ಗುಂಡ್ಲುಪೇಟೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿ.ಪಿ.ರಾಜರತ್ನಂ ಸಭಾಂಗಣದಲ್ಲಿ ಅಡವಿ ಅಲರ್ಟ್ ಫೌಂಡೇಷನ್ ಸಹಯೋಗದಲ್ಲಿ ಐಕ್ಯೂಎಸಿ, ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ‘ಸರ್ಪಮಿತ್ರ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಡವಿ ಅಲರ್ಟ್ ಫೌಂಡೇಷನ್ ಸಂಸ್ಥೆ ಸಂಸ್ಥಾಪಕ ಬೆಂಗಳೂರಿನ ಪವನ್ ಜೋಶಿ, ಸರ್ಪಗಳ ರಕ್ಷಣೆಯ ಮಹತ್ವ ಹಾಗೂ ರಕ್ಷಣೆಯ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾಲೇಜಿನ ಗ್ರಂಥಾಲಯಕ್ಕೆ ಸ್ವಯಂರಚಿತ ಉರಗ ತರಂಗ ಹೊತ್ತಿಗೆ ಕೊಡುಗೆ ನೀಡಿದರು.

ಉರಗ ಪ್ರೇಮಿ ಸ್ನೇಕ್ ಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಿಯೇ ಹಾವುಗಳು ಕಂಡರೂ ಸಂರಕ್ಷಣೆ ಗಾಗಿ ಕೂಡಲೇ ಕರೆ ಮಾಡಲು ತಿಳಿಸಿದರು.

ಉರಗ ಪ್ರೇಮಿ ರಘುರಾಮ್, ಉರಗಗಳ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲ ಆರ್.ಮದನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೋವರ್ಸ್ ಘಟಕದ ಸಂಚಾಲಕ ಎಸ್.ತುಳಸಿರಾಮ್, ರೇಂಜರ್ಸ್ ಘಟಕದ ಸಂಚಾಲಕಿ ದಿವ್ಯಭಾರತಿ, ಐಕ್ಯೂಎಸಿ ಸಂಚಾಲಕ ವಿಜಯಕುಮಾರ್, ರಾಷ್ಟೀಯ ಸೇವಾ ಯೋಜನೆಯ ಸಂಚಾಲಕ ಕೃಷ್ಣಮೂರ್ತಿ, ಅಧ್ಯಾಪಕ ಕಾರ್ಯದರ್ಶಿ ರಮೇಶ್, ಪ್ರೊ.ಮಂಜುನಾಥ್, ಪ್ರೊ.ಮಂಜು, ಅನ್ನಪೂರ್ಣ, ಜ್ಯೋತಿ, ಗ್ರಂಥಪಾಲಕ ಶ್ರೀನಿವಾಸ್ ನಾಯ್ಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-37-1306798750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.