ಶನಿವಾರ, ಫೆಬ್ರವರಿ 22, 2020
19 °C

ಭಾರತದಲ್ಲಿ ಚಿರತೆಗಳ ಸಂಖ್ಯೆ ಶೇ 75–90ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಿರತೆ

ಬೆಂಗಳೂರು: ಭಾರತದಲ್ಲಿ ಚಿರತೆಗಳ ಸಂಖ್ಯೆ ಶೇ 75–90ರಷ್ಟು ಇಳಿಕೆಯಾಗಿದ್ದು, ಹುಲಿಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳು ಚಿರತೆಗಳ ರಕ್ಷಣೆಗೂ ಅಗತ್ಯ ಎಂದು ಅಧ್ಯಯನ ಹೇಳಿದೆ. 

ಸೆಂಟರ್‌ ಫಾರ್‌ ವೈಲ್ಡ್‌ಲೈಫ್‌ ಸ್ಟಡೀಸ್ (CWS India) ಮತ್ತು ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ವಿಜ್ಞಾನಿಗಳು ದೇಶದಲ್ಲಿರುವ ಚಿರತೆಗಳ ಕುರಿತು ಅಧ್ಯನ ನಡೆಸಿದ್ದಾರೆ. ದೇಶದಾದ್ಯಂತ ಸಂಗ್ರಹಿಸಲಾದ ಚಿರತೆಗಳ ಮಾದರಿಗಳಿಂದ ಪಡೆದ ವಂಶವಾಹಿ ಮಾಹಿತಿಗಳನ್ನು ಅಧ್ಯಯನಕ್ಕೆ ಒಳಪಡಿಸಿ, ವಲಯವಾರ ಚಿರತೆಗಳ ಸಂಖ್ಯೆ ಮತ್ತು ಪ್ರದೇಶವಾರು ಇಳಿಕೆಯಾಗುತ್ತಿರುವ ಪ್ರಮಾಣ ಕಂಡುಕೊಳ್ಳಲಾಗಿದೆ. 

ಚಿರತೆಗಳ ಮಲ ಸಂಗ್ರಹಿಸುವ ಜತೆಗೆ ಮೈಕ್ರೊಸ್ಯಾಟೆಲೈಟ್‌ ಮಾರ್ಕರ್‌ಗಳ ಮೂಲಕ 56 ಚಿರತೆಗಳನ್ನು ಗುರುತಿಸಿದ್ದಾರೆ. ಆ ಮಾಹಿತಿಯನ್ನು ಈಗಾಗಲೇ ಲಭ್ಯವಿರುವ 143 ಚಿರತೆಗಳ ಮಾಹಿತಿಯೊಂದಿಗೆ ಸೇರಿಸಿದ್ದಾರೆ. ಸುಪ್ರಿಯಾ ಭಟ್‌, ಸುವಂಕರ್‌ ಬಿಸ್ವಾಸ್‌, ಡಾ.ಬಿವಷ್ ಪಾಂಡವ್‌, ಡಾ.ಸಾಮ್ರಾಟ್‌ ಮೊಂಡೊಲ್‌ ಹಾಗೂ ಡಾ.ಕೃತಿ ಕೆ ಕಾರಂತ್‌ ಅಧ್ಯಯನ ನಡೆಸಿದ್ದಾರೆ.

ಪರಿಸರ ಮತ್ತು ವಂಶವಾಹಿಗಳ ಆಧಾರದ ಮೇಲೆ ನಡೆಸಿರುವ ಅಧ್ಯಯನವು ಚಿರತೆಗಳ ಸಂಖ್ಯೆ ಶೇ 75–90ರಷ್ಟು ಇಳಕೆಯಾಗಿರುವುದನ್ನು (120-200 ವರ್ಷಗಳಲ್ಲಿ) ಸೂಚಿಸುತ್ತಿದೆ. 

ಅಧ್ಯನದಿಂದ ತಿಳಿದುಬಂದಿರುವ ಫಲಿತಾಂಶ ಆಸಕ್ತಿದಾಯಕ ಹಾಗೂ ಎಚ್ಚರಿಕೆ ನೀಡುವಂತಿದೆ ಎಂದು ಸಿಡಬ್ಲ್ಯುಸಿ ವಿಜ್ಞಾನಿ ಕೃತಿ ಕಾರಂತ್‌ ಅಭಿಪ್ರಾಯ ಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)