವುದಿಲ್ಲ ಎನ್ನುತ್ತಾರೆ ರಕ್ಷಿತ್ ಎ. ಜಕಾತಿ.

‘ಜೇನು ಹುಳ ಬೆನ್ನತ್ತಿ ಜೇನುಹಿಡುಕ ಹೋದಂತೆ ನಾನು ಆ ಹಕ್ಕಿಯ ಹಿಂದೆ ಹೋದೆ. ಆ ಅರಣ್ಯ ಪ್ರದೇಶದಲ್ಲಿನ ಬರುಡಾದ ರೆಂಬೆ ಕೊಂಬೆಗಳ ಮೇಲೆ ಜೇನು ಹಿಡುಕ ಕೂರುವುದನ್ನು ಗಮನಿಸಿ,  ಸಮೀಪದಲ್ಲೇ ಟ್ರೈಪಾಡ್ ಇಟ್ಟು ಅದಕ್ಕೆ ಕ್ಯಾಮೆರಾ ಅಳವಡಿಸಿದೆ.’

‘ಸೂರ್ಯ ಆಗಷ್ಟೇ ಉದಯಿಸಿತೊಡಗಿದ. ಹಸಿರಿನ ನಡುವೆ ಎಳೆಬಿಸಿಲು ತೂರಿಕೊಂಡು ಬರುತ್ತಿತ್ತು. ಫೋಟೊ ಕ್ಲಿಕ್ಕಿಸಲು ಸೂಕ್ತವಾದ ಸಮಯ ಅದು. ಆ ವಾತಾವರಣ ಮನಸಿಗೆ ಮುದ ನೀಡುತ್ತಿತ್ತು. ಅದೇ ಸಮಯಕ್ಕೆ ಜೋಡಿ ಜೇನುಹಿಡುಕಗಳು ಹಾರಿಬಂದು ಕೊಂಬೆಯ ಮೇಲೆ ಕೂತಿದ್ದವು. ಸುಂದರವಾದ ಪ್ರಕೃತಿಯ ಸೊಬಗಿಗೆ ಮೈಮರೆತಿದ್ದರಿಂದ ಅವು ಬಂದದ್ದನ್ನು ಗಮನಿಸಲಾಗಲಿಲ್ಲ. ಅವುಗಳು ಕಣ್ಣಿಗೆ ಬಿದ್ದ ಕೂಡಲೇ ಕ್ಯಾಮೆರಾ ಕ್ಲಿಕ್ಕಿಸಲು ಮುಂದಾದೆ. ಇನ್ನೇನು ಅವುಗಳ ಮುದ್ದಾಟದ ದೃಶ್ಯ ಸೆರೆ ಹಿಡಿಯಬೇಕು ಎನ್ನುವಷ್ಟರಲ್ಲಿ ಅವು ಹಾರಿ ಹೋದವು.’ 

‘ಆ ಬಳಿಕ ಗಂಟೆಗಟ್ಟಲೆ ಅವುಗಳಿಗಾಗಿ ಕಾದುಕುಳಿತೆ. ಕಾದು ಕಾದು ಬೇಸರವಾಯಿತು. ಆ ಹಕ್ಕಿಗಳು ಮತ್ತೆ ಕಾಣಿಸಲಿಲ್ಲ. ಅವು ಮತ್ತೆ ಬರುತ್ತವೆ ಎಂಬ ಭರವಸೆ ಮೇರೆಗೆ ಕಾದು ಕುಳಿತೆ. ಹಸಿವಾಗಿತ್ತು. ಆದರೂ ಊಟ ಮಾಡಲು ಮನಸ್ಸಾಗಲಿಲ್ಲ. ಊಟ ಮಾಡುವ ವೇಳೆ ಅವು ಬಂದುಬಿಟ್ಟರೆ ಎಂಬ ಆತಂಕ. ಕೊನೆಗೂ ಮತ್ತೆ ಜೋಡಿಯಾಗಿಯೇ ಬಂದ ಜೇನುಹಿಡುಕಗಳು ಕೊಂಬೆಯೊಂದರ ಮೇಲೆ ಕೂತವು. ಫೋಟೊ ಕ್ಲಿಕ್ಕಿಸಿದೆ. ಆದರೆ, ಮೊದಲು ಕಂಡ ಮುದ್ದಾಟದ ದೃಶ್ಯ ಸಿಗಲಿಲ್ಲ. ಒಂದರೆ ಗಳಿಗೆಯ ಮೈಮರೆವು ಒಂದು ಚಂದದ ಚಿತ್ರ ಮಿಸ್‌ ಮಾಡಿತು ಎನ್ನುವ ಭಾವ ಮಾತ್ರ ಸ್ಥಾಯಿಯಾಗಿ ಉಳಿದೇಹೋಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !