ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ಚಿಕ್ಕ ಹಾರಲಾಗದ ಪಕ್ಷಿ ರೈಲ್‌

Last Updated 23 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಫಾಲ್ಕನ್, ಸ್ವಿಫ್ಟ್‌ ನಂತಹ ಪಕ್ಷಿಗಳು ವೇಗವಾಗಿ ಹಾರುವುದಕ್ಕೆ ಹೆಸರುವಾಸಿ. ಆದರೆ ಎಮು, ಕಿವಿಯಂತಹ ಪಕ್ಷಿಗಳಿಗೆ ಹಾರುವ ಸಾಮರ್ಥ್ಯವಿಲ್ಲದಿರುವುದೇ ಒಂದು ವೈಶಿಷ್ಟ್ಯ.

ಈ ರೀತಿ ಹಾರಲಾಗದ ಪಕ್ಷಿ ಪ್ರಭೇಧಗಳು ಕೆಲವು ಇವೆ. ಇವುಗಳಲ್ಲಿ ಅತಿ ಚಿಕ್ಕ ಗಾತ್ರದ ಪಕ್ಷಿ ರೈಲ್. ಇದರ ವೈಜ್ಞಾನಿಕ ಹೆಸರು ಅಟ್ಲಾಂಟೇಸಿಯಾ ರೊಗೆರ್‌ಸಿ (Atlantisia rogersi). ಇದನ್ನು ಅಟ್ಲಾಂಟಿಕ್ ರೈಲ್ ಎಂದೂ ಕರೆಯುತ್ತಾರೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಈವರೆಗೆ ಇದರಲ್ಲಿ 3 ತಳಿಗಳನ್ನು ಗುರುತಿಸಲಾಗಿದೆ. ರ್‍ಯಾಲಿಡೆ ಕುಟುಂಬಕ್ಕೆ ಸೇರಿದ ಇದರ ದೇಹವು ಬೂದು, ಕಂದು ಬಣ್ಣದ ಗರಿಗಳಿಂದ ಆವೃತವಾಗಿದ್ದು, ಇದರ ಕಣ್ಣುಗಳು ಕೆಂಪು ಮತ್ತು ಕೇಸರಿ ಬಣ್ಣದಲ್ಲಿರುತ್ತವೆ. ಕಪ್ಪು ಬಣ್ಣದ ಕೊಕ್ಕು, ಕಾಲುಗಳನ್ನು ಹೊಂದಿದೆ.

ಎಲ್ಲೆಲ್ಲಿವೆ?

1923ರಲ್ಲಿ ಮೊದಲ ಬಾರಿಬ್ರಿಟಿಷ್ ಪಕ್ಷಿತಜ್ಞ ಪೆರಸಿ ಲೋವ್ ಅವರು ಈ ಪಕ್ಷಿ ಪ್ರಭೇದವನ್ನು ಗುರುತಿಸಿದರು. ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿನ ಸೇಂಟ್‌ ಹೆಲೆನಾ ದ್ವೀಪ ಸಮೂಹದ ನಿರ್ಜನ ಪ್ರದೇಶವಾದ ಟ್ರಿಸ್ಟನ್ ಡಿ ಕುನ್‌ಹ ದ್ವೀಪದ ಹುಲ್ಲುಗಾವಲು, ಬಯಲು ಮತ್ತು ಕರಾವಳಿ ತೀರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ವಿವಿಧ ಬಗೆಯ ಹುಳುಗಳು, ಕೀಟಗಳು, ಕಾಳುಗಳನ್ನು ಭಕ್ಷಿಸುತ್ತದೆ.

ವರ್ತನೆ ಮತ್ತು ಜೀವನ ಕ್ರಮ

ಇದು ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಹುಲ್ಲು, ಕಟ್ಟಿಗೆಗಳನ್ನು ಬಳಸಿಕೊಂಡು ನೆಲದಲ್ಲಿ ಗೂಡನ್ನು ನಿರ್ಮಿಸಿಕೊಂಡು ವಾಸಿಸುತ್ತದೆ. ವಯಸ್ಕ ರೈಲ್ ಪಕ್ಷಿಗಳ ಸ್ವಲ್ಪ ಮಟ್ಟಿನ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತವೆ. ಇದು ಇತರ ಪಕ್ಷಿಗಳ ಹಾಗೆ ಆಹಾರವನ್ನು ಹುಡುಕಿಕೊಂಡು, ಸಂತಾನೋತ್ಪತ್ತಿಗಾಗಿ ಇತರೆಡೆ ವಲಸೆ ಹೋಗುವುದಿಲ್ಲ.

ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲೇ ವಾಸಿಸುತ್ತದೆ. ವಾಸಸ್ಥಾನಗಳ ನಾಶ ಮತ್ತು ಅತಿಯಾದ ಬೇಟೆಯಿಂದ ಈ ಪಕ್ಷಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ. ಪ್ರಸ್ತುತ ಕೇವಲ 8,400 ಪಕ್ಷಿಗಳು ಮಾತ್ರ ಉಳಿದಿವೆ.

ಸಂತಾನೋತ್ಪತ್ತಿ

ಅಕ್ಟೋಬರ್‌ನಿಂದ ಜನವರಿ ತಿಂಗಳ ನಡುವಿನ ಸಮಯ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ರೈಲ್ ಪಕ್ಷಿಯು ಒಂದು ಬಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಂದ ಮರಿಗಳು ಹೊರಬಂದಾಗ ಕಪ್ಪು ಬಣ್ಣದಲ್ಲಿರುತ್ತವೆ. ಮರಿಗಳು ವಯಸ್ಕ ಹಂತ ತಲುಪುವವರೆಗೆ ತಾಯಿ ಪಕ್ಷಿಯ ಪೋಷಣೆಯಲ್ಲಿ ಬೆಳೆಯುತ್ತವೆ.

**

ಗಾತ್ರ ಮತ್ತು ತೂಕ

ಉದ್ದ: 15–17 ಸೆಂ.ಮೀ

ತೂಕ:40 ರಿಂದ 37 ಗ್ರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT