ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆಯಂತೆ ಕಾಣುವ ಜಪಾನೀಸ್ ಸೆರೋ

Last Updated 29 ಡಿಸೆಂಬರ್ 2018, 11:07 IST
ಅಕ್ಷರ ಗಾತ್ರ

ಪ್ರಪಂಚದಲ್ಲಿ ವಿಭಿನ್ನ ದೇಹದ ಆಕಾರ ಮತ್ತು ಜೀವನ ಶೈಲಿಂದ ಗಮನ ಸೆಳೆಯುವ ಹಲವು ಪ್ರಾಣಿ–ಪಕ್ಷಿ ಪ್ರಭೇದಗಳ್ನು ಕಾಣಬಹುದು. ಅಂಥವುಗಳಲ್ಲಿ ಒಂದು ಈ ಜಪಾನೀಸ್ ಸೆರೋ. ಇದರ ವೈಜ್ಞಾನಿಕ ಹೆಸರು ಕ್ಯಾಪ್ರಿಕಾರ್ನಿಸ್ ಕ್ರಿಸ್ಪಸ್ (Capricornis crispus). ಇದನ್ನು ಕಮೋಶಿಕ ಎಂದೂ ಕರೆಯುತ್ತಾರೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಮೆಲ್ನೋಟಕ್ಕೆ ಮೇಕೆಯಂತೆ ಕಾಣುವ ಜಿಂಕೆಯ ಪ್ರಭೇದದ ಪ್ರಾಣಿ ಸೆರೋ. ಬೊವಿಡೇ ಕುಟುಂಬಕ್ಕೆ ಸೇರಿರುವ ಇದರ ದೇಹವು ಬಿಳಿ, ಕಂದು, ಬೂದು ಮತ್ತು ಕಪ್ಪು ಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ದೇಹದಾದ್ಯಂತ ದಟ್ಟವಾದ ಕೂದಲು ಬೆಳೆದಿರುತ್ತದೆ. ಇದು ಚಳಿಯಿಂದ ರಕ್ಷಿಕೊಳ್ಳಲು ಸಹಾಯಕವಾಗುತ್ತದೆ. ಗಿಡ್ಡದಾದ ಬಾಲವನ್ನು ಹೊಂದಿದ್ದು, ಕತ್ತಿನ ಭಾಗದಲ್ಲಿ ಉದ್ದವಾಗಿ ಕೂದಲು ಗಡ್ಡದಂತೆ ಬೆಳೆದಿರುತ್ತದೆ. ಹೆನ್ಣು ಮತ್ತು ಗಂಡು ಎರಡೂ ಪ್ರಾಣಿಗಳ ತಲೆಯ ಮೇಲೆ ಪುಟ್ಟ ಕೊಂಬುಗಳು ಬೆಳೆದಿರುತ್ತವೆ.

ಎಲ್ಲೆಲ್ಲಿವೆ?

ಇದು ಜಪಾನ್‌ ಉತ್ತರ ಭಾಗದ ಹೊನ್‌ ಷು, ಕ್ಯುಷು, ಹೊಕೈಡೊ ಪ್ರಾಂತ್ಯದ ಅರಣ್ಯಗಳು ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಆಹಾರ

ಇದು ಸಸ್ಯಾಹಾರಿ ಪ್ರಾಣಿಯಾಗಿದೆ. ಹುಲ್ಲು, ವಿವಿಧ ಬಗೆಯ ಸಸ್ಯಗಳ ಎಲೆಗಳು, ಹಣ್ಣುಗಳು ತಿನ್ನುತ್ತದೆ.

ವರ್ತನೆ ಮತ್ತು ಜೀವನ ಕ್ರಮ

ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಇದು ಹಗಲು ಮತ್ತು ರಾತ್ರಿಯ ವೇಲೆಯಲ್ಲೂ ಚಟುವಟಿಕೆಯಿಂದ ಕೂಡಿರುತ್ತದೆ. ಕಾಡಿನಲ್ಲಿ ಗ್ರಂಥಿಗಳು ಉತ್ಪಾದಿಸುವ ಸುವಾಸನೆಯುಕ್ತ ದ್ರವದಿಂದ ಬಳಸಿಕೊಂಡು ತನ್ನ ಎಲ್ಲೆಯನ್ನು ಗುರುತಿಸಿಕೊಳ್ಳುತ್ತದೆ. ಇದಕ್ಕೆ ಉತ್ತಮವಾದ ದೃಷ್ಟಿ ಸಾಮರ್ಥ್ಯ ಮತ್ತು ವಾಸನೆ ಹಿಡಿಯುವ ಶಕ್ತಿಯನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಸುತ್ತಮುತ್ತಲು ಇದು ವಾಸಿಸುತ್ತದೆ. ಸಂತಾನೋತ್ಪತ್ತಿಗಾಗಿ ಮತ್ತು ಆಹಾರಕ್ಕಾಗಿ ಬಹಳ ದೂರ ವಲಸೆ ಹೊಗುವುದಿಲ್ಲ. ದೈತ್ಯ ತೋಳಗಳು ಮತ್ತು ಕರಡಿಗಳು ಇವುಗಳನ್ನು ಹೆಚ್ಚಾಗಿ ತಿನ್ನುತ್ತವೆ.

ಸಂತಾನೋತ್ಪತ್ತಿ

ಮೇ ನಿಂದ ಸೆಪ್ಟೆಂಬರ್ ತಿಂಗಳ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿದೆ. ಸುಮಾರು 200 ರಿಂದ 230 ದಿಗಳು ಗರ್ಭ ಧರಿಸಿದ ನಂತರ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳು ವಯಸ್ಕ ಹಂತ ತಲುಪವವರೆಗೆ ತಾಯಿ ಪೋಷಣೆಯಲ್ಲಿ ಬೆಳೆಯುತ್ತವೆ. ಇವು ವಯಸ್ಕ ಹಂತಕ್ಕೆ ತಲುಪಲು 3 ವರ್ಷಗಳು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT