ಶುಕ್ರವಾರ, ನವೆಂಬರ್ 27, 2020
21 °C

ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಆನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೊಳೆಯೂರು ವಲಯ ವನ್ಯಜೀವಿ ಅರಣ್ಯ ವ್ಯಾಪ್ತಿಯ ನಡಾಡಿ ಗ್ರಾಮದ ಬಳಿ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ 13 ವರ್ಷದ ಗಂಡಾನೆಯೊಂದು ಮಂಗಳವಾರ ಮೃತಪಟ್ಟಿದೆ.

ಕಾಡಿನಿಂದ ಹೊರ ಬಂದ ಆನೆ, ಮತ್ತೆ ಕಾಡಿನೊಳಗೆ ಹೋಗಲು ಯತ್ನಿಸಿ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿಕೊಂಡಿದೆ. ಅದರಿಂದ ಪಾರಾಗಲು ಸಾಧ್ಯವಾಗದೆ ಸ್ಥಳದಲ್ಲಿ ಅಸುನೀಗಿದೆ.

ಕೆಲ ವರ್ಷಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿಯೂ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಆನೆಯೊಂದು ಮೃತಪಟ್ಟಿತ್ತು. 

ಪಶುವೈದ್ಯ ಡಾ.ನಾಗರಾಜ್ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಸಹಾಯಕ ಅರಣ್ಯಾಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿ ಪುಟ್ಟರಾಜು ಇದ್ದರು.

‘ನಡಾಡಿ ವ್ಯಾಪ್ತಿಯಲ್ಲಿ ಆನೆಗಳು ಕಾಡಿನಿಂದ ಹೊರ ಹೋಗುವುದು ಮತ್ತು ಬರುವುದು ಸಾಮಾನ್ಯವಾಗಿತ್ತು. ತೀವ್ರ ಮಳೆ ಹಾಗೂ ಕಪ್ಪು ಮಣ್ಣು ಇದ್ದ ಸ್ಥಳವಾಗಿದ್ದರಿಂದ ರೈಲ್ವೆ ಬ್ಯಾರಿಕೇಡ್‌ ದಾಟುವ ಸಂದರ್ಭದಲ್ಲಿ ಆನೆಯ ಕಾಲು ಜಾರಿ ಬಿದ್ದಿದೆ. ಮೇಲೇಳಲು ಸಾಧ್ಯವಾಗದೆ ಮೃತಪಟ್ಟಿದೆ’ ಎಂದು ಸ್ಥಳೀಯ ರೈತ ನಾಗರಾಜು ಹೇಳಿದರು.

ಮೊಳೆಯೂರು ಮತ್ತು ಕೆಲ ಭಾಗಗಳಲ್ಲಿ ಆನೆಗಳು ಆಗಾಗ್ಗೆ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿರುವ ಮತ್ತು ಡಿಕ್ಕಿ ಹೊಡೆಯುತ್ತಿದ್ದ ವಿಡಿಯೊಗಳು ಹರಿದಾಡಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು