ಹೂವಿನಹಡಗಲಿ: ‘ಅಭಿವೃದ್ಧಿ ಹೆಸರಲ್ಲಿ ಗಿಡ–ಮರ ಕಡಿಯುವುದು ಸರಿಯಲ್ಲ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ’ ಎಂದು ನಿವೃತ್ತ ಶಿಕ್ಷಕ ಗಣೇಶ ಹವಾಲ್ದಾರ್ ಹೇಳಿದರು.

ತಾಲ್ಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಪರಿವರ್ತನಾ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ಗುಟುಕು ನೀರಿನ ಅರವಟಿಗೆ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಸಿಗದೆ ಸಾವಿಗೀಡಾಗುತ್ತವೆ. ಅವುಗಳ ದಾಹ ನೀಗಿಸಲು ಗಿಡ– ಮರಗಳಲ್ಲಿ ನೀರಿಡಬೇಕು. ಅರಣ್ಯದಂಚಿನಲ್ಲೂ ನೀರು ಸಿಗುವಂತೆ ಮಾಡಬೇಕು. ಪಶು, ಪಕ್ಷಿಗಳಿಗೆ ನೀರಿನ ಅರವಟಿಗೆ ವ್ಯವಸ್ಥೆ ಮಾಡಲು ಶ್ರಮಿಸಬೇಕು’ ಎಂದು ಅವರು ತಿಳಿಸಿದರು.

ಮುಖ್ಯಶಿಕ್ಷಕ ಮಲ್ಲೇಶಪ್ಪ ಮಾತನಾಡಿ, ‘ಪರಿಸರ ಸಂರಕ್ಷಣೆಗೆ ಜನರ ಸಹಕಾರ ಅಗತ್ಯವಾಗಿದೆ. ಬಿಸಿಲ ತಾಪಕ್ಕೆ ಮೂಕ ಪ್ರಾಣಿ, ಪಕ್ಷಿಗಳು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು’ ಎಂದರು.

ಶಿಕ್ಷಕ ದ್ವಾರಕೀಶರೆಡ್ಡಿ, ಕೊಟ್ರೇಶ ಮಾತನಾಡಿದರು. ಲೇಖಕ ಆರ್.ಬಿ. ಗುರುಬಸವರಾಜ, ಎಚ್. ಗುರುಬಸವರಾಜ, ಎಂ. ಲೋಕೇಶ, ಎಚ್. ಕರಿಬಸಪ್ಪ, ನವೀನ ಕೃಷ್ಣ, ರಾಜನಗೌಡ ಪಾಟೀಲ, ಹನುಮಂತಪ್ಪ, ಕೊಟ್ರೇಶ ಹಾವನೂರು, ಎಚ್.ಎಂ. ಶಾಂತಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-25-602179295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.