ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗಳಿಗೆ ಈಗ ಕೇವಲ ಕೊರೊನಾ ವೈರಸ್‌ನಿಂದಷ್ಟೇ ಅಪಾಯವಿಲ್ಲ: ಉಲ್ಲಾಸ ಕಾರಂತ

Last Updated 7 ಏಪ್ರಿಲ್ 2020, 13:17 IST
ಅಕ್ಷರ ಗಾತ್ರ

ಅಮೆರಿಕಾದ ಬ್ರಾಂಕ್ಸ್‌ ಮೃಗಾಲಯದ ಹುಲಿಯೊಂದರಲ್ಲಿ ಕೋವಿಡ್‌-19 ದೃಢಪಟ್ಟ ನಂತರಜಗತ್ತಿನಲ್ಲಿ ಕೊರೊನಾ ವೈರಸ್‌ ವನ್ಯಪ್ರಾಣಿಗಳನ್ನು, ಅದರಲ್ಲಿಯೂ ವನ್ಯಲೋಕದ ಆಹಾರ ಸರಪಳಿಯಲ್ಲಿ ತುದಿಯಲ್ಲಿರುವ ಹುಲಿಗಳ ಪರಿಸ್ಥಿತಿಯ ಬಗ್ಗೆ ಆತಂಕ ಮೂಡಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಕಾಡುಗಳಲ್ಲಿಹುಲಿಗಳ ಬಗ್ಗೆ ಸುದೀರ್ಘಸಂಶೋಧನೆ ನಡೆಸಿರುವ ಸಂಶೋಧನಾ ಜೀವಶಾಸ್ತ್ರಜ್ಞ ಡಾ.ಕೆ.ಉಲ್ಲಾಸ ಕಾರಂತಈ ಕುರಿತು ಒಂದು ಟಿಪ್ಪಣಿ ಬರೆದಿದ್ದಾರೆ.

---

ವೈಲ್ಡ್‌ಲೈಫ್ ಕನ್ಸರ್‌ವೇಷನ್ ಸೊಸೈಟಿಯಲ್ಲಿ (ಡಬ್ಲ್ಯುಸಿಎಸ್) 30 ವರ್ಷ ಕೆಲಸ ಮಾಡಿ ನಿವೃತ್ತನಾದೆ. ಅಮೆರಿಕದ ಬ್ರಾಂಕ್ಸ್ ಮೃಗಾಲಯವನ್ನು ಇದೇ ಸೊಸೈಟಿ ನಡೆಸುತ್ತಿದೆ. ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೊನಾ ವೈರಸ್ ಬಾಧಿಸುತ್ತಿರುವ ವರದಿ ನೋಡಿದ ನಂತರ ಹಲವು ನೆನಪುಗಳು ನನ್ನ ಮನದಲ್ಲಿ ತೇಲಿಹೋದವು.

ಪ್ರಸಿದ್ಧ ಹುಲಿಗಳ ಪರ್ವತ ಪ್ರದರ್ಶನ,ನಾಡಿಯಾದಂತಹ ಹುಲಿಗಳು ಅದರಲ್ಲಿ ಪ್ರದರ್ಶಿತವಾಗಿದ್ದರ ನೆನಪುಗಳು ಈ ವರದಿಯಿಂದ ಬೆಚ್ಚಗಾದವು. ಮುಖ್ಯವಾಗಿ ಅಲ್ಲಿನ ಪಾಲಕರು, ಪಶುವೈದ್ಯರು ಮತ್ತು ಮೇಲ್ವಿಚಾರಕರ ಸಮರ್ಪಣಾ ಭಾವ ಮೃಗಾಲಯಗಳ ಜಗತ್ತಿನಲ್ಲಿ ಯಾರಿಗೂ ಸರಿಸಾಟಿಯಾಗದು.

ಅದಿರಲಿ, ಭಾರತದ ಕಾಡುಗಳಲ್ಲಿಹುಲಿ ಸಂರಕ್ಷಣೆಯ ದೃಷ್ಟಿಕೋನವನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಈ ವಿಷಯವು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಹುಲಿಗಳ ಮೇಲಿನ ನಿಜವಾದ ಕಾಳಜಿಯಿಂದಲ್ಲ ಎಂದು ನಾನು ನಂಬಿದ್ದೇನೆ.

ನಾನು ವೈರಸ್‌ ಪ್ರಸರಣ ವಿಷಯದಲ್ಲಿ ಪರಿಣಿತನಲ್ಲದಿದ್ದರೂ, ಕೊರೊನಾ ವೈರಸ್‌ ಮನುಷ್ಯರನ್ನು ಒಳಗೊಂಡಂತೆ ಇತರ ಸಸ್ತನಿ, ಪ್ರಭೇದಗಳಿಗೆ ಹರಡಿ, ಅವುಗಳ ಮೇಲೆ ಪರಿಣಾಮ ಬೀರುತ್ತದೆಂದು ದಾಖಲಾಗಿರುವುದು ಎಲ್ಲರಂತೆ ನನಗೂ ತಿಳಿದಿದೆ.

ಸಾಕು ಬೆಕ್ಕುಗಳ ಮೇಲೆ ಈ ನಿರ್ದಿಷ್ಟ ವೈರಸ್ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದ್ದು, ಇದು ಹುಲಿಗಳಿಗೂ ಸಹ ಹರಡಿದರೆ ಅಚ್ಚರಿ ಪಡಬೇಕಿಲ್ಲ.

ಆದಾಗ್ಯೂ ಸಹಿತ, ಕಾಡು ಹುಲಿ ಸಂಖ್ಯೆಯು ಹೆಚ್ಚಿನ ಜನನ ಪ್ರಮಾಣ ಮತ್ತು ಅಧಿಕ ವಾರ್ಷಿಕ ಮರಣ ಪ್ರಮಾಣವನ್ನು ಹೊಂದಿದೆ (ನನ್ನ ಅಧ್ಯಯನದ ಆಧಾರದ ಮೇಲೆ ಶೇ.20ರವರೆಗೆ). ಆ ಕಾರಣ ಕೊರೊನಾ ವೈರಸ್ ಸಂಬಂಧಿತ ಆತಂಕ ಹುಲಿ ಸಂಖ್ಯೆಯ ಕುಸಿತಕ್ಕೆ ಕಾರಣವಾಗುವುದಿಲ್ಲ.

ಕೆಲ ದಶಕಗಳಿಂದ ರೆಬೀಸ್‌, ಕ್ಯಾನಿನ್ ಡಿಸ್ಟಂಪರ್‌ ಸೇರಿದಂತೆ ಮುಂತಾದ ವೈರಸ್‌ ಸಂಬಂಧಿತ ಸೋಂಕುಗಳು ಹುಲಿಗಳ ಮೇಲೆ ದುಷ್ಪರಿಣಾಮ ಬೀರಿವೆ. ಆದರೆ, ಇದು ಹುಲಿಗಳ ಸಂಖ್ಯೆಯ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಿಲ್ಲ.

ಉನ್ನತ ಅಧಿಕಾರಿಗಳು ನೀಡುವ ಅಪ್ರಾಯೋಗಿಕ ಸೂಚನೆಗಳು ಮಾಧ್ಯಮಗಳ ಗಮನ ಸೆಳೆದಿದ್ದು, ಲಾಕ್‌ಡೌನ್‌ನ ಸಂದರ್ಭದಲ್ಲಿ ಹುಲಿಗಳಿಗೆ ಇರುವ ನೈಜ ಅಪಾಯ ಬೇರೆಯೇ ಇದೆ ಎಂದು ನಾನು ಕಂಡುಕೊಂಡಿದ್ದೇನೆ.

ಪಶ್ಚಿಮ ಘಟ್ಟದ ಕೆಲವು ಉತ್ತಮ ಹುಲಿಗಳ ಆವಾಸ ಸ್ಥಾನಗಳಲ್ಲಿ ಕಳ್ಳಬೇಟೆ ಉಲ್ಬಣವಾಗುತ್ತಿದೆ. ಏಕೆಂದರೆ ಲಾಕ್‌ಡೌನ್ ಸಂದರ್ಭದಲ್ಲಿ ಕಾಡುಗಳಲ್ಲಿ ಗಸ್ತು ಮತ್ತು ರಕ್ಷಣಾ ಚಟುವಟಿಕೆಗಳು ಕಡಿಮೆಯಾಗಿವೆ.

ಇತರ ಸಾಮಾಜಿಕ ಅಂಶಗಳು ಸಹ ಹುಲಿಗಳ ಕಳ್ಳತನದ ಬೇಟಿ ಉಲ್ಬಣವಾಗಲು ಕಾರಣವಾಗಿವೆ. 1950 ಮತ್ತು 60 ರ ದಶಕಗಳಲ್ಲಿ ಇದ್ದಂತೆ, ಗ್ರಾಮೀಣ ಭಾಗದ ಕಾರ್ಮಿಕರು ಈಗ ಕಡಿಮೆ ವೇತನ ಪಡೆಯುತ್ತಿದ್ದಾರೆ. ದೇಶಿ ಪ್ರಾಣಿಗಳ ಪ್ರೋಟೀನ್‌ ಮೂಲಗಳಿಂದ ವಂಚಿತರಾಗುತ್ತಿದ್ದಾರೆ. ಇದು ಅವರನ್ನು ಕಾಡು ಪ್ರಾಣಿಗಳ ಮಾಂಸದತ್ತ ಮುಖ ಮಾಡುವಂತೆ ಮಾಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಪೊಲೀಸರು ಬೇರೆ ಕಡೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯಗಳು ಮುಚ್ಚಲ್ಪಟ್ಟಿವೆ. ಈ ಕಾರಣಗಳಿಂದ ಕೊಡಗು ಮತ್ತು ಶಿವಮೊಗ್ಗಕ್ಕೆ ಸಂಬಂಧಿಸಿದ ಇತ್ತೀಚಿನ ವರದಿಗಳು ಹೇಳುವಂತೆ, ಕಳ್ಳ ಬೇಟೆಗಾರರ ಹೊಸ ಜಾಲವೇ ಸೃಷ್ಟಿಯಾಗಿದೆ.

ಈ ಕಳ್ಳ ಬೇಟೆ ಜಾಲವು ಮರುಹುಟ್ಟು ಪಡೆದರೆ, ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಕೊರೊನಾ ಸೋಂಕಿನಿಂದ ಹುಲಿಗಳ ಸಂಖ್ಯೆಯಲ್ಲಿ ಕುಸಿತವಾಗುತ್ತದೆ ಎಂದು ಚಿಂತಿಸುವ ಬದಲು ಹಿರಿಯ ಅಧಿಕಾರಿಗಳು ಮತ್ತು ಸಮೂಹ ಮಾಧ್ಯಮಗಳು ಹುಲಿಗಳ ಸಂರಕ್ಷಣೆಗೆ ಇರುವ ನಿಜವಾದ ಅಪಾಯಗಳ ಕಡೆಗೆಗಂಭೀರವಾಗಿ ಗಮನಹರಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT