ಹನೂರು: ತಾಲ್ಲೂಕಿನ ಗೋಪಿನಾಥಂ ಜಲಾಶಯದಲ್ಲಿ ಮೂರು ದಿನಗಳಿಂದ ಮಧ್ಯ ವಯಸ್ಕ ಗಂಡು ಕಾಡಾನೆಯೊಂದು ನಿಂತಿದ್ದು ಬಿಸಿಲ ಝಳಕ್ಕೆ ಅಸ್ವಸ್ಥಗೊಂಡಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಗುರುವಾರ ದಿಂದಲೂ ಆನೆ ಜಲಾಶಯದ ಹಿನ್ನೀರಿನಲ್ಲಿ ನಿಂತಲ್ಲೇ ಇದ್ದು ಸಾರ್ವಜನಿಕರು ಜಲಾಶಯದತ್ತ ಬರುತ್ತಿದ್ದಾರೆ. ಆನೆ ಕಾಲಿಗೆ ಗಾಯವಾಗಿದ್ದು ಕುಂಟುತ್ತಾ ನಡೆಯುತ್ತಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.

‘ಮೂರು ದಿನಗಳಿಂದ ಆನೆ ನೀರಿನಲ್ಲಿದೆ ಎಂದರೆ ಆರೋಗ್ಯದಲ್ಲಿ ಸಮಸ್ಯೆಯಾಗಿರಬಹುದು. ಕೂಡಲೇ ಪಶು ವೈದ್ಯರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗುವುದು’ ಎಂದು ಕಾವೇರಿ ವನ್ಯಧಾಮದ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-37-1201816505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.