ಈ ಮೀನಿಗೆ ಏನೂ ಕಾಣಿಸದು!

7

ಈ ಮೀನಿಗೆ ಏನೂ ಕಾಣಿಸದು!

Published:
Updated:
 ಬ್ಲೈಂಡ್‌ಫಿಶ್ (ಕುರುಡು ಮೀನು)

ಆಕರ್ಷಕ ಬಣ್ಣ ಮತ್ತು ಆಕಾರದಿಂದ ಗಮನ ಸೆಳಯುವ ಹಲವು ಮೀನುಗಳಿವೆ ಅವುಗಳಲ್ಲಿ ಬ್ಲೈಂಡ್‌ಫಿಶ್ (ಕುರುಡು ಮೀನು) ಕೂಡ ಒಂದು. ನೋಡಲು ಸುಂದರವಾಗಿದ್ದರೂ ಇದಕ್ಕೆ ಯಾವ ವಸ್ತುಗಳನ್ನೂ ಗುರುತಿಸಲು ಆಗುವುದಿಲ್ಲ.

ವಿಚಿತ್ರವೆಂದರೆ, ಇದು ಮರಿಯಾಗಿದ್ದಾಗ ದೃಷ್ಟಿ ಶಕ್ತಿ ಚೆನ್ನಾಗಿಯೇ ಇರುತ್ತದೆ. ಆದರೆ ಬೆಳೆದಂತೆಲ್ಲಾ ದೃಷ್ಟಿ ಮಂದವಾಗಿ ಕುರುಡು ಮೀನಾಗುತ್ತದೆ. ಹೀಗಾಗಿಯೇ ಇದಕ್ಕೆ ಕುರುಡು ಮೀನು ಎಂದು ಕರೆಯುತ್ತಾರೆ.

ಹೇಗಿರುತ್ತದೆ?

ಇದರ ದೇಹವು ತಿಳಿ ಕೆಂಪು ಗುಲಾಬಿ ಬಣ್ಣದ ತೆಳುವಾದ ಚರ್ಮದಿಂದ ಕೂಡಿರುತ್ತದೆ. ಚರ್ಮವು ಕಣ್ಣುಗಳನ್ನು ಸಂಪೂರ್ಣ ಮುಚ್ಚಿರುತ್ತದೆ. ನೀಳ ದೇಹ ಹೊಂದಿದ್ದು, ನಾಲ್ಕು ಮೃದುವಾದ ತಿಳಿ ಬೂದು ಬಣ್ಣದ ರೆಕ್ಕೆಗಳನ್ನು ಹೊಂದಿದೆ. ಬಾಯಿ ಅಗಲವಾಗಿರುತ್ತದೆ. 

ಎಲ್ಲೆಲ್ಲಿವೆ ?

ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ದೇಶಗಳ ಸಾಗರ, ನದಿ, ಸರೋವರ, ಕೆರೆಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ವರ್ತನೆ ಮತ್ತು ಜೀವನ ಕ್ರಮ

ಈಜುವ ಸಾಮರ್ಥ್ಯ ಕಡಿಮೆ. ಈಜುವಾಗ ಇದರ ತಲೆಯ ಎಡ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತದೆ.  ಅಂಕು ಡೊಂಕಾಂಗಿ ಈಜುವುದರಿಂದ ಈಜುವ ಸಮಯದಲ್ಲಿ ಕುಣಿದಾಡುತ್ತಿರುವಂತೆ ಭಾಸವಾಗುತ್ತದೆ.

ಸಿಹಿ ಮತ್ತು ಉಪ್ಪು ನೀರಿನ ಎರಡೂ ಪ್ರದೇಶಗಳಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯವಿರುತ್ತದೆ.

ಸ್ಪರ್ಶ ಸಂವೇದನೆ ಉತ್ತಮವಾಗಿರುತ್ತದೆ. ನೀರಿನ ಬುಗ್ಗೆಗಳನ್ನು ಮೂಡಿಸಿ, ಆ ಬುಗ್ಗೆಗಳ ಕಂಪನಗಳ ಆಧಾರದ ಮೇಲೆ ಮುಂದಕ್ಕೆ ಈಜುತ್ತದೆ. ಗುಂಪುಗಳನ್ನು ಹೊರತು ಪಡಿಸಿ ಒಂಟಿಯಾಗಿರುವ ಸಂದರ್ಭಗಳಲ್ಲಿ ಬಂಡೆಗಳ ನಡುವೆ ಕಾಲ ಕಳೆಯುತ್ತದೆ.

ಕಣ್ಣುಗಳು ಇಲ್ಲದಿರುವುದರಿಂದ ಇದು ತನ್ನ ದೇಹದ ಸ್ಪರ್ಶ ಸಂವೇದನೆ ಮೂಲಕವೇ ಮುಂದಿರುವ ವಸ್ತು, ಜಲಚರಗಳನ್ನು ಗ್ರಹಿಸುತ್ತದೆ. ಸದಾ ಕತ್ತಲಿರುವ ಪ್ರದೇಶಗಳಲ್ಲಿ ವಾಸಿಸುತ್ತದೆ.

ನೀರಿನ ಒತ್ತಡ ಮತ್ತು ಕಂಪನಗಳನ್ನು ತಿಳಿದುಕೊಂಡು ತನ್ನ ಚಲನೆಯನ್ನು ಬದಲಾಯಿಸುತ್ತದೆ. ಇದರ ದೇಹವು ಜಿಡ್ಡಿನಿಂದ ಕೂಡಿರುವುದರಿಂದ ಅಷ್ಟು ಸುಲಭವಾಗಿ ಪರಭಕ್ಷಕ ಮೀನುಗಳಿಗೆ ಸಿಗುವುದಿಲ್ಲ.

ಆಹಾರ

ಇದು ಮಿಶ್ರಹಾರಿಯಾಗಿದ್ದು, ಸಣ್ಣ ಮೀನು, ಪಾಚಿ ಮತ್ತು ಲಾರ್ವಾಗಳನ್ನು ಸೇವಿಸುತ್ತದೆ. ದೃಷ್ಟಿ ಇಲ್ಲದಿರುವುದರಿಂದ ಆಹಾರ ಹುಡು
ಕಲು ಕಷ್ಟಪಡುತ್ತದೆ.

ಸಂತಾನೋತ್ಪತ್ತಿ 

ಮೊಟ್ಟೆಗಳನ್ನು ನೀರಿನ ಆಳದಲ್ಲಿ ಬಂಡೆಗಳ ಕೆಳಗೆ ಇಡುತ್ತದೆ. ಒಂದು ಬಾರಿಗೆ ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಇದರ ಮೊಟ್ಟೆಗಳು ಮರಿಯಾಗುವ ಸಂದರ್ಭದಲ್ಲಿ ಕಣ್ಣುಗಳನ್ನು ಹೊಂದಿರುತ್ತವೆ. ಆದರೆ ಬೆಳೆದಂತೆಲ್ಲಾ ಕಣ್ಣುಗಳ ಮೇಲೆ ಪೊರೆಗಳು ಮೂಡಿ ದೃಷ್ಟಿ ಕಳೆದುಕೊಳ್ಳುತ್ತವೆ.

ದೇಹದ ಉದ್ದ: 3 ರಿಂದ 4 ಇಂಚು 

ಜೀವಿತಾವಧಿ: 2 ರಿಂದ 3 ವರ್ಷ

ಬರಹ ಇಷ್ಟವಾಯಿತೆ?

 • 21

  Happy
 • 2

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !